ತುಮಕೂರು: ಕೇಂದ್ರ ಸಚಿವರು,ವೀರಶೈವ ಲಿಂಗಾಯಿತ ಸಮುದಾಯದ ಏಕೈಕ ಮಂತ್ರಿಗಳು ಆಗಿರುವ ವಿ.ಸೋಮಣ್ಣ ಅವರನ್ನು ಭಾನುವಾರ
ಬೆಂಗಳೂರಿನಲ್ಲಿ ನಡೆಯುತ್ತಿರುವ ೮೫೨ನೇ ಶ್ರೀಗುರು ಸಿದ್ದರಾಮೇಶ್ವರರ ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸದೆ ಅವಮಾನ ಮಾಡಿದ್ದು,ಇದು ಖಂಡನೀಯ ಎಂದು ಸಮುದಾಯದ ಮುಖಂಡರಾದ ಬಿ.ಬಿ.ಮಹದೇವಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕೇಂದ್ರ ಸರಕಾರದಲ್ಲಿರುವ ವೀರಶೈವ, ಲಿಂಗಾಯಿತ ಸಮುದಾಯದ ಏಕೈಕ ಮಂತ್ರಿ ವಿ.ಸೋಮಣ್ಣ, ಜನಾನುರಾಗಿಗಳು, ಜಾತ್ಯಾತೀತ ವ್ಯಕ್ತಿಗಳಾಗಿರುವ ಅವರನ್ನು ನೊಳಂಬ ವೀರಶೈವ, ಲಿಂಗಾಯಿತ ಸಂಘದವರು
ನಡೆಸುತ್ತಿರುವ ಶ್ರೀಗುರು ಸಿದ್ದರಾಮೇಶ್ವರರ ಜಯಂತಿಗೆ ಅಹ್ವಾನಿಸದೆ.ಇಡೀ ಕರ್ನಾಟಕ ರಾಜ್ಯದಲ್ಲಿರುವ ವಿ.ಸೋಮಣ್ಣ ಅಭಿಮಾನಿಗಳಿಗೂ ಅಪಮಾನ ಮಾಡಲಾಗಿದೆ.ಇವರ ವರ್ತನೆಯ ವಿರುದ್ದ ಮುಂದಿನ ದಿನಗಳಲ್ಲಿ ನೊಳಂಬ ಯುವ ವೇದಿಕೆ ತಕ್ಕ ಉತ್ತರ ನೀಡಲಿದೆ ಎಂದರು.

ಕೇAದ್ರದ ಸಚಿವರಾಗಿ ರಾಜ್ಯಕ್ಕೆ ಅದರಲ್ಲಿಯೂ ತುಮಕೂರು ಜಿಲ್ಲೆಗೆ ಸಾವಿರಾರು ಕೋಟಿ ರೂಗಳ ಯೋಜನೆ ತಂದು, ಜಿಲ್ಲೆಯನ್ನು ಸಮಗ್ರವಾಗಿ
ಅಭಿವೃದ್ದಿ ಪಡಿಸುತಿದ್ದು, ಇದನ್ನು ಸಹಿಸದ ಕೆಲವು ಜನರು, ಪಿತೂರಿ ನಡೆಸಿ, ಸರ್ವ ಧರ್ಮಕ್ಕೂ ಬೇಕಾದ ಸಿದ್ದರಾಮೇಶ್ವರರ ಜಯಂತಿ ಕಾರ್ಯಕ್ರಮಕ್ಕೆ ಅಹ್ವಾನಿಸದಿರುವುದು ಸೋಮಣ್ಣ ಅಭಿಮಾನಿಗಳಿಗೆ ನೋವುಂಟು ಮಾಡಿದೆ.ಕೆಲವರ ಮಾತಿಗೆ ಬೆಲೆ ನೀಡಿ,ವಿ.ಸೋಮಣ್ಣ ಅವರನ್ನು ಕಡೆಗಣಿಸಲಾಗಿದೆ.ನೊಳಂಬ ಸಮುದಾಯಕ್ಕೆ ನಮ್ಮ ನಾಯಕರುಗಳು ಹಲವಾರು ಕೊಡುಗೆ ನೀಡಿದ್ದಾರೆ.ಮುಚ್ಚುವ ಹಂತದಲ್ಲಿದ್ದ ಬೆಂಗಳೂರಿನ ಸಿದ್ದರಾಮಣ್ಣ ಹಾಸ್ಟಲ್‌ಗೆ ಸುಮಾರು ೪೦ ಲಕ್ಷಕ್ಕೂ ಅಧಿಕ ಅನುದಾನ ನೀಡಿ, ಹಾಸ್ಟಲ್ ನಡೆಯುವಂತೆ ಮಾಡಿದ್ದಾರೆ.ಅಲ್ಲದೆ ಅರಸೀಕೆರೆಯಲ್ಲಿ ಪರರ ಪಾಲಾಗಲಿದ್ದ ಭೂಮಿಯನ್ನು ನೊಳಂಬ ಸಮುದಾಯಕ್ಕೆ ಉಳಿಸಿಕೊಟ್ಟಿದ್ದಾರೆ.
