ತುಮಕೂರು- ಗಾಂಧಿನಗರದ ವಿವಿಧ ರಸ್ತೆಗಳ ಡಾಂಬರೀಕರಣ ಕಾಮಗಾರಿ ಪೂರ್ಣ ಗೊಂಡಿದ್ದು, ಪುಟ್ಪ್ ಪಾತ್ ,ಮನೆಗಳಿಗೆ ರೋಪ್ ನಿರ್ಮಿಸುವ ಕಾರ್ಯ ಚಾಲ್ತಿಯಲ್ಲಿದ್ದು,ಮುಂದಿನ 15 ದಿನದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು 15ನೇ ವಾರ್ಡಿನ ಪಾಲಿಕೆಯ ಸದಸ್ಯೆ ಶ್ರೀ ಮತಿ ಗಿರಿಜಾ ಧನಿಯಕುಮಾರ್ ತಿಳಿಸಿದ್ದಾರೆ.
ಸ್ಮಾರ್ಟ್ ಸಿಟಿ ಇಂಜಿನಿಯರ್ ಗಳು,ಜೊತೆ ಗಾಂಧಿನಗರದಲ್ಲಿ ನಡೆಯುತ್ತಿರುವ ಪುಟ್ ಪಾತ್ ಕಾಮಗಾರಿ ವೀಕ್ಷಿಸಿದ ನಂತರ ಮಾತನಾಡಿದ ಅವರು, ಕಳೆದ ಒಂದುವರೆ ವರ್ಷದಿಂದ ಸಹಕರಿಸಿದ ಬಡಾವಣೆಯ ನಾಗರಿಕರು,ಶಾಸಕರಾದ ಜೋತಿ ಗಣೇಶ್, ಸಂಸದರಾದ ಜಿ.ಎ?.ಬಸವರಾಜು ಅವರುಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ನುಡಿದರು.
ಗಾಂಧಿನಗರದ 9 ರಸ್ತೆಗಳ ಜೊತೆಗೆ, ಹೊಸದಾಗಿ ನಮ್ಮ ನಿರಂತರ ಒತ್ತಾಯದ ಮೇರೆಗೆ 5 ರಸ್ತೆಗಳನ್ನು ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಹೆಚ್ಚುವರಿಯಾಗಿ ಸೇರಿಸಿದ್ದು, ಟೆಂಡರ್ ಹಂತದಲ್ಲಿದೆ. ಒಂದು ಬಾರಿ ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಯಾವ ಕಾರಣ ಕ್ಕು ರಸ್ತೆ ಅಗೆಯಲು ಅವಕಾಶವಿಲ್ಲ .ಅಗತ್ಯ ವಿದ್ದರೆ ಪುಟ್ ಪಾತ್ ನಲ್ಲಿ ಇದಕ್ಕಾಗಿ ಜಾಗ ನೀಡಿದ್ದು, ಅಲ್ಲಿ ಕೆಲಸ ಮಾಡಿಕೊಳ್ಳಬಹುದು.
ಈಗಾಗಲೇ 24*7 ಕುಡಿಯುವ ನೀರು,ಗ್ಯಾಸ್ ಪೈಪ್ ಲೈನ್ ಹಾಗು ವಿದ್ಯುತ್ ಕಾಮಗಾರಿ ಪೂರ್ಣ ಗೊಂಡಿವೆ.ರಸ್ತೆ ಕಾಮಗಾರಿ ಮುಗಿದರೆ ಇಡೀ ಗಾಂಧಿ ನಗರ ಸುಸಜ್ಜಿತ ವಾಗಿ ತಯಾರಾದಂತಾಗುತ್ತದೆ ಎಂದು ಶ್ರೀ ಮತಿ ಗಿರಿಜಾ ಧನಿಯಾಕುಮಾರ್ ತಿಳಿಸಿದರು
