ತುಮಕೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು ಇಂದು “CIIE CENTER FOR INNOVATION, INCUBATION AND ENTREPRENEURSHIP” ಈ ಕೇಂದ್ರದ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾಯಿತು. ಈ ಕೇಂದ್ರವನ್ನು ಶಾಸಕ ಜಿ.ಬಿ. ಜ್ಯೋತಿಗಣೇಶ್ ಉದ್ಘಾಟಿಸಿದರು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯಲ್ಲಿ ಜ್ಯೋತಿಗಣೇಶ್‍ರವರು ಕಾಲೇಜಿನ ಪದವಿ ಕೇವಲ ಪದವಿಯಾಗಿರದೆ ಹೊಸ ಆವಿಷ್ಕಾರಗಳಿಗೆ ಮುನ್ನುಡಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.
ಈ ಕಾರ್ಯಕ್ರಮದಲ್ಲಿ ಎಂ.ಎಸ್. ಜಯಚಂದ್ರ ಆರಾಧ್ಯರವರು ಗಣ ತಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗಣಕಯಂತ್ರಗಳನ್ನು ಕೊಡುಗೆಯಾಗಿ ನೀಡಿ, ವೃತ್ತಿ ಮಾರ್ಗದರ್ಶನದ ಜೊತೆಗೆ ಸಮಾಜದ ಒಳಿತಿಗಾಗಿ ವಿದ್ಯಾರ್ಥಿಗಳಲ್ಲಿ ಮೂಡುವ ಹೊಸ ಆಲೋಚನೆ ಮತ್ತು ಆವಿಷ್ಕಾರಗಳನ್ನು ಸಾಕಾರ ಮಾಡುವಲ್ಲಿ ಪ್ರೋತ್ಸಾಹ ಮತ್ತು ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಕಾರ್ಯಕ್ರಮವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು ಮತ್ತು ರೋಟರಿ ಕ್ಲಬ್ ಸಿದ್ದರಬೆಟ್ಟ ಇವರ ಸಹಯೋಗದೊಂದಿಗೆ ಜರುಗಿತು. ಈ ಕಾರ್ಯಕ್ರಮದಲ್ಲಿ ಹೆಚ್.ಎನ್.ಶಿವಕುಮಾರ್. ಗಂಗಾಧರಶಾಸ್ತ್ರಿ, ಅಧ್ಯಕ್ಷರು, ಮಂಜುಳ ಆರಾಧ್ಯ ಸದಸ್ಯರು, ರೋಟರಿ ಕ್ಲಬ್,ಸಿದ್ದರಬೆಟ್ಟ, . ಟಿ.ಎಸ್.ಲೋಕೇಶ್, ಕಾರ್ಯದರ್ಶಿ, ರೋಟರಿ ಕ್ಲಬ್,ಸಿದ್ದರಬೆಟ್ಟ, ಶ್ರೀಮತಿ ವಸಂತ ಟಿ.ಡಿ. ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು,ಪ್ರೊ. ತಿಪ್ಪೇಸ್ವಾಮಿ ಜಿ. ಸಹಾಯಕ ಧ್ಯಾಪಕರು,ಮುಖ್ಯಸ್ಥರು, ಅರ್ಥಶಾಸ್ತ್ರ ವಿಭಾಗ, ಪ್ರೊ. ಯೋಗೀಶ್ ಎನ್. ಸಹಾಯಕ ಪ್ರಾಧ್ಯಾಪಕರು, ಮುಖ್ಯಸ್ಥರು, ಗಣ ತಶಾಸ್ತ್ರ ವಿಭಾಗ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮತ್ತು ರೋಟರಿ ಕ್ಲಬ್, ಸಿದ್ದರಬೆಟ್ಟದ ಎಲ್ಲಾ ಅಧಿಕಾರಿಗಳು ಮತ್ತು ಸದಸ್ಯರುಗಳನ್ನು ಸನ್ಮಾನಿಸಲಾಯಿತು.