ಸೊನ್ನಲಗಿಯಲ್ಲಿ ಸಿದ್ದರಾಮೇಶ್ವರರ ಸಮಾಧಿಯನ್ನು ಲಕ್ಷಾಂತರ ರೂ ಖರ್ಚು ಮಾಡಿ ಅಭಿವೃದ್ದಿ ಪಡಿಸಿ, ಪ್ರವಾಸಿ ಕೇಂದ್ರವನ್ನಾಗಿಸಿದ್ದಾರೆ.ಇAತಹ ಸೋಮಣ್ಣ ನವರನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ೮೫೨ನೇ ಗುರು
ಶ್ರೀಸಿದ್ದರಾಮೇಶ್ವರರ ಜಯಂತಿ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದಿಲ್ಲ.ಹಾಗಾಗಿ ಸಿದ್ದರಾಮೇಶ್ವರ ಜಯಂತಿ ಸಮಿತಿ ಹಾಗೂ
ಸಿದ್ದರಾಮಣ್ಣ ಹಾಸ್ಟಲ್ ಕಮಿಟಿಯನ್ನು ಕೂಡಲೇ ವಿಸರ್ಜಿಸಬೇಕೆಂದು ಅಗ್ರಹಿಸುವುದಾಗಿ ಬಿ.ಬಿ.ಮಹದೇವಯ್ಯ ಹೇಳಿದರು.
ತುಮಕೂರು ಜಿಲ್ಲೆಯ ಕೆಲವರು ನಾನು ಸೋಮಣ್ಣನವರಿಗೆ ಟಿಕೇಟ್ ಕೊಡಿಸಿದೆ, ಗೆಲ್ಲಿಸಿಕೊಂಡು ಬಂದ ಎಂಬ ಮಾತುಗಳನ್ನಾಡುತಿದ್ದಾರೆ. ಇದು
ಸುಳ್ಳು, ಸೋಮಣ್ಣನವರಿಗೆ ಟಿಕೇಟ್ ನೀಡಿ ಸ್ಪರ್ಧೆ ಮಾಡುವಂತೆ ಹೇಳಿದ್ದು ಅಮಿತ್ ಷಾ, ಜೆ.ಪಿ.ನಡ್ಡಾ ಅವರು,ಇದಕ್ಕೆ ಬೆಂಬಲವಾಗಿ ನಿಂತವರು
ಹೆಚ್.ಡಿ.ದೇವೇಗೌಡರು.ಕೆಲವರ ಅಪಪ್ರಚಾರದ ನಡುವೆಯೂ ಸೋಮಣ್ಣನವರ ಜನಪರ ಕಾರ್ಯಗಳನ್ನು ನೋಡಿ,ತುಮಕೂರು ಜಿಲ್ಲೆಯ ಜನರು ಪಕ್ಷಾತೀತವಗಿ ಮತ ನೀಡಿ, ಅತ್ಯಧಿಕ ಮತಗಳಿಂದ ಗೆಲ್ಲಿಸಿಕೊAಡು ಬಂದಿದ್ದಾರೆ.ಅಲ್ಲದೆ ಬಿಜೆಪಿಯೊಂದಿಗೆ ಜೆಡಿಎಸ್ ಕೈಜೋಡಿಸಿದ ಪರಿಣಾಮ ಹೆಚ್ಚಿನ ಗೆಲುವು ಆಗಿದೆ.ಇದಕ್ಕೆ ತಕ್ಕಂತೆ ಸೋಮಣ್ಣ ಅವರು ಕೆಲಸ ಮಾಡುತಿದ್ದಾರೆ.ಇದನ್ನು ಸಹಿಸದೆ ಆತ್ಮಸ್ಥೆöÊರ್ಯ ಕುಗ್ಗಿಸಲು ಮುಂದಾಗಿದ್ದಾರೆ ಎಂದು ದೂರಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಪಂಚಾಕ್ಷರಯ್ಯ ಮಾತನಾಡಿ,ರಾಜ್ಯದಲ್ಲಿ ಸೋಮಣ್ಣ ಅವರು ಎಲ್ಲ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೆಳೆಯುತ್ತಿರುವುದನ್ನು ಸಹಿಸದೆ ಚಾಮರಾಜನಗರ ಮತ್ತು ವರುಣ ಎರಡು ಕಡೆ ನಿಲ್ಲುವಂತಹ ಅನಿವಾರ್ಯತೆ ಸೃಷ್ಟಿಸಿ, ಬೇಕಂತಲೇ ಸೋಲಿಸಿದರು.
