breaking news

ನಮ್ಮ ನಡೆ, ನುಡಿ, ಆಚಾರ, ವಿಚಾರ ಎಲ್ಲದರ ಮೇಲೆ ಆಯಾಯ ಭಾಗದ ಜನಪದ ಆಚರಣೆಗಳ ಮೇಲೆ ಅವಲಂಬಿತವಾಗಿರುತ್ತವೆ: ಸಿಇಓ ಪ್ರಭು

ನಮ್ಮ ನಡೆ, ನುಡಿ, ಆಚಾರ, ವಿಚಾರ ಎಲ್ಲದರ ಮೇಲೆ ಆಯಾಯ ಭಾಗದ ಜನಪದ ಆಚರಣೆಗಳ ಮೇಲೆ ಅವಲಂಬಿತವಾಗಿರುತ್ತವೆ: ಸಿಇಓ ಪ್ರಭು

ತುಮಕೂರು:ಒರ್ವ ವ್ಯಕ್ತಿ ಪರಿಪೂರ್ಣ ವ್ಯಕ್ತಿತ್ವವನ್ನು ಹೊಂದಲು ನಾಲ್ಕು
ಗೋಡೆಗಳ ಮದ್ಯೆ ಕಲಿಯುವ ಶಿಷ್ಠ ಶಿಕ್ಷಣದ ಜೊತೆಗೆ, ಜಾನಪದಿಂದ
ಕಲಿಯುವ ಮಾನವೀಯ ಮೌಲ್ಯಗಳು ಅಗತ್ಯ ಎಂದು ಜಿಲ್ಲಾ ಪಂಚಾಯಿತಿ ಸಿಇಓ
ಜಿ.ಪ್ರಭು ಅಭಿಪ್ರಾಯಪಟ್ಟಿದ್ದಾರೆ.

ತುಮಕೂರು ವಿವಿ ವಿಜ್ಞಾನ ಕಾಲೇಜಿನ ಸರ್.ಎಂ.ವಿಶ್ವೇಶ್ವರಯ್ಯ
ಸಭಾಂಗಣದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ, ತುಮಕೂರು ವಿವಿ
ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾನಪದದ ನಡೆ, ವಿದ್ಯಾರ್ಥಿಗಳ ಕಡೆ
ಎಂಬ ವಿಚಾರ ಸಂಕಿರಣ, ಜಾನಪದ ಗಾಯಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ
ಮಾತನಾಡುತಿದ್ದ ಅವರು,ಬದುಕಿಬೇಕಾದ ಶೇ೪೫-೫೦ರಷ್ಟು
ಅನುಭವಗಳನ್ನು ಶಿಷ್ಠ ಶಿಕ್ಷಣದಿಂದ ಪಡೆದರೆ, ಶೇ೩೫-೪೦ರಷ್ಟು
ಅಂಶಗಳನ್ನು ನಾವು ಸಮಾಜವನ್ನು ನೋಡುವುದರಿಂದ
ಕಲಿಯುತ್ತೇವೆ.ಆದರೆ ಉಳಿದ ೧೦ರಷ್ಟು ಅಂಶಗಳು ನಮಗೆ
ಜಾನಪದದಿಂದ ಸಿಗುತ್ತವೆ.ನಮ್ಮ ನಡೆ, ನುಡಿ, ಆಚಾರ, ವಿಚಾರ ಎಲ್ಲದರ
ಮೇಲೆ ಆಯಾಯ ಭಾಗದ ಜನಪದ ಆಚರಣೆಗಳ ಮೇಲೆ
ಅವಲಂಬಿತವಾಗಿರುತ್ತವೆ ಎಂದರು.

ಜಗತ್ತಿನ ಬೇರೆ ದೇಶಗಳಿಗೆ ಹೊಲಿಸಿದರೆ ಭಾರತದ ದುಡಿಯವ ವಯಸ್ಸಿನ
ಮಾನವ ಸಂಪನ್ಮೂಲಕ್ಕೆ ಇಡೀ ಪ್ರಪಂಚದಾದ್ಯAತ ಬೇಡಿಕೆ ಇದೆ. ಇದಕ್ಕೆ
ಪ್ರಮುಖ ಕಾರಣ,ಭಾರತೀಯರನ್ನು ಪ್ರಭಾವಿಸಿರುವ ನಮ್ಮ ಸಂಸ್ಕೃತಿ
ಮತ್ತು ಪರಂಪರೆಗಳು,ಐದು ಸಾವಿರದಿಂದ ೧೦ ಸಾವಿರ ವರ್ಷಗಳ
ನಾಗರಿಕತೆಯ ಪರಂಪರೆಯನ್ನು ಹೊಂದಿರುವ ನಾವುಗಳು, ನಮ್ಮ
ಮೂಲ ಬೇರುಗಳನ್ನು ಮರೆತು ಹೊಗುತ್ತಿರುವುದು ವಿಷಾದದ
ಸಂಗತಿಯಾಗಿದೆ.ಐದು ಸಾವಿರ ವರ್ಷಗಳಿಂದ ನಮ್ಮನ್ನಾಳಿದ ರಾಜರುಗಳು,
ಅವರು ಕಲೆ, ಸಾಹಿತ್ಯ, ಸಂಸ್ಕೃತಿ,ವಾಸ್ತುಶಿಲ್ಪಕ್ಕೆ ನೀಡಿದ ಕೊಡುಗೆಗಳನ್ನು
ಜಗತ್ತಿನ ಮುಂದಿಡುವ ಪ್ರಯತ್ನವನ್ನು ನಾವು ಮಾಡಬೇಕಾಗಿದೆ. ಆ
ಮೂಲಕ ನಮ್ಮ ಪೂರ್ವಜನರ ಸಾಧನೆಗಳನ್ನು ಜಗತ್ತಿಗೆ ಪರಿಚಯಿಸಿ,
ಜಗತ್ತಿನ ಬೇರೆ ನಾಗರಿಕತೆಗಿಂತಲೂ ನಾವು ಮೇಲಿದ್ದೇವೆ ಎಂಬ ಸತ್ಯವನ್ನು
ಸಾರಬೇಕಾದ ಅಗತ್ಯವಿದೆ.ಈ ಕೆಲಸವನ್ನು ಯುವಜನರು
ಕೈಗೆತ್ತಿಕೊಳ್ಳಬೇಕು.ಇದಕ್ಕೆ ಇಂದಿನ ಜಾನಪದದ ನಡೆ,ಯುವಜನರ
ಕಡೆ ಎಂಬ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ಸಿಇಓ
ಜಿ.ಪ್ರಭು ನುಡಿದರು.

