breaking news

ಗಾಜಿನಮನೆಯಲ್ಲಿ ಆಯೋಜಿಸಿದ್ದ ಐದು ದಿನಗಳ ಸ್ವದೇಶಿ ಮೇಳದ ಉದ್ಘಾಟನಾ ಕಾರ್ಯಕ್ರಮ

ಗಾಜಿನಮನೆಯಲ್ಲಿ ಆಯೋಜಿಸಿದ್ದ ಐದು ದಿನಗಳ ಸ್ವದೇಶಿ ಮೇಳದ ಉದ್ಘಾಟನಾ ಕಾರ್ಯಕ್ರಮ

ತುಮಕೂರು: ಗ್ಯಾಟ್ ಒಪ್ಪಂದದ ಮೂಲಕ ಜಾರಿಗೆ ಬಂದ ಜಾಗತೀಕರಣ,
ಉದಾರೀಕರಣ, ಖಾಸಗೀಕರಣಕ್ಕೆ ಸಡ್ಡು ಹೊಡೆದು,ಸ್ಥಳೀಯ ಸಣ್ಣ ಮತ್ತು
ಮದ್ಯಮ ಕೈಗಾರಿಕೆಗಳಿಗೆ,ಗುಡಿ ಕೈಗಾರಿಕೆಗಳಿಗೆ ಮಾರುಕಟ್ಟೆ
ಒದಗಿಸುವುದೇ ಸ್ವದೇಶಿ ಮೇಳದ ಮೂಲ ಉದ್ದೇಶವಾಗಿದೆ ಎಂದು ಸ್ವದೇಶಿ
ಜಾಗರಣ ಮಂಚ್‌ನ ದಕ್ಷಿಣ ಪ್ರಾಂತೀಯ ಪ್ರಮುಖ ವಿಜಯಕೃಷ್ಣ ತಿಳಿಸಿದ್ದಾರೆ.
ನಗರದ ಗಾಜಿನಮನೆಯಲ್ಲಿ ಸ್ವದೇಶಿ ಜಾಗರಣ್ ಮಂಚ ಆಯೋಜಿಸಿರುವ ಐದು
ದಿನಗಳ ಸ್ವದೇಶಿ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ
ಮಾಡಿದ ಅವರು,ಜಾಹಿರಾತು ವ್ಯಾಮೋಹಕ್ಕೆ ಬಲಿಯಾಗದೆ,ಕೊಳ್ಳುಬಾಕ
ಸಂಸ್ಕೃತಿಯಿAದ ಹೊರಬಂದು, ಸ್ವದೇಶಿ ವಸ್ತುಗಳನ್ನು ಕೊಳ್ಳುವ
ಮೂಲಕ ಸ್ಥಳೀಯ ಉದ್ದಿಮೆದಾರರಿಗೆ ಉತ್ತೇಜನ ನೀಡುವ ಕೆಲಸ ಮಾಡಿದರೇ
ಅದೇ ನಿಜವಾದ ದೇಶಪ್ರೇಮ ಎಂದರು.

ಸ್ವದೇಶಿ ಮೇಳ ಇಲ್ಲಿ ಮೇಳ ನಡೆಯುವ ಐದು ದಿನಗಳು ಇದ್ದರೆ
ಸಾಲದು.ಅದು ಜೀವನದಲ್ಲಿ ಹಾಸು ಹೊಕ್ಕಾಗಬೇಕು. ದೊಡ್ಡ ದೊಡ್ಡ
ಉದ್ದಿಮೆಗಳಿಂದ ನಿರುದ್ಯೋಗ ನಿವಾರಣೆ ಸಾಧ್ಯವಿಲ್ಲ.ಸಣ್ಣ,ಮದ್ಯಮ
ಗಾತ್ರದ, ಹೆಚ್ಚು ಯಾಂತ್ರಿಕರಣವಲ್ಲದ ಉದ್ಯಮಗಳಿಂದ ಉದ್ಯೋಗ
ಲಭ್ಯವಾಗಲಿದೆ.ಒಂದು ಅಂದಾಜಿನ ಪ್ರಕಾರ ಒಂದು ವರ್ಷಕ್ಕೆ ೧.೨೦ಕೋಟಿ
ಪದವಿಧರರಲ್ಲಿ ಸರಕಾರಿ ಉದ್ಯೋಗ ದೊರೆಯುವುದು ಕೇವಲ ೧೦ ಲಕ್ಷ
ಜನರಿಗೆ ಮಾತ್ರ.ಇದು ಒಟ್ಟಾರೆ ಉದ್ಯೋಗದ ಶೇ೩.೩ ಮಾತ್ರ.ಇನ್ನೂ ಟಾಟಾ,
ಬಿರ್ಲಾ ರಂತಹ ದೊಡ್ಡ ಕಂಪನಿಗಳಿAದ ಶೇ ೪.೫ರಿಂದ ೫ರಷ್ಟು ಜನರಿಗೆ
ಮಾತ್ರ ಉದ್ಯೋಗ ದೊರೆಯಲಿದೆ.ಉಳಿದಂತೆ ಕೃಷಿ ಶೇ೪೪ರಷ್ಟು
ಯುವಜನರಿಗೆ ಉದ್ಯೋಗ ಒದಗಿಸಿದರೆ, ಎಂ.ಎಸ್.ಎA.ಇ ಶೇ೩೪ರಷ್ಟು ಜನರಿಗೆ
ಉದ್ಯೋಗ ಒದಗಿಸಿದೆ. ಹಾಗಾಗಿ ಸಣ್ಣ ಮತ್ತು ಮದ್ಯಮ ಕೈಗಾರಿಕೆಗಳು
ಹೆಚ್ಚು ಬೆಳೆದರೆ ನಿರುದ್ಯೋಗದ ಪ್ರಮಾಣವೂ ಕಡಿಮೆಯಾಗಲಿದೆ.