ಆದರೆ ತುಮಕೂರಿನ ಜನ ಆ ಕೆಲಸ ಮಾಡಲಿಲ್ಲ.ಯಡಿಯೂರಪ್ಪ ನಂತರ ವಿ.ಸೋಮಣ್ಣ ಸಮುದಾಯದ ನಾಯಕರಾಗಿ ಬೆಳೆಯುತ್ತಿರುವುದನ್ನು
ಸಹಿಸದೆ ಈ ಕೆಲಸ ಮಾಡಲಾಗಿದೆ ಎಂದು ದೂರಿದರು. ಸಿದ್ದರಾಮ ಸೇನೆಯ ಜಿಲ್ಲಾಧ್ಯಕ್ಷ ಹೇಮಂತಕುಮಾರ್ ಮಾತನಾಡಿ,ಸಿದ್ದರಾಮೇಶ್ವರ ಜಯಂತಿ ಕೇಂದ್ರ ಸಮಿತಿ ವಿ.ಸೋಮಣ್ಣನವರಿಗೆ ಮಾತ್ರ ಅಪಮಾನ ಮಾಡಿಲ್ಲ.ಗೋಡೆಕೆರೆ ಸ್ವಾಮೀಜಿಗಳಿಗೂ ಅಪಮಾನ ಮಾಡಿದ್ದಾರೆ. ಈ ಹಿಂದೆ ಮಠ ಮಾನ್ಯಗಳಲ್ಲಿ ನಡೆಯುತ್ತಿದ್ದ ಗುರುಶ್ರೀಸಿದ್ದರಾಮೇಶ್ವರರ ಜಯಂತಿಯನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಿ, ಧಾರ್ಮಿಕ ಆಚಾರ, ವಿಚಾರಗಳಿಗಿಂತ ಮೋಜು, ಮಸ್ತಿಗೆ ಸಿಮೀತಗೊಳಿಸಿದ್ದಾರೆ.ಮುಂದಿನ ದಿನಗಳಲ್ಲಿ ಸಿದ್ದರಾಮ ಸೇನೆ,ವಿ.ಸೋಮಣ್ಣ
ಮತ್ತು ಗೋಡೆಕೆರೆ ಶ್ರೀಗಳಿಗೆ ಅವಮಾನ ಮಾಡಿದವರಿಗೆ ಸರಿಯಾದ ಪಾಠ ಕಲಿಸಲಿದೆ ಎಂದರು.
ತಿಪಟೂರು ನಗರಸಭೆ ಮಾಜಿ ಅಧ್ಯಕ್ಷ ಲಿಂಗರಾಜು ಮಾತನಾಡಿ, ಇಂದು ಸಿದ್ದರಾಮೇಶ್ವರರ ಜಯಂತಿ ಸಮಿತಿಯ ಅಧ್ಯಕ್ಷರಾಗಿರುವ
ಬಿ.ಕೆ.ಚಂದ್ರಶೇಖರ್ ಅವರ ತಂದೆಯವರ ಪುತ್ಥಳಿ ಆನಾವರಣಗೊಳಿಸಿದ್ದೇ ವಿ.ಸೋಮಣ್ಣ, ಇಂತಹ ವ್ಯಕ್ತಿಯನ್ನು ಸಿದ್ದರಾಮೇಶ್ವರರ ಜಯಂತಿಗೆ
ಅಹ್ವಾನಿಸದೆ ಇರುವುದು ಸರಿಯಲ್ಲ. ಪಕ್ಷಾತೀತ,ಜಾತ್ಯಾತೀತವಾಗಿ ಜಿಲ್ಲೆಯ ಅಭಿವೃದ್ದಿಗೆ ದುಡಿಯುತ್ತಿರುವ ವ್ಯಕ್ತಿಗೆ ಈ ರೀತಿಯ ಅಪಮಾನ
ಮಾಡುವುದು ಖಂಡನೀಯ ಎಂದರು. ಸುದ್ದಿಗೋಷ್ಠಿಯಲ್ಲಿ ಕನ್ನಡ ಪ್ರಕಾಶ್, ಯತೀಶ್ ಮತ್ತಿತರರು ಉಪಸ್ಥಿತರಿದ್ದರು.