ಗಾಂಧಿ ನಗರ ಬಡಾವಣೆ ಯಲ್ಲಿ ನಡೆಯುತ್ತಿರುವ ಕಾಮಗಾರಿಯ ಕುರಿತು ಮಾತನಾಡಿದ ಗುತ್ತಿಗೆದಾರರಾದ ಆರ್.ಎಂ.ಎನ್. ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ಚಲ್ಲದೊರೈಕುಮಾರ್, ನ್ರದ ಎಡಿಬಿ ಎರಿಯಾಗಳಾದ ಚಿಕ್ಕಪೇಟೆ, ಗಾಂಧಿನಗರ,ಎಂ.ಜಿ.ರಸ್ರೆಯ ಬಹುತೇಕ ಕಾಮಗಾರಿಗಳು ಪೂರ್ಣ ಗೊಂಡಿವೆ. ರಸ್ರೆ ಮಧ್ಯದಲ್ಲಿ ಡಕ್ಕಿಂಗ್ ನಿರ್ಮಿಸುತ್ತಿರುವ ಬಗ್ಗೆ ಭವಿಷ್ಯದಲ್ಲಿ ತೊಂದರೆ ಯಾಗಬಹುದು ಎಂಬ ಸಾರ್ವಜನಿಕರ ಹಾಗು ಜನಪ್ರತಿನಿಧಿಗಳ ದೂರಿನ ಹಿನ್ನೆಲೆಯಲ್ಲಿ ರಸ್ತೆಯ ಒಂದು ಬದಿಯಲ್ಲಿ ನಿರ್ಮಿಸಲಾಗುತ್ತಿದೆ. ಮುಂದಿನ 15 ದಿನದಲ್ಲಿ ಗಾಂಧಿನಗರ ಬಡಾವಣೆಯ ಸಂಪೂರ್ಣ ಕಾಮಗಾರಿ ಪೂರ್ಣ ಗೊಳಿಸಲಾಗುವುದು.
ತಕ್ಷಣ ವೇ ಹೊಸದಾಗಿ ಟೆಂಡರ್ ಆಗಿರುವ ಐದು ರಸ್ತೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.ವಾರ್ಡಿನ ಕಾಪೆರ್Çರೇಟ್ ರ್ ಪ್ರತಿದಿನ ಭೇಟಿ ನೀಡಿ ಅಗತ್ಯ ಸಲಹೆ, ಸೂಚನೆ ನೀಡಿದ್ದಾರೆ,ಶಾಸಕರು,ಸಂಸದರು ಸಹ ಗುಣ್ಣಮಟ್ಟದ ಕಾಮಗಾರಿ ನಡೆಸಲು ಸ್ಪಂದಿಸಿದ್ದಾರೆ ಎಂದರು.
ಗಾಂಧಿನಗರ ನಿವಾಸಿ ಪ್ರವೀಣ್ ಮಾತನಾಡಿ ನಮ್ಮ ತಾತನ ಕಾಲದಿಂದಲೂ ಗಾಂಧಿನಗರ ದಲ್ಲಿ ವಾಸವಿದ್ದೇವೆ.ಇಷ್ಟೊಂದು ಗುಣಮಟ್ಟದ ಕಾಮಗಾರಿ ಹಿಂದೆಂದು ನಡೆದಿರಲಿಲ್ಲ.ವಾರ್ಡಿನ ಕಾಪೆರ್Çರೇಟ್ ರ್ ಶ್ರೀ ಮತಿ ಗಿರಿಜಾ ಧನಿಯಕುಮಾರ್ ನಾಗರಿಕರ ಆಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದಾರೆ.ಆರಂಭದಲ್ಲಿ ಕೊಂಚ ತೊಂದರೆ ಯಾಗಿತ್ತು.ಆದರೆ ಗುಣಮಟ್ಟದ ಕಾಮಗಾರಿ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.
ಬಡಾವಣೆಯ ಮತ್ತೊಬ್ಬ ನಾಗರಿಕರಾದ ವಿಶ್ವನಾಥ್ ಮಾತನಾಡಿ, ಗಾಂಧಿನಗರ ಬಡಾವಣೆಯಲ್ಲಿ ಉತ್ತಮ ಕೆಲಸ ನಡೆದಿದೆ.ಇದಕ್ಕಾಗಿ ಈ ವಾರ್ಡಿನ ಕಾಪೆರ್Çರೇಟ್ ರ ,ಶಾಸಕರು,ಸಂಸದರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಈ ವೇಳೆ ಬಡಾವಣೆಯ ನಾಗರಿಕರಾದ ಎಲ್.ಐ.ಸಿ ಮಹೇಶ್, ಇ ಇ ಚನದನವೀರಯ್ಯ, ಆರ್.ಎಂ.ಎನ್. ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ಓಂಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು