ಮಾಜಿ ಶಾಸಕ ಸುರೇಶ್ ಗೌಡರ ಮೇಲೆ ಎಫ್ಐಆರ್ ದಾಖಲು
ತುಮಕೂರು: ಗ್ರಾಮಾಂತರ ಮಾಜಿ ಶಾಸಕ ಬಿ ಸುರೇಶ್ ಗೌಡ ರವರು ಸುಪಾರಿ ಕೊಲೆ ಆರೋಪ ಮಾಡಿರುವುದರ ವಿರುದ್ಧ ಹಾಲಿ ಶಾಸಕ ಡಿಸಿ ಗೌರಿಶಂಕರ್ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುರೇಶ್ ಗೌಡ ರವರು ಮಾಡಿದ್ದ ಆರೋಪ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಗೌರಿಶಂಕರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ ಸುರೇಶ ಗೌಡರವರು ಮಾಡಿರುವ ಆರೋಪ ಶುದ್ಧ ಸುಳ್ಳು.
ಈ ಬಗ್ಗೆ ತನಿಖೆ ನಡೆಸಿ ನಿಜಾಂಶ ಬಯಲು ಮಾಡಿ ಮತ್ತು ನನಗೆ ನಮ್ಮ ಕಾರ್ಯಕರ್ತರಿಗೆ ಭದ್ರತೆ ನೀಡಿ ಎಂದು ಕೇಳಿಕೊಂಡಿದ್ದಾರೆ.
ಈ ಬಗ್ಗೆ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ 120(b),506 ರ ಅಡಿಯಲ್ಲಿ ಮಾಜಿ ಶಾಸಕ ಸುರೇಶ್ ಗೌಡರ ವಿರುದ್ಧ ಎಫ್ಐಆರ್ ದಾಖಲಾಗಿದೆ ತನಿಕ ಕಾರ್ಯ ಮುಂದುವರೆದಿದೆ.