breaking newsPolitics Public

ಮಾಜಿ ಸಚಿವ ಸೊಗಡು ಶಿವಣ್ಣ ಆಪ್ತ ಸಹಾಯಕ ಜಯಸಿಂಹ ರಾವ್ ನಿಧನ

ಮಾಜಿ ಸಚಿವ ಸೊಗಡು ಶಿವಣ್ಣ ಆಪ್ತ ಸಹಾಯಕ ಜಯಸಿಂಹ ರಾವ್ ನಿಧನ
Former Minister Sogadu Shivanna’s close aide Jayasimha Rao passed away

ತುಮಕೂರು:ಮಾಜಿ ಸಚಿವ ಸೊಗಡು ಶಿವಣ್ಣ ಅವರಿಗೆ ನಾಲ್ಕು ಬಾರಿ ಹಾಗೂ ಮಾಜಿ ಶಾಸಕ ಶಫೀ ಅಹಮದ್ ಅವರಿಗೆ ಒಂದು ಬಾರಿ ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದ ಜಯಸಿಂಹರಾವ್ (76) ನಿಧನರಾದರು. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಜಯಸಿಂಹರಾವ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಮೃದು ಸ್ವಭಾವದ ಜಯಸಿಂಹ ಅವರು ಸಮಾಜವಾದದ ಪ್ರತಿಪಾದಕರಾಗಿದ್ದರು ಎಂದು ಹೇಳಲಾಗಿದೆ.ಶ್ರೀಯುತರು ಪತ್ನಿ, ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಜಯಸಿಂಹರಾವ್ ಅವರ ಪಾರ್ಥೀವ ಶರೀರವನ್ನು ನಗರದ ಎಸ್‍ಐಟಿ ಬಳಿ ಇರುವ ಅವರ ಸ್ವಗೃಹದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.

ಸಂತಾಪಜಯಸಿಂಹರಾವ್ ನಿಧನಕ್ಕೆ ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಎಸ್. ಷಫಿಅಹಮದ್ ಸೇರಿದಂತೆ ಅನೇಕರು ತೀವ್ರ ಸಂತಾಪ ಸೂಚಿಸಿದ್ದಾರೆ.

ಮೃತರ ಅಂತ್ಯಕ್ರಿಯೆಯು ನಗರದ ಗಾರ್ಡನ್ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಭಾನುವಾರ ಮಧ್ಯಾಹ್ನದ ನಂತರ ನೆರವೇರಿತು.

Advertisements

Share this post

About the author

Leave a Reply

Your email address will not be published. Required fields are marked *