ತುಮಕೂರು : ಬೆಳ್ಳಾವಿ ಹೋಬಳಿ, ತಿಮ್ಮರಾಜನಹಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ 12 ತಿಂಗಳ ಅವಧಿಗೆ
ಶುಕ್ರವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಬಿ.ಜೆ.ಪಿ. ಬೆಂಬಲಿತ ಓಂಕಾರಸ್ವಾಮಿ.ಎಮ್.ಎನ್.
ಆಯ್ಕೆಯಾದರು.
ಬಹಳ ಕುತೂಹಲಕ್ಕೆ ಕಾರಣವಾಗಿದ್ದ ಚುನಾವಣೆಯಲ್ಲಿ ಸಾಮಾನ್ಯಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ
ಓಂಕಾರಸ್ವಾಮಿ ಹಾಗೂ ಚಂದ್ರಮೌಳಿ ಸ್ಪರ್ಧಿಸಿದ್ದರು. ಒಟ್ಟು 15 ಸದಸ್ಯಬಲ ಹೊಂದಿರುವ ತಿಮ್ಮರಾಜನಹಳ್ಳಿ
ಗ್ರಾಮ ಪಂಚಾಯಿತಿ, ಈ ಪೈಕಿ ಓಂಕಾರಸ್ವಾಮಿ 9 ಮತಗಳನ್ನು ಪಡೆದು ಗೆಲುವು ಸಾದಿಸಿದರು.
ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಕಾರ್ಯನಿರ್ವಹಿಸಿದರು. ಪಕ್ಷದ ಮುಖಂಡರು, ಕಾರ್ಯಕರ್ತರು,
ಗ್ರಾಪಂ ಹಾಲಿ ಮತ್ತು ಮಾಜಿ ಸದಸ್ಯರುಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.