breaking news

ರಂಗಪುರದಲ್ಲಿ ಶ್ರೀಅಯ್ಯಪ್ಪ ಸ್ವಾಮಿ ಭಜನಾ ಕಾರ್ಯಕ್ರಮ 

ರಂಗಪುರದಲ್ಲಿ ಶ್ರೀಅಯ್ಯಪ್ಪ ಸ್ವಾಮಿ ಭಜನಾ ಕಾರ್ಯಕ್ರಮ 

ತುಮಕೂರು: ಕಾನನ ವಾಸ ಕಲಿಯುಗ ವರದ ಶ್ರೀ ಅಯ್ಯಪ್ಪ ಸ್ವಾಮಿಯ ಭಜನಾ  ಕಾರ್ಯಕ್ರಮ ಶನಿವಾರ ಶ್ರದ್ಧಾ ಭಕ್ತಿಯಿಂದ ಜರಗಿತು. ನಗರದ ರಂಗಪುರದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ 14ನೇ ವರ್ಷದ ಭಜನಾ ಕಾರ್ಯಕ್ರಮ ವನ್ನು ಡಾ. ಎಲ್ ಜಿ ಮಂಜುನಾಥ್ ಕುಟುಂಬ ಹಾಗೂ ಧರ್ಮಶಾಸ್ತ್ರ ಭಕ್ತವೃಂದದವರು ಶ್ರೀ ಅಯ್ಯಪ್ಪ ಸ್ವಾಮಿ ಮೂರ್ತಿಗೆ ಅಭಿಷೇಕ, ಮಹಾಮಂಗಳಾರತಿ, ಭಸ್ಮಾಭಿಷೇಕ ,ವಿಶೇಷ ಅಲಂಕಾರ ಗೈದು ಪೂಜೆ  ನೆರವೇರಿಸಿದರು.

ಶ್ರೀ ಅಯ್ಯಪ್ಪ ಸ್ವಾಮಿಯ ಭಜನಾ ಕಾರ್ಯಕ್ರಮಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಿ ಮಂಗಳಾರತಿ ಸ್ವೀಕರಿಸಿದರು.

ಶ್ರೀ ನೀಲಕಂಠೇಶ್ವರ ಭಜನಾ ಮಂಡಳಿ, ಶ್ರೀರಾಮನಗರ ಇವರುಗಳಿಂದ ಶ್ರೀ ಅಯ್ಯಪ್ಪ ಸ್ವಾಮಿಯ ಹರಿವಾರಸಾನಂ ಭಕ್ತಿಗೀತೆಗಳು ಭಕ್ತರನ್ನು ರೋಮಾಂಚಗೊಳಿಸಿ ಭಕ್ತಿ ಭಾವದಲ್ಲಿ ತೇಲುವಂತೆ ಮಾಡಿದವು. ಸಾವಿರಾರು ಸಂಖ್ಯೆಯಲ್ಲಿ ಬಂದ ಭಕ್ತರಿಗೆ ಡಾ. ಎಲ್ ಜಿ ಮಂಜುನಾಥ್ ಕುಟುಂಬದವರಿಂದ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದರು.

Shri Ayyappa Swami Bhajan program in Rangpur

Share this post

About the author

Leave a Reply

Your email address will not be published. Required fields are marked *