breaking news

ಜೀವನದಲ್ಲಿ ಹಣದ ಕೊರತೆಯಿದ್ದರೂ ಗುಣದ ಕೊರತೆ ಇರಬಾರದು: ರಂಭಾಪುರಿ ಶ್ರೀ

ಜೀವನದಲ್ಲಿ ಹಣದ ಕೊರತೆಯಿದ್ದರೂ ಗುಣದ ಕೊರತೆ ಇರಬಾರದು: ರಂಭಾಪುರಿ ಶ್ರೀ

ತುಮಕೂರು: ಭರವಸೆ ಎಂಬುದು ಬದುಕಿನ ಜೀವಜಲ. ಅದನ್ನು ಬ
ಬಿಡಬಾರದು. ಬುದ್ಧಿವಂತಿಕೆ ಮತ್ತು ಪರಿಶ್ರಮ
ನಮ್ಮನ್ನು ಎತ್ತರಕ್ಕೆ ಕರೆದುಕೊಂಡು ಹೋಗುತ್ತದೆ. ಆದರೆ ಗುಣ
ನಡವಳಿಕೆ ಕೊನೆಯವರೆಗೂ ಕಾಪಾಡುತ್ತದೆ. ಜೀವನದಲ್ಲಿ
ಹಣದ ಕೊರತೆಯಿದ್ದರೂ ಗುಣದ ಕೊರತೆ ಇರಬಾರದೆಂದು
ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ
ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ಶ್ರೀ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾಭವನದಲ್ಲಿ ಶ್ರೀ
ರಂಭಾಪುರಿ ಜಗದ್ಗುರುಗಳ ಧನುರ್ಮಾಸದ ಇಷ್ಟಲಿಂಗ ಮಹಾಪೂಜಾ
ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು
ಆಶೀರ್ವಚನ ನೀಡಿದರು.
ಬದುಕು ಬದಲಾಗಬೇಕಾದರೆ ಬದುಕುವ ದಾರಿ ಬದಲಾಗಬೇಕು. ಎಲ್ಲಾ ಇದ್ದಾಗ
ನಮ್ಮವರು ಅಂತಾರೆ. ಏನು
ಇಲ ್ಲದಾಗ ಯಾರು ನೀ ಅಂತಾರೆ. ಇದೇ ಜೀವನ. ಗೆದ್ದ ವ್ಯಕ್ತಿಗೆ ಚಪ್ಪಾಳೆ
ಹೊಡೆಯುವವರು ದೊಡ್ಡವರಾಗುವುದಿಲ್ಲ. ಬಿದ್ದ
ವ್ಯಕ್ತಿಯನ್ನು ಕೈ ಹಿಡಿದು ಮೇಲೆತ್ತುವವರು ದೊಡ್ಡವರಾಗುತ್ತಾರೆ.
ಆಧ್ಯಾತ್ಮದ ಅರಿವು ಆದರ್ಶಗಳು ಜೀವನ ವಿಕಾಸಕ್ಕೆ
ಅಡಿಪಾಯ. ಶ್ರೀ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮ
ಸಂವಿಧಾನದಲ್ಲಿ ಕಾಯಕ ಜೀವನದಿಂದ ಬರುವ
ಹಣದಲ್ಲಿ ದಾಸೋಹ ಮಾಡುವ ಉತ್ಕೃಷ್ಟ ವಿಚಾರಗಳನ್ನು ಬೋಧಿಸಿದ್ದಾರೆ.
ವೈಚಾರಿಕತೆಯ ಬಿರುಗಾಳಿಯಲ್ಲಿ ಧಾರ್ಮಿಕ
ಮತ್ತು ಸಾಮಾಜಿಕ ಮೌಲ್ಯಗಳು ನಾಶವಾಗಬಾರದು. ಅರಿತು ಬೆರೆತು
ಬಾಳುವುದು ಜೀವನದ ಶ್ರೇಯಸ್ಸಿಗೆ ಮೂಲವೆಂದರು.


