breaking news

ಮಹಿಳೆಯ ಬ್ಯಾಗ್ ಹಿಂತಿರುಗಿಸಿ ಮಾನವೀಯತೆ ಮರೆದೆ ಆರ್‌ಟಿಓ ಷರೀಫ್

ಮಹಿಳೆಯ ಬ್ಯಾಗ್ ಹಿಂತಿರುಗಿಸಿ ಮಾನವೀಯತೆ ಮರೆದೆ ಆರ್‌ಟಿಓ ಷರೀಫ್

ತುಮಕೂರು- ನಗರದ ಖಾಸಗಿ ಆಸ್ಪತ್ರೆ ಬಳಿ ಸಿಕ್ಕಿದ್ದ ಮಹಿಳೆಯೊಬ್ಬರ
ಬ್ಯಾಗ್‌ನ್ನು ಪೊಲೀಸರ ಮುಖಾಂತರ ವಾರಸುದಾರ ಮಹಿಳೆಗೆ ಹಿಂತಿರುಗಿಸುವ
ಮೂಲಕ ಆರ್‌ಟಿಓ ಇನ್ಸ್ಪೆಕ್ಟರ್ ಸದ್ರುಲ್ಲಾ ಷರೀಫ್ ಅವರು ಮಾನವೀಯತೆ
ಮೆರೆದಿದ್ದಾರೆ.


ನಗರದ ಮಡಿಲು ಆಸ್ಪತ್ರೆಯ ಮೆಟ್ಟಿಲುಗಳ ಮೇಲೆ ಅನಾಮಾಧೇಯ ಬ್ಯಾಗ್
ಬಿದ್ದಿರುವುದನ್ನು ಕಂಡ ಆರ್‌ಟಿಓ ಇನ್ಸ್ಪೆಕ್ಟರ್ ಸದ್ರುಲ್ಲಾ ಷರೀಫ್ ಅವರು
ಅನುಮಾನಾಸ್ಪದವಾಗಿ ಆ ಬ್ಯಾಗ್‌ನ್ನು ಎತ್ತಿಕೊಂಡು ಅಕ್ಕಪಕ್ಕ ಈ ಬ್ಯಾಗ್‌ನ
ವಾರಸುದಾರರು ಇದ್ದಾರೆಯೇ ಎಂದು ನೋಡಿದ್ದಾರೆ. ಆದರೆ ಆ ಬ್ಯಾಗ್
ವಾರಸುದಾರರು ಯಾರೂ ಪತ್ತೆಯಾಗದ ಕಾರಣ ತಕ್ಷಣ ಸಮೀಪದಲ್ಲೇ
ಇದ್ದ ಹೊಸಬಡಾವಣೆ ಪೊಲೀಸ್ ಠಾಣೆಗೆ ತೆರಳಿ ತಮಗೆ ದೊರೆತ ಬ್ಯಾಗ್‌ನ್ನು
ಪೊಲೀಸರ ವಶಕ್ಕೆ ನೀಡಿದ್ದಾರೆ.

RTO Inspector Sadrullah Shariff

ನಂತರ ಕಾರ್ಯಪ್ರವೃತ್ತರಾದ ಹೊಸಬಡಾವಣೆ ಠಾಣೆ ಪೊಲೀಸರು
ಬ್ಯಾಗ್‌ನಲ್ಲಿದ್ದ ಕೆಲ ಚೀಟಿಯ ಮಾಹಿತಿ ಮೇರೆಗೆ ಮಡಿಲು ಆಸ್ಪತ್ರೆ, ಸ್ಕಾ÷್ಯನಿಂಗ್
ಸೆAಟರ್‌ಗೆ ತೆರಳಿ ವಾರಸುದಾರರ ಪತ್ತೆಗಾಗಿ ಹುಡುಕಾಡಿದ್ದಾರೆ. ನಂತರ ಆಸ್ಪತ್ರೆ
ಸಿಬ್ಬಂದಿ ಮೂಲಕ ವಾರಸುದಾರರ ಮೊಬೈಲ್ ನಂಬರ್ ಪಡೆದು ಸಂಪರ್ಕಿಸಿ
ಅವರನ್ನು ಪೊಲೀಸ್ ಠಾಣೆಗೆ ಕರೆ ಬ್ಯಾಗ್ ಹಿಂತಿರುಗಿಸಿದ್ದಾರೆ.
ಬ್ಯಾಗ್ ಕಳೆದುಕೊಂಡಿದ್ದ ನಗರದ ಉಪ್ಪಾರಹಳ್ಳಿಯ ನೇತ್ರಾವತಿ ಅವರು
ತಮ್ಮ ಬ್ಯಾಗ್ ಹಿಂತಿರುಗಿಸಿದ ಆರ್‌ಟಿಓ ಇನ್ಸ್ಪೆಕ್ಟರ್ ಸದ್ರುಲ್ಲಾ ಷರೀಪ್ ಹಾಗೂ
ಹೊಸಬಡಾವಣೆ ಠಾಣೆ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಈ ಬ್ಯಾಗ್‌ನಲ್ಲಿ ೮ ಸಾವಿರ ರೂ. ನಗದು, ಒಂದು ಮೊಬೈಲ್, ಮನೆಯ ಲಾಕರ್ ಕೀ,
ಬೀರುವಿನ ಕೀ ಸೇರಿದಂತೆ ಇತರೆ ವಸ್ತುಗಳು ಇದ್ದವು ಎಂದು ತಿಳಿದು ಬಂದಿದೆ.

Return woman’s bag, forget humanity, RTO Shariff

Share this post

About the author

Leave a Reply

Your email address will not be published. Required fields are marked *