ಲೇಖಕಿ ಹಾಗೂ ಕರ್ನಾಟಕ ಲೇಖಕಿಯರ ಸಂಘದ ರಾಜ್ಯಾಧ್ಯಕ್ಷೆ
ಡಾ.ಹೆಚ್.ಎಲ್.ಪುಷ್ಪ ಮಾತನಾಡಿ, ಸಂತೋಷವೇ ಜನಪದದ
ಮೂಲ.ಜನಪದವನ್ನು ಮುಂದಿನ ಪೀಳಿಗೆಗೆ ತಲುಪಿಸುವ ವಾರಸುದಾರರು
ನೀವಾಗಬೇಕು.ಹಾಗಾಗಿ ಅಕಾಡೆಮಿ ಇದೇ ರೀತಿಯ ಕಾರ್ಯಕ್ರಮಗಳಲ್ಲಿ ನಾಡಿನ
ಎಲ್ಲ ಪದವಿ ಕಾಲೇಜುಗಳಲ್ಲಿಯೂ ಆಯೋಜಿಸುವ ಮೂಲಕ ನಮ್ಮ ಆದೀಮ
ಸಂಸ್ಕೃತಿಯನ್ನು ಯುವಜನರಿಗೆ ಪರಿಚಯಿಸಲಿ ಎಂಬ ಆಶಯ ವ್ಯಕ್ತಪಡಿಸಿ,
ಜನಪದ ಕೇವಲ ಸ್ಪರ್ಧೆಗಳಿಗಷ್ಟೇ ಸಿಮೀತವಾಗದೆ, ಯುವಜನರ
ಜೀವನದಲ್ಲಿ ಹಾಸು ಹೊಕ್ಕಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಅಕಾಡೆಮಿಯ
ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಇತಿಹಾಸದಲ್ಲಿ ಅನೇಕ ಜನರನ್ನು
ನೋಡಿದ್ದೇವೆ.ಅವರ ಹೆಸರುಗಳ ಇನ್ನೂ ನೂರಾರು ತಲೆಮಾರುಗಳು
ಹೋದರೂ ಜೀವಂತವಿರುತ್ತೇವೆ. ಇದಕ್ಕೆ ಕಾರಣ ಅವರು ಎಂದು ಅವರಿಗಾಗಿ
ಬದುಕಿದವರಲ್ಲ. ಜನರಿಗಾಗಿ ಬದುಕಿದವರು. ಗಾಂಧಿ, ಅಂಬೇಡ್ಕರ್, ಬುದ್ದ, ಬಸವ,
ಕುವೆಂಪು ಇವೆಲ್ಲರೂ ತಮಗಿಂತ ಇತರರ ಸುಖಃದಲ್ಲಿ ತಮ್ಮ
ಸಂತೋಷವನ್ನು ಕಂಡವರು. ನಮ್ಮ ಯುವಜನರಿಗೆ ಎಲ್ಲ ಕ್ರಿಕೆಟ್
ಆಟಗಾರರು, ಚಲನಚಿತ್ರ ನಾಯಕ ಪರಿಚಯವಿದೆ. ಆದರೆ ನಮ್ಮ ತಾತ,
ಮುತ್ತಾತನ ಪರಿಚಯವಿಲ್ಲ. ಕನಿಷ್ಠ ನಾವಾದರೂ ನಾಲ್ಕು ತಲಮಾರು ನಮ್ಮ
ಹೆಸರು ನೆನಪಿಟ್ಟುಕೊಳ್ಳುವಂತೆ ಬದುಕೋಣ. ಇದಕ್ಕೆ ಜನಪದ ನಿಮಗೆ
ಸ್ಪೂರ್ತಿಯಾಗಲಿದೆ ಎಂದರು.

Our actions, words, rituals, thoughts all depend on the folk practices of the respective parts: CEO Prabhu

Share this post

About the author

Leave a Reply

Your email address will not be published. Required fields are marked *