breaking newsCrime StoryPolicePolitics Public

ACB officials Raid on Gubbi CS pura Police station | PSI somshekhar escaped

ACB officials Raid on Gubbi CS pura Police station | PSI somshekhar escaped

ACB ಪೊಲೀಸರ ದಾಳಿ: C.S ಪುರ PSI ಪರಾರಿ.

ತುಮಕೂರು: ಲಂಚ ಪಡೆಯುವಾಗಲೇ ಭ್ರಷ್ಟಾಚಾರ ನಿಗ್ರಹದಳ  ಬಲೆಗೆ ಬಿದ್ದಿದ್ದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕು (ಸಿ.ಎಸ್.ಪುರ) ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸೋಮಶೇಖರ್ ಠಾಣೆಯಿಂದ ಓಡಿ ಹೋಗಿದ್ದಾರೆ. ಠಾಣೆಯಿಂದ ಓಡಿ ಹೋಗುತ್ತಿದ್ದ ಅವರನ್ನು ಹಿಡಿಯಲು ಸಾರ್ವಜನಿಕರು ಬೆನ್ನಟ್ಟಿದ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ.

ಪಿಎಸ್ಐ ಸೋಮಶೇಖರ್ ಮತ್ತು ಕಾನ್ಸ್ಟೆಬಲ್ ನಯಾಜ್ ಎಸಿಬಿ ಬಲೆಗೆ ಬಿದ್ದಿದ್ದರು. ಎಸಿಬಿ ಅಧಿಕಾರಿಗಳು ಊಟ ಮಾಡುತ್ತಿದ್ದ ವೇಳೆ ಪಿಎಸ್ಐ ಪೊಲೀಸ್ ಬೈಕ್ ಹತ್ತಿ ಮೊಬೈಲ್ ಫೋನ್ನೊಂದಿಗೆ ಪರಾರಿಯಾದರು. ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಪೊಲೀಸ್ ಠಾಣೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು.

ಈ ವೇಳೆ ಎಸಿಬಿ ಬಲೆಗೆ ಪಿಎಸ್‌ಐ ಸೋಮಶೇಖರ್ ಮತ್ತು ಹೆಡ್ಕಾನ್ಸ್ಟೆಬಲ್ ನಯಾಜ್ ಅಹಮ್ಮದ್ ಅವರ ಬಲೆಗೆ ಬಿದ್ದಿದ್ದರು.ಕೌಟುಂಬಿಕ ಕಲಹದ ವಿಚಾರವಾಗಿ ಸಿ.ಎಸ್ ಪುರ ಠಾಣೆಯಲ್ಲಿ ಚಂದ್ರಣ್ಣ ಎಂಬುವರ ವಿರುದ್ಧ ಕಳೆದ ಅಕ್ಟೋಬರ್ 22 ರಂದು ದೂರು ದಾಖಲಾಗಿತ್ತು.

ಇದನ್ನೇ ದಾಳವಾಗಿಸಿಕೊಂಡು ಪೊಲೀಸರು ಚಂದ್ರಣ್ಣನ ಕಾರು ಮುಟ್ಟುಗೋಲು ಹಾಕಿಕೊಂಡಿದ್ದರು. ಕೋರ್ಟ್ನಲ್ಲಿ ಜಾಮೀನು ಪಡೆದು ಕಾರು ಬಿಡಿಸಿಕೊಳ್ಳಲು ಬಂದಿದ್ದ ಚಂದ್ರಣ್ಣ ಅವರ ಬಳಿ ಕಾರು ಬಿಡಲು ಪಿಎಸ್ಐ  28 ಸಾವಿರಕ್ಕೆ ಹೆಡ್ ಕಾನ್ಸ್ಟೆಬಲ್ ನಯಾಜ್ ಅಹಮದ್ ಮೂಲಕ ಹಣಕ್ಕೆ ಬೇಡಿಕೆಯಿಟ್ಟಿದ್ದರು.

ಈ ಪೈಕಿ ಮೊದಲ ಕಂತಿನಲ್ಲಿ  12 ಸಾವಿರ ಲಂಚವನ್ನು ಪಿಎಸ್ಐ ಪಡೆದುಕೊಂಡಿದ್ದರು. ಉಳಿದ  16 ಸಾವಿರ ಪಡೆಯುವ ವೇಳೆ ಪಿಎಸ್‌ಐ ಎಸಿಬಿ ಬಲೆಗೆ ಬಿದ್ದಿದ್ದರು. ಪಿಎಸ್‌ಐ ಲಂಚ ಕೇಳುತ್ತಿರುವ ಬಗ್ಗೆ ಚಂದ್ರಣ್ಣ ಎಸಿಬಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಎಸಿಬಿ ಇನ್ಸ್ಪೆಕ್ಟರ್ ವಿಜಯಲಕ್ಷ್ಮಿ ನೇತೃತ್ವದಲ್ಲಿ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.

Share this post

About the author

Leave a Reply

Your email address will not be published. Required fields are marked *