breaking news

ಶಿಕ್ಷಣ, ಸಂಸ್ಕೃತಿ, ಮಾನವೀಯತೆ ಉಳಿಸಿ! ಎಐಡಿಎಸ್‌ಓನ ಹೋರಾಟ

ಶಿಕ್ಷಣ, ಸಂಸ್ಕೃತಿ, ಮಾನವೀಯತೆ ಉಳಿಸಿ! ಎಐಡಿಎಸ್‌ಓನ ಹೋರಾಟ

ವಿದ್ಯಾರ್ಥಿ ಹೋರಾಟದ ಹಾದಿಯಲ್ಲಿ ಎಐಡಿಎಸ್‌ಓ ಸಂಘಟನೆಯ ೭೦ನೇ ಸಂಸ್ಥಾಪನಾ ದಿನ ಆಚರಣೆ ಕುರಿತು ಪ್ರಕಟಣೆ ಕೋರಿ. ಇಂದು ತುಮಕೂರಿನಲ್ಲಿ ಎಐಡಿಎಸ್‌ಓ ನ ೭೦ನೇ ಸಂಸ್ಥಾಪನ ದಿನದ ಅಂಗವಾಗಿ ವಿವಿಧೆಡೆ ಸೂಕ್ತಿ ಪ್ರದರ್ಶನ, ವಿದ್ಯಾರ್ಥಿ ಹೋರಾಟದ ಕುರಿತು ಚರ್ಚೆ ಮತ್ತು ಎಐಡಿಎಸ್‌ಓ ಕಚೇರಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಎಐಡಿಎಸ್‌ಓ ನ ರಾಜ್ಯ ಉಪಾಧ್ಯಕ್ಷರಾದ ಚಂದ್ರಕಲಾ ಅವರು ವಹಿಸಿಕೊಂಡಿದ್ದರು.

ಸಂಘಟನೆ ಪ್ರಾರAಭವಾದ ಹಿನ್ನೆಲೆ ಮತ್ತು ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್‌ರ ವಿಚಾರ, ಆದರ್ಶಗಳ ಮೇಲೆ ಕಾ. ಶಿವದಾಸ್ ಘೋಷರ ವಿಚಾರಗಳ ಮಾರ್ಗದರ್ಶನದ ಸ್ಫೂರ್ತಿಯಿಂದ ಂIಆSಔ ಪ್ರಾರಂಭವಾಯಿತು ಎನ್ನುವುದನ್ನು ಹೇಳಿದರು. ಪ್ರಸ್ತುತ ಶಿಕ್ಷಣದ ಸ್ಥಿತಿಗತಿಗಳು ಮತ್ತು ಮಹಾನ್ ವ್ಯಕ್ತಿಗಳು ಶಿಕ್ಷಣದ ಬಗೆಗಿನ ಕಂಡ ಕನಸು ನನಸಾಗಿದೆಯಾ ಅಥವಾ ಕನಸು ಕನಸಾಗಿಯೇ ಉಳಿದಿದೆಯಾ? ಮತ್ತು ಇಲ್ಲಿ ಈ ಸಂದರ್ಭಗಳಲ್ಲಿ ವಿದ್ಯಾರ್ಥಿಗಳ ನಿಲುವು ಯಾವುದಾಗಿರಬೇಕು ಎಂದು ವಿದ್ಯಾರ್ಥಿಗಳ
ಸಮ್ಮುಖದಲ್ಲಿ ವಿದ್ಯಾರ್ಥಿಗಳ ಕರ್ತವ್ಯವೇನೆಂದು ಸ್ಪಷ್ಟಪಡಿಸಿದರು.

ಉನ್ನತ ಚಾರಿತ್ರö್ಯ ಮತ್ತು ಉದಾರತೆ, ಸಮಾಜಿಕ ಬದ್ಧತೆಯು ವ್ಯಕ್ತಿಯ ಮಾನವೀಯ ಮೌಲ್ಯಗಳನ್ನು ಉತ್ತನಕ್ಕೆರಿಸುವುದನ್ನು ಕಾಣಬಹುದು ಎಂದು ತಿಳಿಸಿದರು. ಮುಂದವರೆದು ಎಲ್ಲಾ ವಿದ್ಯರ್ಥಿಗಳು ಭಗತ್‌ಸಿಂಗ್ ಮತ್ತು ನೇತಾಜಿಯ ಆದರ್ಶಗಳಿಂದ ಇಂದಿನ ಸಾಮಾಜಿಕ ಮತ್ತು ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಧ್ವನಿಎತ್ತಿ ಅನ್ಯಾಯದ ವಿರುದ್ಧದ ಹೋರಾಟದಲ್ಲಿ ನಿರಂತರವಾಗಿ ತೊಡಗಬೇಕೇಂದು ಮತ್ತು ಶಿಕ್ಷಣ, ಸಂಸ್ಕೃತಿ, ಮಾನವೀಯಮೌಲ್ಯಗಳನ್ನು ಉಳಿಸಲು ಒಗ್ಗೂಡಿ ಎಂದು ಕರೆ ನೀಡಿದರು.

Save Education, Culture, Humanity! AIDSO struggle

Share this post

About the author

Leave a Reply

Your email address will not be published. Required fields are marked *