breaking news

ತುಮಕೂರಿನಲ್ಲಿ ನಡೆಯುವ ಪತ್ರಕರ್ತರ ಸಮ್ಮೇಳನ ಅರ್ಥಗರ್ಭಿತವಾಗಿರಲಿ : ಶಿವಾನಂದ ತಗಡೂರು

ತುಮಕೂರಿನಲ್ಲಿ ನಡೆಯುವ ಪತ್ರಕರ್ತರ ಸಮ್ಮೇಳನ ಅರ್ಥಗರ್ಭಿತವಾಗಿರಲಿ : ಶಿವಾನಂದ ತಗಡೂರು

ತುಮಕೂರು; ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ತುಮಕೂರು ಇವರ ವತಿಯಿಂದ ಚೊಚ್ಚಲ ಬಾರಿಗೆ ಕಲ್ಪತರು ನಗರಿ ತುಮಕೂರಿನಲ್ಲಿ ರಾಜ್ಯಮಟ್ಟದ ೩೯ನೇ ಪತ್ರಕರ್ತರ ಸಮ್ಮೇಳನವನ್ನು ನಡೆಸಲು ನಿಶ್ಚಯಿಸಿದ್ದು ಈಗಾಗಲೇ ನಿರೀಕ್ಷೆಗೂ ಮೀರಿದ ಸಿದ್ಧತೆಗಳನ್ನ ಕೈಗೊಳ್ಳಲಾಗಿದ್ದು ಕಲ್ಪತರು ನಾಡಿನಲ್ಲಿ ನಡೆಯುವ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಅರ್ಥಗರ್ಭಿತವಾಗಿ ನಡೆಯಬೇಕಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.

ನಗರದ ಎಸ್‌ಎಸ್‌ಐಟಿ ಕಾಲೇಜು ಕ್ಯಾಂಪಸ್ ಆವರಣದ ಸ್ಟೇಪ್ ಬಿಲ್ಡಿಂಗ್ ಸಭಾಂಗಣದಲ್ಲಿ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದ ಕುರಿತಾಗಿ ತುಮಕೂರು ಜಿಲ್ಲಾ ಘಟಕದ ವಿವಿಧ ಉಪ ಸಮಿತಿಗಳ ಸಿದ್ಧತೆ ಮತ್ತು ಕಾರ್ಯವೈಕರಿಗಳ ಬಗ್ಗೆ ಚರ್ಚೆ ನಡೆಸಲು ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು ಶ್ರೇಷ್ಠತೆಗಳಲ್ಲಿ ವಿಶೇಷತೆ ಎನಿಸಿರುವ ತುಮಕೂರು ಜಿಲ್ಲೆಯು ಶೈಕ್ಷಣಿಕ, ಕಲೆ, ಸಾಹಿತ್ಯ, ರಂಗಭೂಮಿ ಸೇರಿದಂತೆ
ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಸಾಧನೆಯನ್ನು ತನ್ನ ಮುಡಿಗೇರಿಸಿಕೊಂಡಿದೆ ಅದೇ ನಿಟ್ಟಿನಲ್ಲಿ ಈ ಬಾರಿ ಇಲ್ಲಿ ನಡೆಯುವ ೩೯ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನವೂ ಕೂಡ ಇತಿಹಾಸದ ಮೈಲಿಗಲ್ಲು ಆಗಲಿದ್ದು ಅದಕ್ಕೆ ತಕ್ಕಂತಹ ಸಿದ್ಧತೆಗಳನ್ನು ಜಿಲ್ಲಾ
ಸಂಘಟನೆ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.

