breaking news

ತುಮಕೂರು ರನ್ನರ್ಸ್ ಅಸೋಸಿಯೇಶನ್ ವತಿಯಿಂದ ಮ್ಯಾರಾಥಾನ್ ಯಶಸ್ವೀ

ತುಮಕೂರು ರನ್ನರ್ಸ್ ಅಸೋಸಿಯೇಶನ್ ವತಿಯಿಂದ ಮ್ಯಾರಾಥಾನ್ ಯಶಸ್ವೀ

ತುಮಕೂರು: ತುಮಕೂರು ರನ್ನರ್ಸ್ ಅಸೋಸಿಯೇಶನ್ ವತಿಯಿಂದ ರಾಷ್ಟ್ರೀಯ ಯುವದಿನದ ಅಂಗವಾಗಿ ತುಮಕೂರು
ಮ್ಯಾರಥಾನ್-೨೦೨೫ಅನ್ನು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಒಟ್ಟು ೭೨೦ ಸ್ಪರ್ಧಾಳುಗಳು
ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.

ತುಮಕೂರು ಅರ್ಬನ್ ರೆಸಾರ್ಟ್ ಮಾಲೀಕರಾದ ಶ್ರೀಕಂಠಸ್ವಾಮಿ ಹಾಗೂ ಚನ್ನಬಸವಪ್ರಸಾದ್, ಸಿದ್ದಿ ಬಯೋ ಮಾಲೀಕರಾದ ರುದ್ರಪ್ರಕಾಶ್ ಹಾಗೂ ಆದರ್ಶ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮ್ಯಾರಥಾನ್ ಗೆ ಚಾಲನೆ ನೀಡಿದರು. ೫೦೦೦ ಮೀ. ಓಟದ ಪುರುಷರ ವಿಭಾಗದಲ್ಲಿ ರಾಜೇಂದ್ರ ಪ್ರಸಾದ್ ಎಸ್. ಜವಳಿ, ವಿವೇಕ್ ಎನ್. ಹಾಗೂ ದೇವರಾಜ್ ಸಿಂಗ್ ಮೊದಲನೆಯ ಮೂರು ಬಹುಮಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಪೃಥ್ವಿ, ನವ್ಯಶ್ರೀ ಹಾಗೂ ಬೃಷ್ಟಿ ಪರಾಶರ್ ಮೊದಲ ಮೂರು ಬಹುಮಾನ ಪಡೆದರು.

೧೦ ಸಾವಿರ ಮೀಟರ್ ಓಟದ ಪುರುಷರ ವಿಭಾಗದಲ್ಲಿ ಎಂ.ವೈ. ಸಂದೀಪ್ ಕುಮಾರ್, ತೈಚಿ ಜûಕಿಮಿ ಮತ್ತು ಸಾಯಿ ಮನೋಹರ್ ಮೊದಲ ಮೂರು ಬಹುಮಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಆಲಿಯಾ ಶೇಕ್, ರಮ್ಯಾ ಎಸ್. ಹಾಗೂ ಕೆ.ಸಿ. ಮಧುರ ಮೊದಲ ಮೂರು ಬಹುಮಾನ ಪಡೆದರು. ೨೧ ಸಾವಿರ ಮೀಟರ್ ಓಟದ ಪುರುಷರ ವಿಭಾಗದಲ್ಲಿ ಅವಧೇಶ್ ನಿಶಾದ್, ಚಿಕ್ಕಣ್ಣ ಮತ್ತು ನಿಖಿಲ್ ಎಸ್. ಮತ್ತು ಮಹಿಳೆಯರ ವಿಭಾಗದಲ್ಲಿ ನಂದಿನಿ, ಸ್ಮೃತಿರಂಜನ್ ಮುದುಲಿ, ಶೃತಿ ಟಿ.ಎಸ್. ಬಹುಮಾನಿತರಾದರು.

Successful Marathon by Tumkur Runners Association

ತುಮಕೂರು ರನ್ನರ್ಸ್ ಅಸೋಸಿಯೇಶನ್ ವತಿಯಿಂದ ಮ್ಯಾರಾಥಾನ್ ಯಶಸ್ವೀ

Share this post

About the author

Leave a Reply

Your email address will not be published. Required fields are marked *