ತುಮಕೂರು ಜಿಲ್ಲಾ ಬೀದಿ ಬದಿ ವ್ಯಾಪರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ತುಮಕೂರು : ಕೊರಟಗೆರೆ ತಾಲೋಕಿನ ಪ್ರಸಿದ್ಧ ಸ್ಥಳವಾದ ಗೊರವನಹಳ್ಳಿ ಗ್ರಾಮದಲ್ಲಿ ಸುಮಾರು 20 ವರ್ಷಗಳಿಂದ ಬೀದಿಬದಿ ವ್ಯಾಪಾರಿಗಳ ಅಧಿನಿಯಮ 2014 ರ ಪ್ರಕಾರ ( ಜೀವನೋಪಾಯ ಸಂರಕ್ಷಣೆ ಮತ್ತು ಬಿದಿ ವ್ಯಾಪಾರ ವಿನಿಯಂತ್ರಣ ) ಅಧಿನಿಯಮದ ಪ್ರಕಾರ ಗೊರವನಹಳ್ಳಿ ಲಕ್ಷ್ಮೀ ದೇವಸ್ಥಾನದ ಹತ್ತಿರ ವ್ಯಾಪಾರ ಮಾಡಿಕೊಂಡು ಬಂದಿದ್ದು ಇದಕ್ಕೆ ಹಳೆಯ ದೇವಸ್ಥಾನದ ಆಡಳಿತ ಮಂಡಳಿಯವರು ಬಡ ಬೀದಿಬದಿ ವ್ಯಾಪಾರಿಗಳಿಗೆ ಅಂದಿನಿಂದ ಇಂದಿನವರೆಗೂ ಸ್ಪಂದಿಸುವ ಮೂಲಕ ಬಡ ವ್ಯಾಪಾರಿಗಳ ಜೀವನಕ್ಕೆ ಅಸರೆಯಾಗಿದ್ದರು
ಈಗ ಈ ದೇವಸ್ಥಾನದಲ್ಲಿ ಹೋಸದಾಗಿ ಆಡಳಿತ ಮಂಡಳಿ ಪ್ರರಂಭವಾಗಿದ್ದು ಈ ಹೋಸ ಆಡಳಿತ ಮಂಡಳಿಯ ಸಿಬ್ಬಂದಿಗಳು ಇಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿರುವ ಬೀದಿಬದಿ ವ್ಯಾಪಾರದ ಅಂಗಡಿಗಳನ್ನು ತೆರವುಗೊಳಿಸುವ ಉದ್ದೇಶದಿಂದ ಗೂಂಡಾವರ್ತನೆ ಮಾಡುವ ಮೂಲಕ ಅಂಗಡಿ ಮುಂಭಾಗದಲ್ಲಿ ಲಕ್ಷ ದೀಪೆÇೀತ್ಸವದ ಕಬ್ಬಿಣದ ಸ್ಟಾಂಡ್ ಗಳನ್ನು ವ್ಯಾಪರಕ್ಕೆ ತೊಂದರೆಯಾಗುವಂತೆ ಅಂಗಡಿಗಳ ಮುಂದೆ ಅಡ್ಡಲಾಗಿ ಇರಿಸಿ ಬೀದಿಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವ ಕೇಲಸ ಮಾಡುತ್ತಿದ್ದಾರೆಂದು ಜಿಲ್ಲಾ ಬೀದಿ ಬದಿ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಮಂಜುನಾಥ್ ಟಿ.ಕೆ ಆರೋಪ ಮಾಡಿದರು.
ಗೊರವನಹಳ್ಳಿ ಲಕ್ಷ್ಮೀ ದೇವಸ್ಥಾನದ ಟ್ರಸ್ಟ್ ಸಿಬ್ಬಂದಿ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಮಾತಿನ ಚಕಮಕಿ ನಡೆದು ಇದನ್ನೇ ಮುಂದಿಟ್ಟುಕೊಂಡು ಬೀದಿಬದಿ ವ್ಯಾಪಾರಿಗಳ ಮೇಲೆ ಕೊರಟಗೆರೆ ಪೆÇೀಲಿಸ್ ಠಾಣೆಗೆ ಸುಳ್ಳು ಆರೋಪದ ದೂರು ನೀಡಿ 12 ಜನ ಬೀದಿಬದಿ ವ್ಯಾಪಾರಿಗಳ ಪೈಕಿ 8 ಜನರ ವಿರುದ್ದ ಪ್ರಕರಣ ದಾಖಲಿಸಿರುತ್ತಾರೆ .
ಯಾವುದೇ ತಪ್ಪು ಮಾಡದ ಬೀದಿಬದಿ ವ್ಯಾಪಾರಿಗಳ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸಿ ನಮ್ಮನ್ನು ಬದುಕಲು ಅವಕಾಶವನ್ನು ಮಾಡಿಕೊಟ್ಟು
ದೇವಸ್ಥಾನದ ಟ್ರಸ್ಟ್ ಸಿಬ್ಬಂದಿಗಳೆ ಅನಧಿಕೃತವಾಗಿ ಹೇಮಾವತಿ ನಾಲೆಯ ಮೇಲೆ ಅಕ್ರಮವಾಗಿ ಅಂಗಡಿ ಮಳಿಗೆಗಳನ್ನು ಕಟ್ಟಿ ಬಾಡಿಗೆಗೆ ನಿಡಿರುತ್ತಾರೆ .
ತಪ್ಪು ಮಾಡಿದವರನ್ನು ಬಿಟ್ಟು ಪೆÇೀಲಿಸ್ ಇಲಾಖೆ ಅಧಿಕಾರಿಗಳು ಬಡ ಬೀದಿಬದಿ ವ್ಯಾಪಾರಿಗಳಿಗೆ ಬೇದರಿಕೆ ಹಾಕಿರುತ್ತಾರೆ ತಾವುಗಳು ದಯಮಾಡಿ ಅಲ್ಲಿನ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ನಮಗೆ ನ್ಯಾಯ ದೊರಕಿಸಿಕೊಡುವುದರೊಂದಿಗೆ ನಮಗೆ ಅದೇ ಸ್ಥಳದಲ್ಲಿ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ನಿಡಿದರು