breaking news

ಕ್ರೈಸ್ತ ಸಮುದಾಯದವರು ಕ್ರಿಸ್‌ಮಸ್‌ ಹಬ್ಬವನ್ನು ಆಚರಿಸಿದರು

ಕ್ರೈಸ್ತ ಸಮುದಾಯದವರು ಕ್ರಿಸ್‌ಮಸ್‌ ಹಬ್ಬವನ್ನು ಆಚರಿಸಿದರು

ತುಮಕೂರು- ಕ್ರಿಶ್ಚಿಯನ್ ಸಮುದಾಯದ ಪವಿತ್ರ ಹಬ್ಬವಾದ ಕ್ರಿಸ್‌ಮಸ್
ಹಬ್ಬವನ್ನು ನಗರ ಸೇರಿದತೆ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿAದ
ಆಚರಿಸಲಾಯಿತು.
ನಗರದ ಚರ್ಚ್ ಸರ್ಕಲ್‌ನಲ್ಲಿರುವ ಸಿಎಸ್‌ಐ ವೆಸ್ಲಿ ದೇವಾಲಯ, ಹೊರಪೇಟೆಯ
ಸಂತ ಲೂರ್ದು ಮಾತೆ ದೇವಾಲಯ, ಸಿಎಸ್‌ಐ ಲೇಔಟ್‌ನ ಚರ್ಚ್, ರೈಲ್ವೆ ನಿಲ್ದಾಣ
ರಸ್ತೆಯಲ್ಲಿರುವ ಚರ್ಚ್, ದೇವನೂರು ಚರ್ಚ್, ಸಿರಾಗೇಟ್‌ನಲ್ಲಿರುವ ಟಾಮ್ಲಿಸನ್
ಚರ್ಚ್ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿರುವ ಚರ್ಚ್ಗಳಲ್ಲಿ
ಕ್ರೆöÊಸ್ತ ಬಾಂಧವರು ಬೆಳಿಗ್ಗೆ ೮ ಗಂಟೆಯಿAದ ಸಾಮೂಹಿಕ ಪ್ರಾರ್ಥನೆ
ಸಲ್ಲಿಸಿದರು.


ಕ್ರಿಸ್‌ಮಸ್ ಹಬ್ಬ ಕ್ರೆöÊಸ್ತರೆಲ್ಲರೂ ಬಹಳ ಉತ್ಸುಕತೆಯಿಂದ ಸಂತಸ,
ಸAಭ್ರಮದಿAದ ಆಚರಿಸುವಂತಹ ಹಬ್ಬ. ಕ್ರೆöÊಸ್ತರಿಗೆ ಮೂರು ಹಬ್ಬಗಳು
ಮಹತ್ವದ್ದಾಗಿವೆ. ಕ್ರಿಸ್‌ಮಸ್ ಹಬ್ಬವನ್ನು ಬೆಳಕಿನ ಹಬ್ಬವೆಂದು
ಆಚರಿಸಲಾಗುತ್ತದೆ. ಏಸುಕ್ರಿಸ್ತನು ಬೆಳಕಾಗಿ ಬಂದಿದ್ದಾನೆ. ಹಾಗಾಗಿ ಎಲ್ಲ
ಚರ್ಚ್ಗಳಲ್ಲಿ ಕ್ಯಾಂಡಲ್‌ಗಳನ್ನು ಹಿಡಿದು ಏಸುವಿನ ಬೆಳಕು ನಮ್ಮೆಲ್ಲ
ಸಂಕಷ್ಟವನ್ನು ದೂರ ಮಾಡುತ್ತದೆ ಎಂದು ಹಬ್ಬವನ್ನು ಆಚರಿಸಲಾಗುತ್ತದೆ
ಎಂದರು.


