ತುಮಕೂರು: ಈ ತಿಂಗಳ ೧೮ ಮತ್ತು ೧೯ರಂದು ನಗರದಲ್ಲಿ
ನಡೆಯಲಿರುವ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ
ಮಟ್ಟದ ಸಮಾವೇಶ ಬೆಂಬಲಿಸಿ, ಕಾರ್ಯಕ್ರಮದಲ್ಲಿ ಸಕ್ರಿಯವಾಗಿ
ಭಾಗವಹಿಸಲು ವಿವಿಧ ಸಂಘಟನೆಗಳ ಮುಖಂಡರು ತೀರ್ಮಾನ
ಮಾಡಿದ್ದಾರೆ.
ಈ ಸಂಬAಧ ಶುಕ್ರವಾರ ನಗರದಲ್ಲಿ ಸಭೆ ನಡೆಸಿ ತೀರ್ಮಾನ
ತೆಗೆದುಕೊಂಡ ಮುಖಂಡರು, ಸಮ್ಮೇಳನದ ಯಶಸ್ಸಿಗೆ
ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದಾರೆ.
ಜಿಲ್ಲಾ ಕನ್ನಡ ಸೇನೆ ಅಧ್ಯಕ್ಷ ಧನಿಯಾಕುಮಾರ್ ಮಾತನಾಡಿ,
ಸಾರ್ವಜನಿಕರ ಸಮಸ್ಯೆ, ಸಂಕಷ್ಟಗಳಿಗೆ ಧ್ವನಿಯಾಗಿ ಸ್ಪಂದಿಸುವ
ಪತ್ರಕರ್ತರಿಗೆ ಸಮಾಜ ಸ್ಪಂದಿಸಬೇಕು. ಸಮಾಜದ
ಅಂಕುಡೊAಕುಗಳನ್ನು ತಿದ್ದುತ್ತಾ, ಆಡಳಿತವರ್ಗದ
ತಪ್ಪುಗಳನ್ನು ತಿಳಿಸಿ ಸದಾ ಎಚ್ಚರಗೊಳಿಸುವ ಜವಾಬ್ದಾರಿಯುತ
ಕಾರ್ಯ ಮಾಡುತ್ತಿರುವ ಪತ್ರಕರ್ತರಿಗೆ ಸಂಘಟನೆಗಳು
ಬೆAಬಲವಾಗಿ ನಿಲ್ಲಬೇಕು, ಜಿಲ್ಲೆಯ ಎಲ್ಲಾ ಸಂಘಸAಸ್ಥೆಗಳು
ಪತ್ರಕರ್ತರ ಸಮ್ಮೇಳನದ ಯಶಸ್ವಿನಲ್ಲಿ
ಭಾಗಿಯಾಗಬೇಕು ಎಂದು ಧನಿಯಾಕುಮಾರ್ ಮನವಿ
ಮಾಡಿದರು.
![ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಮಟ್ಟದ ಸಮಾವೇಶದಲ್ಲಿ ಭಾಗವಹಿಸಲು ವಿವಿಧ ಸಂಘಟನೆಗಳ ಮುಖಂಡರು ತೀರ್ಮಾನ 2 kannadapara 1](https://infojournalist.in/wp-content/uploads/2025/01/kannadapara-1-1024x683.jpg)
ಸಮ್ಮೇಳನದ ಅಂಗವಾಗಿ ೧೮ರಂದು ಬೆಳಿಗ್ಗೆ ಬಿಜಿಎಸ್ ವೃತ್ತದಿಂದ
ಆರAಭವಾಗುವ ಮೆರವಣಿಗೆಯಲ್ಲಿ ಸಂಘಟನೆಗಳ
ಮುಖAಡರು ಕನ್ನಡ ಬಾವುಟ ಪ್ರದರ್ಶನದೊಂದಿಗೆ ಭಾಗವಹಿಸಿ,
ಮೆರವಣಿಗೆ ಸಾಗುವ ಮಾರ್ಗದಲ್ಲಿ ಸಾರ್ವಜನಿಕರು ರಸ್ತೆಯನ್ನು
ಸ್ವಚ್ಛಗೊಳಿಸಿ, ರಂಗೋಲಿ ಹಾಕಿ, ತೋರಣಕಟ್ಟಿ ಅಲಂಕಾರ
ಮಾಡುವAತೆ ಕೋರಿದರು.
ಈ ವೇಳೆ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ
ರಘುರಾಮ್, ಹಿರಿಯ ಪತ್ರಕರ್ತರಾದ ಹೆಚ್.ಎನ್.ಮಲ್ಲೇಶ್,
ಎಲ್.ಚಿಕ್ಕೀರಪ್ಪ, ಹರೀಶ್‌ಆಚಾರ್ ಅವರಿಗೆ ಸಂಘಟನೆಗಳ ಮುಖಂಡರು
ತಮ್ಮ ನಿರ್ಧಾರ ತಿಳಿಸಿದರು
ರಾಜ್ಯ ರೈತ ಸಂಘದ ಕಾರ್ಯದರ್ಶಿ ಬಸವರಾಜು, ದಸಂಸ
ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ಕನ್ನಡ ಸಂಸ್ಕೃತಿ ವೇದಿಕೆ
ರಾಜ್ಯಾಧ್ಯಕ್ಷ ಕನ್ನಡ ಪ್ರಕಾಶ್, ಅಖಿಲ ಭಾರತ ಅಂಬೇಡ್ಕರ್
ಪ್ರಚಾರ ಸಮತಿ ಜಿಲ್ಲಾಧ್ಯಕ್ಷ ರಾಮಚಂದ್ರರಾವ್, ಸಮಿತಿಯ
ಶಬ್ಬೀರ್ ಅಹ್ಮದ್, ರಫಿಕ್ ಅಹ್ಮದ್, ಕರ್ನಾಟಕ ಸಂಸ್ಕೃತಿ ವೇದಿಕೆ
ರಾಜ್ಯಾಧ್ಯಕ್ಷ ಹೊಸಕೋಟೆ ನಟರಾಜ್, ಅಖಿಲ ಕರ್ನಾಟಕ ಕಾರ್ಮಿಕರ
ಪ್ರಜಾವೇದಿಕೆ ಅಧ್ಯಕ್ಷ ಸತೀಶ್, ಉಪ್ಪಾರ ಸಂಘದ ಅಧ್ಯಕ್ಷ
ಕನಕರಾಜು, ಮುಖಂಡರಾದ ವಿನಯಕುಮಾರ್, ಬೆಸ್ಟೆಕ್ಸ್
ರಾಮರಾಜು, ಸಮಾಜ ಸೇವಕ ನಟರಾಜಶೆಟ್ಟಿ, ಡಾ.ಹೆಚ್.ಬಿ.ಎಂ.ಹಿರೇಮಠ್
ಮೊದಲಾದವರು ಭಾಗವಹಿಸಿದ್ದರು.
The leaders of various organizations have decided to participate in the state level conference of the Association of Working Journalists