ತುಮಕೂರು: ರೌಡಿಶೀಟರ್ ಓರ್ವನನ್ನು ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ.
ಹತ್ಯೆಯಾದ ರೌಡಿಶೀಟರ್ ನನ್ನು 34 ವರ್ಷದ ಮಾರುತಿ ಎಂದು ಗುರುತಿಸಲಾಗಿದೆ.ತುಮಕೂರು ನಗರದ ಬಂಡಿಮನೆ ಕಲ್ಯಾಣ ಮಂಟಪದ ಬಳಿ ತಡರಾತ್ರಿ ದುಷ್ಕರ್ಮಿಗಳು ರೌಡಿಶೀಟರ್ ಮಾರುತಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಿದ್ದಾರೆ.
ಹತ್ಯೆಯಾಗಿರುವ ಮಾರುತಿ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು ಕೊಡಿಗೇನಹಳ್ಳಿಯನೆಂದು ಹೇಳಲಾಗಿದ್ದು, ತುಮಕೂರಿನ ಮಂಚಲಕುಪ್ಪೆ ಬಳಿ ತನ್ನ ಪತ್ನಿ ಜೊತೆ ವಾಸವಾಗಿದ್ದ ಎಂದು ತಿಳಿದು ಬಂದಿದೆ.
ನಿನ್ನೆ ತಡರಾತ್ರಿ ತನ್ನ ಸ್ನೇಹಿತರ ಜೊತೆ ಮದ್ಯಪಾನ ಮಾಡುತ್ತಿದ್ದ ರೌಡಿಶೀಟರ್ ಮಾರುತಿ ಬಂಡಿಮನೆ ಕಲ್ಯಾಣ ಮಂಟಪದ ಬಳಿ ಬರುತ್ತಿದ್ದಂತೆಯೇ ನಾಲ್ಕೈದು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆಗೈದಿದ್ದಾರೆ.
ಕಳೆದ ಏಳೇಂಟು ವರ್ಷಗಳ ಹಿಂದೆ ನಡೆದಿದ್ದ ಹಟ್ಟಿ ಮಂಜ ಕೊಲೆ ಕೇಸ್ ಸೇರಿದಂತೆ ಹಲವು ಕೇಸ್ ನಲ್ಲಿ ರೌಡಿಶೀಟರ್ ಮಾರುತಿ ಭಾಗಿಯಾಗಿದ್ದನೆಂದು ಹೇಳಲಾಗಿದ್ದು, ಇದೇ ದ್ಷೇಷಕ್ಕೆ ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ಮಾರುತಿ ಮಧುಗಿರಿ ತಾಲ್ಲೂಕು ಕೊಡಿಗೆನಹಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ಎಂದು ಹೇಳಲಾಗಿದ್ದು, ಸ್ಥಳಕ್ಕೆ ಎಸ್.ಪಿ. ತಿಲಕ್ ಪಾರ್ಕ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಕೊಲೆ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.