ಉಪಸಮಿತಿಗಳ ಕಾರ್ಯ ಚಟುವಟಿಕೆಗಳು ತೃಪ್ತಿ ತರುವಂತೆ ಇರಬೇಕು ಕಳೆದ ಬಾರಿ ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ಸಮ್ಮೇಳನಕ್ಕೂ ಮೀರಿದ ವಿಶೇಷತೆಗಳನ್ನ ಈ ಬಾರಿ ಕಾಣಲಿದ್ದೇವೆ ಇದಕ್ಕೆ ಅಧ್ಯಕ್ಷರು ಸೇರಿದಂತೆ ಸಂಘದ ಪದಾಧಿಕಾರಿಗಳು ನಿರೀಕ್ಷೆ ಮೀರಿ ಶ್ರಮ ಪಡುತ್ತಿದ್ದಾರೆ ಡಾ ಜಿ ಪರಮೇಶ್ವರ್ ಅವರ ಆಶಯದಂತೆ ಅವರ ಮಾರ್ಗದರ್ಶನದಲ್ಲಿ ಎಸ್ ಎಸ್ ಐ ಟಿ ಕ್ಯಾಂಪಸ್ ಆವರಣದಲ್ಲಿ ಎರಡು ದಿನಗಳ ಕಾಲ
ಸಂಭ್ರಮದ ವಾತಾವರಣ ಸೃಷ್ಟಿಸಲಿದ್ದಾರೆ, ಈ ಸಮ್ಮೇಳನ ಅನೇಕ ಚರ್ಚೆಗಳಿಗೆ ಕಾರಣವಾಗಲಿದೆ, ವಿವಿಧ ಗೋಷ್ಠಿಗಳು ಗಮನ ಸೆಳೆಯಲಿವೆ ಮುಖ್ಯವಾಗಿ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷ ವೈಶಿಷ್ಟತೆಯಿಂದ ಕೂಡಿವೆ ಈ ಬಾರಿ ತುಮಕೂರು ಬ್ರಾಂಡ್
ಹೆಸರಿನಲ್ಲಿ ಸಾಧನೆಗೈದ ವಿವಿಧ ಸಾಧಕರಿಗಳಿಗೆ ಪ್ರಶಸ್ತಿ ಸನ್ಮಾನ ಮಾಡಲಾಗುತ್ತದೆ ಪತ್ರಕರ್ತರ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದ ಜಿಲ್ಲಾ ಸಂಘಟನೆ ಸಮ್ಮೇಳನವನ್ನ ವಿಶೇಷವಾಗಿ ನಡೆಸಿಕೊಡಲಿದೆ ಎಂದು ಭಾವಿಸಿದ್ದೇನೆ ಎಂದು ತಿಳಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚೀನಿ ಪುರುಷೋತ್ತಮ್ ಅವರು ಮಾತನಾಡಿ ತುಮಕೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆಯುವ ಐತಿಹಾಸಿಕ ೩೯ನೇ ಸಮ್ಮೇಳನದ ಯಶಸ್ವಿಗೆ ಉಪ ಸಮಿತಿಯ ಅಧ್ಯಕ್ಷರು ಸದಸ್ಯರು ಪದಾಧಿಕಾರಿಗಳು ಕಾರಣರಾಗಿದ್ದು ನಮ್ಮ ರಾಜ್ಯಾಧ್ಯಕ್ಷರ ಅಪೇಕ್ಷೆಯಂತೆ ಈಗಾಗಲೇ ನಿರೀಕ್ಷೆಗೂ ಮೀರಿದ ಸಿದ್ಧತೆಗಳನ್ನ ಕೈಗೊಳ್ಳಲಾಗಿದೆ ಈ ಬಾರಿ ಕೈಗಾರಿಕೆ ಕೃಷಿ
ಪತ್ರಿಕೋದ್ಯಮ ಸಮಾಜ ಸೇವೆ ಸೇರಿದಂತೆ ವಿವಿಧ ಹಂತಗಳಲ್ಲಿ ಸಾಧನೆಗೈದ ಸಾಧಕರುಗಳಿಗೆ ಕಲ್ಪತರು ರತ್ನ ಎಂಬ ಪ್ರಶಸ್ತಿಯನ್ನು
ಸಮ್ಮೇಳನದ ಭಾಗವಾಗಿ ನೀಡಲಾಗುತ್ತದೆ, ರಾಜ್ಯದ ಮೂಲೆ ಮೂಲೆಗಳಿಂದ ಬರುವ ಪತ್ರಕರ್ತರುಗಳಿಗೆ ಮತ್ತು ಸಾರ್ವಜನಿಕರುಗಳಿಗೆ ಊಟ ವಸತಿ ಮನರಂಜನೆ ಚರ್ಚಾಗೋಷ್ಠಿ, ಸೇರಿದಂತೆ ಇತರೆ ವಿಚಾರಗಳಲ್ಲಿ ಯಾವುದೇ ರೀತಿಯ ಗೊಂದಲವಾಗದAತೆ ನಮ್ಮ ಜಿಲ್ಲಾ ಸಂಘದ ಸದಸ್ಯರುಗಳು ಅವರ ಸೇವೆ ಮಾಡಲು ಕಟಿಬದ್ಧರಾಗಿ ನಿಂತಿದ್ದಾರೆ ಟೌನ್ ಹಾಲ್ ವೃತ್ತದಿಂದ ಎಸ್ ಎಸ್ ಐ ಟಿ ಕ್ಯಾಂಪಸ್ ಅವರಣಕ್ಕೆ ಆಗಮಿಸಲಿರುವ ಮೆರವಣಿಗೆ ವಿಶೇಷತೆಯಿಂದ ಕೂಡಿದೆ ಜನವರಿ ೧೮ ಶನಿವಾರದ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ
ಗಮನ ಸೆಳೆಯದೆ ಸೆಳೆಯಲಿದೆ, ಖ್ಯಾತ ಗಾಯಕಿ ಶಮಿತಾ ಮಲ್ನಾಡ್ ಅವರಿಂದ, ಮ್ಯೂಸಿಕಲ್ ನೈಟ್ಸ್ ಕಾರ್ಯಕ್ರಮ ನಡೆಯಲಿದ್ದು ಇದೇ ರೀತಿಯಾಗಿ ವಿವಿಧ ಕಾರ್ಯಕ್ರಮಗಳು ವಸ್ತು ಪ್ರದರ್ಶನ ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಲಿವೆ ಎಂದು ತಿಳಿಸಿದರು.

