ತಾಯಿ ಮತ್ತು ಇಬ್ಬರು ಮಕ್ಕಳು ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
ತುಮಕೂರು: ಕೊಡಿಗೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ 26 ವರ್ಷದ ಉಷಾ ಎಂಬ ಮಹಿಳೆಯು ತನ್ನ ಇಬ್ಬರು ಮಕ್ಕಳಾದ ಚಿರಂತ್ ಹಾಗೂ ನಕ್ಷತ್ರಳೊಂದಿಗೆ ನವೆಂಬರ್ 10ರಂದು ಬೆಳಿಗ್ಗೆ ಕಾಣೆಯಾಗಿದ್ದಾಳೆ ಎಂದು ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಣೆಯಾದ ಮಹಿಳೆಯು 5.5 ಅಡಿ ಎತ್ತರ, ಕಂದು ಬಣ್ಣ, ಕೋಲುಮುಖ ಹೊಂದಿದ್ದು, ಬಾಯಿಯ ತುಟಿಯ ಕೆಳಗೆ ಹಳೆಯ ಗಾಯದ ಗುರುತು ಇರುತ್ತದೆ. ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಚೂಡಿದಾರ್, ಕಾಫಿ ಬಣ್ಣದ ಪ್ಯಾಂಟ್ ಹಾಗೂ ವೇಲ್ ಧರಿಸಿದ್ದಳು. ಕನ್ನಡ, ಹಿಂದಿ, ತೆಲುಗು ಭಾಷೆ ಮಾತನಾಡಲು ಬರುತ್ತದೆ.
ಗಂಡು ಮಗು ಚಿರಂತ್ 7 ವರ್ಷ ವಯಸ್ಸು, ತಿಳಿಕೆಂಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಮಾತನಾಡಲು ಬರುತ್ತದೆ. ನೀಲಿ ಅಂಗಿ ಮತ್ತು ನೀಲಿ ಪ್ಯಾಂಟ್ ಧರಿಸಿದ್ದನು.
ಹೆಣ್ಣು ಮಗು ನಕ್ಷತ್ರ 3 ವರ್ಷ ವಯಸ್ಸು, ಕಪ್ಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಮಾತನಾಡಲು ಬರುತ್ತದೆ. ಕಾಫಿ ಬಣ್ಣದ ಫ್ರಾಕ್ ಧರಿಸಿದ್ದಳು.
ಕಾಣೆಯಾದ ತಾಯಿ ಮತ್ತು ಮಕ್ಕಳ ಸುಳಿವು ಸಿಕ್ಕಿದವರು ಕೂಡಲೇ ಮೊ.ಸಂ. 8660911312 / 8693937338ನ್ನು ಸಂಪರ್ಕಿಸಬಹುದಾಗಿದೆ ಎಂದು ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ತಿಳಿಸಿದ್ದಾರೆ.