ಸಮಾಜದಲ್ಲಿ ದುಡಿಯುವಜನರ ನ್ಯಾಯಬದ್ದ ಹಕ್ಕು ಭಾದ್ಯತೆಗಳನ್ನು ಪರಿಪಾಲಿಸದೆ ಅನ್ಯಾಯವನ್ನು ಮಾಡುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಹಾಗಾಗಿ ಅನಿವಾರ್ಯವಾಗಿ ಸಂಘಟನೆ ಮತ್ತು ನ್ಯಾಯಕ್ಕಾಗಿ ಪತಿಭಟನೆಗಳು ಬೇಕಾಗಿದೆ ,ಪ್ರತಿಭಟನೆಇಲ್ಲದೆ ಇದ್ದರೆ ಅನ್ಯಾಯದ ಈ ಸಮಾಜ ಜಡ್ಡುಗಟ್ಟಿ- ಕೋಳತು ನಾರುತ್ತದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಚರಾದ ಸೈಯದ್ ಮುಜೀಬ್ ಅಭಿಪ್ರಾಯ ಪಟ್ಟರು.
ನಗರದ ಜನ ಚಳುವಳಿ ಕೇಂದ್ರದಲ್ಲಿ ಸಿಐಟಿಯು – ಕಟ್ಟಡ ಕಾರ್ಮಿಕರ ಫೇಡರೇಶನ್ [ ಸಿ ಡಬ್ಲೂ ಎಫ್ . ಐ ] ಜಂಟಿ ಯಾಗಿ ಅಯೋಜಿಸಿದ್ದ ವಿಶ್ವ ಕಾರ್ಮಿಕ ಸಂಘಟನೆಗಳ ಒಕ್ಕೂಟ [ ಡಬ್ಲೂ. ಎಫ್.ಟಿ.ಯು] 76 ಸಂಸ್ಥಾಪನ ದಿನಾಚರಣೆಯಲ್ಲಿ ಮಾತನಾಡುತ್ತಿದ್ದರು.
ಮುಂದುವರಿದು ಮಾತನಾಡಿದ ಅವರು ಹತ್ತಾರು ಸಂಘಟಣೆಗಳನ್ನು ಕಟ್ಟಿ ತಮ್ಮ ಹಿತ ಕಾಯುಲು , ಸರ್ಕಾರಗಳ ಜೊತೆ ಚೌಕಾಸಿ ಮಾಡುವ ಮಾಲಿಕರು ತಮ್ಮ ಕಾರ್ಮಿಕರು ಸಂಘಟನೆ ಕಟ್ಟಿ ನ್ಯಾಯ ಕೇಳಲು ಹೋರಟ್ರೆ ಕೆಲಸದಿಂದ ಕಿತ್ತ ಹಾಕಿ, ಸುಳ್ಳು ಆರೋಪಗಳಲ್ಲಿ ಸಿಲುಕಿಸಿ ಬಲಿಪಶು ಮಾಡುವುದ ನಿರಂತವಾಗಿದೆ , ಕಾರ್ಮಿಕರಿಗೆ ಸಂಘ ಕಟ್ಟುವ ಹಕ್ಕಿದ್ದರು ಅದು ಅತಿ ಹೆಚ್ಚು ದಾಳಿಗೆ ಒಳಗಾಗಿದೆ ಎಂದು ಅರೋಪಿಸಿದರು.
ಸಭೆಯ ಅರಂಭದಲ್ಲಿ ಪ್ರಸ್ತಾವಿಕ ಮಾತುಗಳನ್ನು ಅಡಿದ ಸಿಐಟಿಯು ತಾ; ಪ್ರಧಾನ ಕಾರ್ಯಧರ್ಶಿ ರಂಗಧಾಮಯ್ಯ ಅವರು ಡಬ್ಲೂ. ಎಫ್.ಟಿ.ಯು ಹುಟ್ಟು ಹಾಗು ಅದರ ಅಶಯಗಳ ಕುರಿತು ಮಾತನಾಡಿದರು.
ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷರಾದ ಬಿ. ಉಮೇಶ್ ಅವರು ಮಾತಮಾಡಿ ನಿರಂತವಾಗಿ ದುಡಿವ ಜನರ , ಹಕ್ಕು ಗಳ ಮೇಲೆ ದಾಳಿ ಮಾಡುತ್ತಿರುವ ಕೇಂದ್ರದ ಮೋದಿ ಸರ್ಕಾರ ಜನತೆ ಐಕ್ಯತೆಯನ್ನು ಮುರಿದು ಧರ್ಮ/ ದೇವರು, ದೆವಸ್ಥಾನ ಎಂದು ಬದುಕಿನ ಪಶ್ನೆಗಳನ್ನು ಮರಿಮಾಚುವ ಕುತಂತ್ರವನ್ನು ಜನ ಅರಿತು ತಕ್ಕ ಪಾಠ ಕಲಿಸ ಬೇಕೆಂದುರು.
ಯುವ ವಕೀಲ ಎಸ್. ಶಿವಣ್ಣ ಅವರು ಮಾತನಾಡಿ ನಿರಂತರವಾಗಿ ದುಡಿವ ಜನರ ಕೂಲಿ ಹೆಚ್ಚಳವಾದೆ ಸಂಕಟಗಳು ಹೆಚ್ಚಿವೆ.ಕೆಲಸ ಕಳೆದು ಕೊಂಡವರು ಸಂಖ್ಯೆ ಸಹ ಹೆಚ್ಚಿದೆ ಸರ್ಕಾರ ಏನು ಮಾಡುತ್ತಿಲ್ಲ ಎಂದುರು.
ಕಟ್ಟಡ ಕಾರ್ಮಿಕ ಸಂಘದ ಕಲಿಲ್ ಅವರು ಮಾತಾಡಿ ನಿರಂತವಾಗಿ ಜೀವನಾಗತ್ಯ ಔಷಧಿಗಳ ಬೇಲೆಗಳ ಏರಿಕೆಯಿಂದ ನಿರಂತರ ವಾಗಿ ಔಷಧಿ ತಿಂದು ಬದುಕ ಬೇಕಾದ ಡಯಾಬಿಟಿಸ್, ಹಾಗು ರಕ್ತದೋತ್ತಡ, ಹೃದಯ, ಕಿಡ್ನಿ, ,… ಸಂಕಟ ಹೇಳ ತೀರದಾಗಿದೆ. ಅದರಲ್ಲು ಹಿರಿಯ ವಯಸ್ಸಿನವರು ತುಂಬ ಕಷ್ಟಪಡುತ್ತಿದ್ದಾರೆ ಸರ್ಕಾರ ಔಷಧಿಗಳ ಬೇಲೆಗಳ ನಿಯಂತಿಸಲು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಕಾರ್ಯಧರ್ಶಿ ಎನ್.ಕೆ. ಸುಬ್ರಮಣ್ಯ ಅವರು ಮಾತನಾಡಿ ಆರೋಗ್ಯ ಕ್ಷೇತ್ರ, ವಿದ್ಯುತ್, …. ಎಲ್ಲಾದರ ಖಾಸಗಿಕರಣ ಮುಂದಿನ ದಿನಗಳಲ್ಲಿ ಸಂಕಟಗಳ ಹೆಚ್ಚಿಸಲಿದೆ, ಬೇಲೆ ಏರಿಕೆ ವಿಪರಿತವಾಗಲಿದೆ ಎಂದುರು.