ಸಂದರ್ಭದಲ್ಲಿ ವಸತಿ, ಊಟ, ಸಾರಿಗೆ, ಪ್ರಚಾರ, ಸ್ವಯಂ ಸೇವೆ, ಸಾಂಸ್ಕೃತಿಕ, ನೋಂದಣಿ ಸೇರಿದಂತೆ ವಿವಿಧ ಉಪಸಮಿತಿಗಳ ಅಧ್ಯಕ್ಷರುಗಳು ತಾವು ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಸಭೆಗೆ ತಿಳಿಸಿಕೊಟ್ಟರು, ಈ ವೇಳೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಭವಾನಿಸಿಂಗ್, ಪುAಡಲಿಕ ಬಾಳೋಜಿ, ಪ್ರಧಾನ ಕಾರ್ಯದರ್ಶಿಗಳಾದ ಜಿ.ಸಿ. ಲೋಕೇಶ್, ರಾಜ್ಯ ಛಾಯಾಗ್ರಾಹಕ ಶರಣ ಪ್ರಕಾಶ್, ಕಲ್ಬುರ್ಗಿ ಸಂಘದ ಉಪಾಧ್ಯಕ್ಷ ದೇವೇಂದ್ರಪ್ಪ, ತುಮಕೂರು ಕಾನಿಪ ಉಪಾಧ್ಯಕ್ಷರಾದ ಚಿಕ್ಕಿರಪ್ಪ, ತಿಪಟೂರುಕೃಷ್ಣ, ಪ್ರಧಾನ ಕಾರ್ಯದರ್ಶಿ ರಘುರಾಮ್, ರಾಷ್ಟ್ರೀಯ ಮಂಡಳಿ ಸದಸ್ಯರುಗಳಾದ ಸಿದ್ದಲಿಂಗಪ್ಪ, ಅನ್ನು ಫೋಟೋ ಫ್ಲಾಶ್ ಶಾಂತರಾಜು, ಟಿ ಎನ್ ಮಧುಕರ್
ಜಿಲ್ಲಾ ಘಟಕದ ಪದಾಧಿಕಾರಿಗಳು ವಿವಿಧ ಉಪ ಸಮಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು
ಸೇರಿದಂತೆ ಇತರರು ಉಪಸ್ಥಿತರಿದ್ದರು.

Share this post

About the author

Leave a Reply

Your email address will not be published. Required fields are marked *