ಡಿಸೆAಬರ್ ಮೊದಲ ದಿನದಿಂದ ಈ ಹಬ್ಬದ ಸಡಗರ ಸಂಭ್ರಮಗಳು
ಆರAಭವಾಗುತ್ತದೆ ಎಂದರು.
ಬಹಳಷ್ಟು ವರ್ಷಗಳ ಹಿಂದೆ ಏಸುಕ್ರಿಸ್ತ ಹುಟ್ಟಿದಾಗ ಅಂದಿನ ಸಾಮಾಜಿಕ,
ಆರ್ಥಿಕವಾದ ಪರಿಸ್ಥಿತಿಗಳು, ರಾಜಕೀಯ, ಧಾರ್ಮಿಕವಾದ ಪರಿಸ್ಥಿತಿಗಳು, ಬಡವರು,
ನಿರ್ಗತಿಕರಿಗೆ ವಿರುದ್ಧವಾಗಿ ದೌರ್ಜನ್ಯ, ಶೋಷಣೆ ಮಾಡುವಂತಹ ಸನ್ನಿವೇಶ
ಇದ್ದಾಗ ಏಸುಕ್ರಿಸ್ತ ಅಂತಹವರ ಪರವಾಗಿ ಸಮಾಜದಲ್ಲಿ ಶಾಂತಿ, ಸಮಾಧಾನ
ತಂದು ದೇವರು ಬಡವರ ಪರ ಇದ್ದಾನೆ ಎಂದು ಸಾರಿ ಹೇಳಿದಂತಹ ಹಬ್ಬ ಇದಾಗಿದೆ
ಎಂದು ಹೇಳಿದರು.


ಕ್ರಿಸ್‌ಮಸ್ ಹಬ್ಬ ಇಡೀ ಮನುಷ್ಯರನ್ನು ರಕ್ಷಣೆಯ ದಾರಿಯಲ್ಲಿ ನಡೆಸಲಿಕ್ಕೆ
ಬಂದAತಹ ಏಸುವಿನ ಆಗಮನವನ್ನು ಸೂಚಿಸುತ್ತದೆ. ಕ್ರಿಸ್ಮಸ್ ಶಾಂತಿ
ಸಮಾಧಾನದ ಹಬ್ಬ. ಶಾಂತಿ ಕಾಪಾಡುವುದೇ ಈ ಹಬ್ಬದ ಸಂದೇಶ ಎಂದರು.

ತುಮಕೂರು ಕ್ಷೇತ್ರದ ಉಪಾಧ್ಯಕ್ಷರಾದ ಗಣಸುಧೀರ್ ಅವರು,
ತುಮಕೂರು ಕ್ಷೇತ್ರಕ್ಕೆ ಒಳಪಡುವ ತುಮಕೂರು ನಗರ, ಗುಬ್ಬಿ,
ಕುಣಿಗಲ್, ತಿಪಟೂರು, ಗೌರಿಬಿದನೂರು, ಚಿಕ್ಕಬಳ್ಳಾಪುರದ ಸರ್ವರಿಗೂ ಕ್ರಿಸ್‌ಮಸ್
ಹಬ್ಬದ ಶುಭಾಶಯ ಕೋರಿ, ಕ್ರಿಸ್‌ಮಸ್ ಹಬ್ಬ ಜಗತ್ತಿನ ಬಹುತೇಕ ಜನರು
ಸಂಭ್ರಮದಿAದ ಆಚರಿಸುವ ಜಾಗತಿಕ ಹಬ್ಬ. ಈ ಹಬ್ಬ ಯಾವುದೇ ಸಂಪ್ರದಾಯ,
ಆಚರಣೆಯಲ್ಲ. ಈ ಹಬ್ಬದ ಪ್ರಧಾನ ವ್ಯಕ್ತಿ ಏಸುಕ್ರಿಸ್ತ.
ಆತನ ಜನನ ಮಹತ್ವದ ಅಡಿಗಿರುವುದು ಜನರೊಂದಿಗೆ ಆತ ಬೆರೆತು ಬಾಳ್ವೆ
ಮಾಡಿರುವುದರಲ್ಲಿ. ಜನರಿಗಾಗಿ ತ್ಯಾಗ ಮಾಡಿರುವ ಆತನ ಆಚರಣೆಯೇ ಈ ಹಬ್ಬದ
ಸಂಕೇತ ಎಂದರು.
ದೇಶ, ರಾಜ್ಯ ಸಮೃದ್ಧಿ, ಸಾಮರಸ್ಯ, ಸಮಾಧಾನ, ಶಾಂತಿಯಿAದ ಸದಾ ಕೂಡಿಸಲಿ
ಎಂದು ಏಸುಕ್ರಿಸ್ತ್ನಲ್ಲಿ ಪ್ರಾರ್ಥಿಸಿ ಹಬ್ಬವನ್ನು ಆಚರಿಸುತ್ತಿದ್ದೇವೆ ಎಂದು ಅವರು
ಹೇಳಿದರು.

Christian community has celebrated of the holy festival Christmas

Share this post

About the author

Leave a Reply

Your email address will not be published. Required fields are marked *