ನೇತೃತ್ವ ವಹಿಸಿದ ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು
ಮಾತನಾಡಿ, ಶ್ರೀ ಜಗದ್ಗುರು ರೇಣುಕಾಚಾರ್ಯರು ವಿಶ್ವಬಂಧುತ್ವದ ಧಾರ್ಮಿಕ
ಮತ್ತು ಸಾಮಾಜಿಕ ಮೌಲ್ಯಗಳು ನಮ್ಮೆಲ್ಲರ ಬಾಳಿಗೆ ನವ ಚೈತನ್ಯ
ತುಂಬುತ್ತವೆ. ದ್ವೇಷ ಅಸೂಯೆ ಮರೆತು ಸಾಮರಸ್ಯದಿಂದ ಬದುಕಲು
ಗುರುವಿನ ಮಾರ್ಗದರ್ಶನ ಅವಶ್ಯಕತೆ ಇದೆ ಎಂದು ನುಡಿದರು.
ಮಾಜಿ ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜ ಸಮಾರಂಭ ಉದ್ಘಾಟಿಸಿ, ಕಣ್ಣು
ಚೆನ್ನಾಗಿದ್ದರೆ ಜಗತ್ತನ್ನು
ಕಾಣಬಹುದು. ನಾಲಿಗೆ ಚೆನ್ನಾಗಿದ್ದರೆ ಇಡೀ ಜಗತ್ತು ನಮ್ಮನ್ನು ನೋಡುತ್ತದೆ.
ವೀರಶೈವ ಧರ್ಮ ಚಿಂತನಗಳು ಬದುಕಿನ
ವಿಕಾಸಕ್ಕಾಗಿ ಇವೆ ಹೊರತು ಅವನತಿಗಲ್ಲ. ಶ್ರೀ ರಂಭಾಪುರಿ ಜಗದ್ಗುರುಗಳ
ಜ್ಞಾನಯಜ್ಞ ನಮ್ಮೆಲ ್ಲರನ್ನು ಸನ್ಮಾರ್ಗಕ್ಕೆ
ಕರೆದೊಯ್ಯಲಿ ಎಂದರು.
ಬೆಳ್ಳಾವಿ ಮಠದ ಕಾರದ ವೀರಬಸವ ಸ್ವಾಮಿಗಳು ವೀರಶೈವ ಧರ್ಮ ಮತ್ತು
ಗುರುವಿನ ಮಹತ್ವ ಕುರಿತು
ಉಪನ್ಯಾಸ ನೀಡಿದರು.

ಡಾ|| ಎಸ್.ಪರಮೇಶ, ಎಂ.ಆರ್.ಹುಲಿನಾಯ್ಕರ್, ಟಿ.ಬಿ.ಶೇಖರ, ಕೆ.ಜಿ.ರುದ್ರಪ್ಪ,
ಜಿ.ಮಲ್ಲಿಕಾರ್ಜುನಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಿ.ವಿ.ಮಹಾದೇವಯ್ಯ, ಎಂ.ಪಿ.ಮಹೇಶ್,
ಜಿ.ಎಸ್.ಲಿAಗರಾಜು, ಮರಿಬಸಪ್ಪ ಎಸ್.ನಾಗರಾಜ, ಪಂಚಾಚಾರ್ಯ ಟ್ರಸ್ಟ್ನ ಕಾರ್ಯದರ್ಶಿ ಭಸ್ಮಾಂಗಿ ರುದ್ರಯ್ಯ,
ಉಪಾಧ್ಯಕ್ಷ ಉಮೇಶಕುಮಾರ್, ಟಿ.ಆರ್.ಅನುಸೂಯ, ನಟರಾಜ, ಓಂಕಾರ ಸ್ವಾಮಿ
ಮೊದಲಾದ ಗಣ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು
ಶುಭ ಹಾರೈಸಿದರು. ಸಮಿತಿಯ ಅಧ್ಯಕ್ಷ ಟಿ.ಆರ್. ಸದಾಶಿವಯ್ಯ ಸ್ವಾಗತಿಸಿದರು.
ಜಿ.ಎಸ್.ಸಿದ್ಧರಾಜು ನಿರೂಪಿಸಿದರು.
ಧನುರ್ಮಾಸದ ಅಂಗವಾಗಿ ಪ್ರಾತಃಕಾಲ ಬಾಳೆಹೊನ್ನೂರು ಶ್ರೀ ರಂಭಾಪುರಿ
ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಭಕ್ತರಿಗೆ ಶುಭ
ಹಾರೈಸಿದರು. ಸಮಾರಂಭದ ನಂತರ ಪ್ರಸಾದ ವಿನಿಯೋಗ ಜರುಗಿತು.
ಕೋಟ್ ಕರ್ತವ್ಯದ ಕಾಲು ದಾರಿ ಕೀರ್ತಿಯ ಹೆದ್ದಾರಿ. ಶ್ರಮ ಬದುಕು ಸಂಪತ್ತಿನ
ಸAವರ್ಧನೆಗೆ ಮೂಲ. ವೀರಶೈವ ಜ್ಞಾನ ಸಂಪತ್ತು ಅಪಾರ. ಅರಿತು ಆದರ್ಶ
ಬದುಕು ಕಟ್ಟಿಕೊಳ್ಳಬೇಕು.-ರೇಣುಕ ಶಿವಾಚಾರ್ಯ ಸ್ವಾಮಿಗಳು, ಎಡೆಯೂರು

Even if there is lack of money in life, there should not be lack of character: Rambhapuri Shri

Share this post

About the author

Leave a Reply

Your email address will not be published. Required fields are marked *