ಈ ಉದ್ದೇಶದಿಂದ ಸ್ವದೇಶಿ ಜಾಗರಣ್ ಮಂಚ್ ೧೯೯೧ರಲ್ಲಿ ಆರಂಭಗೊAಡಿದ್ದು,
ಕಳೆದ ೧೮ ವರ್ಷಗಳಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸ್ವದೇಶಿ
ಮೇಳವನ್ನು ಆಯೋಜಿಸುತ್ತಾ ಬಂದಿದ್ದೇವೆ.ಇಲ್ಲಿ ಲಾಭಕ್ಕಿಂತ ಶಾಶ್ವತ ಪರಿಹಾರ
ಪ್ರಮುಖ ಉದ್ದೇಶವಾಗಿದೆ ಎಂದು ವಿಜಯಕೃಷ್ಣ ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀಶಿವಶರಣ ಮಾದಾರ ಚನ್ನಯ್ಯ
ಗುರುಪೀಠದ ಶ್ರೀಶ್ರೀ ಬಸವಮೂರ್ತಿ ಮಾದಾಅರ ಚನ್ನಯ್ಯ
ಸ್ವಾಮೀಜಿ,ಸ್ವಾತಂತ್ರ ಪೂರ್ವದಲ್ಲಿ ಉಪ್ಪಿನಿಂದ ಹಿಡಿದು ಎಲ್ಲವೂ ನಮ್ಮದೆ
ಆಗಿತ್ತು.ವ್ಯಾಪಾರಕ್ಕೆಂದು ಬಂದವರು ಎಲ್ಲವನ್ನು ತಮ್ಮ ಕೈವಶ
ಮಾಡಿಕೊಂಡರು.ಸ್ವಾತAತ್ರ ಬಂದು ೭೫ ವರ್ಷ ಕಳೆದರೂ ವಿದೇಶಿ
ಸಂಸ್ಕೃತಿಯಿAದ ಸ್ವದೇಶಿ ಸಂಸ್ಕೃತಿಗೆ ಮರಳಲು
ಸಾಧ್ಯವಾಗುತ್ತಿಲ್ಲ.ರಾಸಾಯನಿಕ ಕೃಷಿಯಿಂದ ವ್ಯವಸಾಯವಷ್ಟೇ ಅಲ್ಲ.ಗಾಳಿ
ನೀರು, ಪರಿಸರ ಎಲ್ಲವೂ ಕುಲುಷಿತಗೊಂಡಿದೆ.ಸಿರಿಧಾನ್ಯಗಳು
ಮರೆಯಾಗಿದೆ.ಸ್ವದೇಶಿ ಮೇಳದಿಂದಾಗಿ ಜನರು ನಿಧಾನವಾಗಿ ಸ್ವದೇಶಿ
ವಸ್ತುಗಳತ್ತ ಆಕರ್ಷಿತರಾಗುತ್ತಿದ್ದಾರೆ. ಹಾಗಾಗಿ ಜನರು ಇತ್ತ
ಗಮನಹರಿಸಬೇಕೆಂದರು.

ಜಿಲ್ಲಾಧಿಕಾರಿ ಶ್ರೀಮತಿ ಶುಭ ಕಲ್ಯಾಣ ಸ್ವದೇಶಿ ಮೇಳಕ್ಕೆ ದೀಪ ಬೆಳಗುವ
ಮೂಲಕ ಚಾಲನೆ ನೀಡಿದರು.ವಿಧಾನಪರಿಷತ್ ಮಾಜಿ ಸದಸ್ಯೆ ಶ್ರೀಮತಿ ತಾರಾ
ಅನುರಾಧ, ಶಾಸಕ ಜಿ.ಬಿ.ಜೋತಿಗಣೇಶ್,ಸ್ವದೇಶಿ ಮೇಳದ
ಸಂಯೋಜಕರಾದ ಡಾ.ಪ್ರಕಾಶ್ ಪಾಲ್ತೆ, ಸಂಚಾಲಕಿ ಶ್ರೀಮತಿ ಅಂಬಿಕಾ
ಹುಲಿನಾಯ್ಕರ್, ಸಂಘಟಕರಾದ ಶ್ರೀಮತಿ ವಾಸವಿಗುಪ್ತ ಮತ್ತಿತರರು ಉಪಸ್ಥಿತರಿದ್ದರು.

Share this post

About the author

Leave a Reply

Your email address will not be published. Required fields are marked *