CongressPolitics Public

District Congress Labour Unit | Shradhanjali for Oscar Fernandes

District Congress Labour Unit | Shradhanjali for Oscar Fernandes

ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದಿಂದ ಅಸ್ಕರ್ ಫರ್ನಾಂಡೀಸ್‍ಗೆ ಶ್ರದ್ದಾಂಜಲಿ

ತುಮಕೂರು:ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದವತಿಯಿಂದ ಪಕ್ಷದ ಕಚೇರಿಯಲ್ಲಿಂದು ಇತ್ತೀಚಗೆ ನಿಧನರಾದ ಕೇಂದ್ರದ ಮಾಜಿ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಪರ್ನಾಂಡಿಶ್ ಅವರ ನಿಧನಕ್ಕೆ ಶ್ರದ್ದಾಂಜಲಿ ಸಭೆಯನ್ನು ಏರ್ಪಡಿಸಲಾಗಿತ್ತು.
ಕೆಪಿಸಿಸಿ ಕಾರ್ಮಿಕವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಆರ್.ದಿನೇಶ್, ರಾಜ್ಯ ಕಾರ್ಯದರ್ಶಿ ವಿ.ಎಸ್.ಸೈಯದ್ ದಾದಾಪೀರ್ ಹಾಗೂ ಜಿಲ್ಲಾಧ್ಯಕ್ಷ ಅಬ್ದುಲ್ ರಹೀಮ್ ಅವರ ನೇತೃತ್ವದಲ್ಲಿ ಕಾರ್ಮಿಕ ವಿಭಾಗದ ಪದಾಧಿಕಾರಿಗಳು, ಸದಸ್ಯರುಗಳು ಸೇರಿ,ಅಸ್ಕರ್ ಪರ್ನಾಂಡೀಸ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆಗಲಿದ ನಾಯಕರಿಗೆ ಗೌರವ ಸಮರ್ಪಿಸಿದರು.

ಈ ವೇಳೆ ಮಾತನಾಡಿದ ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಆರ್.ದಿನೇಶ್,ಅಸ್ಕರ್ ಪರ್ನಾಂಡೀಸ್ ಅತ್ಯಂತ ಮುತ್ಸದ್ದಿ ಮತ್ತು ಚಾಣಾಕ್ಷ ರಾಜಕಾರಣ ,ಎಷ್ಟೋ ಸಂದರ್ಭದಲ್ಲಿ ತಮ್ಮ ಬುದ್ದಿವಂತಿಕೆ ಮತ್ತು ರಾಜಕೀಯ ಅನುಭವವನ್ನು ಬಳಸಿಕೊಂಡು ನೀಡಿರುವ ಸಲಹೆ,ಸೂಚನೆಗಳು ಪಕ್ಷದ ಬೆಳವಣ ಗೆಗೆ ಪೂರಕವಾಗಿವೆ.7 ಬಾರಿ ಸಂಸದರಾಗಿ, ಎರಡು ಬಾರಿ ಸಚಿವರಾಗಿ ಅವರು ಮಾಡಿರುವ ಕೆಲಸ ಆಪಾರ, ರಸ್ತೆ, ರೈಲ್ವೆ ಇನ್ನಿತರ ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆ ಆಪಾರ. ಇಂತಹವರನ್ನು ಕಳೆದುಕೊಂಡು ಕಾಂಗ್ರೆಸ್ ಪಕ್ಷ ಬಡವಾಗಿದೆ ಎಂದರು.

ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ವಿ.ಎಸ್.ಸೈಯದ್ ದಾದಾಪೀರ್ ಮಾತನಾಡಿ, ಅಸ್ಕರ್ ಪರ್ನಾಂಡೀಸ್ ಅವರಿಗೆ ಪಕ್ಷದಲ್ಲಿ ಹಿರಿಯರು, ಕಿರಿಯರು ಎಂಬ ಭೇಧ ಭಾವವಿರಲಿಲ್ಲ. ಎಲ್ಲರನ್ನು ಸಮಾನವಾಗಿ ನೋಡುತ್ತಿದ್ದರು, ಅವರ ನೆಡವಳಿಕೆ ಕಿರಿಯರಿಗೆ ಮಾರ್ಗದರ್ಶನದ ರೀತಿ ಇತ್ತು. ಅಧಿಕಾರ ಬಂದಾಗ ಹಿಗ್ಗದೆ, ಅಧಿಕಾರ ಇಲ್ಲದಿದ್ದಾಗ ಕುಗ್ಗದೆ ಸಮಚಿತ್ತದ ವ್ಯಕ್ತಿತ್ವ ಅವರದ್ದು. ಅವರ ಸಾವಿನ ದುಖಃವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ಭಗವಂತ ನೀಡಲಿ ಎಂದರು.
ಇದೇ ವೇಳೆ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಡಾ.ಆನಂದ್, ಜಿಲ್ಲಾಧ್ಯಕ್ಷ ಅಬ್ದುಲ್ ರಹಿಮ್, ಉಪಾಧ್ಯಕ್ಷ ಆದಿಲ್ ಪಾಷ, ಪ್ರಧಾನ ಕಾರ್ಯದರ್ಶಿ ಎಸ್.ಎಂ.ನಿಂಗರಾಜು,ಕಾರ್ಯದರ್ಶಿ ಮುಸ್ತಫಾ ಕಲಿಂ ಪಾಷ, ಸದಸ್ಯರಾದ ಭಾಗ್ಯಜ್ಯೋತಿ, ಸುಮಲತಾ, ಮೇಘನ, ಫರ್ಹಾನಾಖಾನಂ, ಅರುಣ್ ಕುಮಾರ್, ಬಾಬು ಮತ್ತಿತರರು ಉಪಸ್ಥಿತರಿದ್ದರು.

Share this post

About the author

Leave a Reply

Your email address will not be published. Required fields are marked *