ನಗರದಲ್ಲಿ ರೈನ್‍ಬೋ ಎಕ್ಸಿಬಿಷನ್ ಬಾಹುಬಲಿ ಸೆಟ್ ಅಮ್ಯೂಜ್‍ಮೆಂಟ್ ಪಾರ್ಕು ಆರಂಭ
ತುಮಕೂರು:ನಗರದ ಕುಣ ಗಲ್ ರಸ್ತೆಯ ಸದಾಶಿವನಗರದ ಕೆ.ಎನ್.ಎಸ್.ರೈಸ್‍ಮಿಲ್ ಆವರಣದಲ್ಲಿ ರೈನ್‍ಬೋ ಎಕ್ಸಿಬಿಷನ್ ಇವರಿಂದ ತುಮಕೂರು ಉತ್ಸವ ಹೆಸರಿನ ಬಾಹುಬಲಿ ಸೆಟ್ ಅಮ್ಯೂಜ್‍ಮೆಂಟ್ ಪಾರ್ಕು ಮನರಂಜನಾ ಉತ್ಸವ ನವೆಂಬರ್ 05ರ ದೀಪಾವಳಿ ದಿನದಿಂದ ಆರಂಭಗೊಂಡಿದೆ.
ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಇಡೀ ದೇಶದಲ್ಲಿಯೇ ಹೆಸರು ಮಾಡಿದ ಬಾಹುಬಲಿ ಸಿನಿಮಾದ ವಿವಿಧ ದೃಶ್ಯಗಳನ್ನು ಒಳಗೊಂಡ ಬಾಹುಬಲಿ ಸೆಟ್ ಒಳಗೊಂಡ ಮನರಂಜನಾ ಪಾರ್ಕ್ ಇದಾಗಿದ್ದು, ಇದರ ಜೊತೆಗೆ ಮಕ್ಕಳಿಗೆ, ಮಹಿಳೆಯರಿಗೆ ವಿವಿಧ ಆಟೋಟಗಳನ್ನು ಆಡಲು ಅನುಕೂಲವಾಗುವಂತೆ ಜಾಯಿಂಟ್ ವ್ಹೀಲ್, ಕೊಲಂಬಸ್, ಡ್ರಾಗನ್ ಟ್ರೈನ್, ಸೂಲಂಬೋ,ಬ್ರೇಕ್ ಡ್ಯಾನ್ಸ್, ಪೆಡಲ್ ಬೋಟ್,ಜಲ್ಲಿಕಟ್ಟು, ಜಂಪಿಂಗ್, ಮಿನಿಟ್ರೈನ್ ಇದ್ದು, ಇದರ ಜೊತೆಗೆ ಸಾಹನ ಮನರಂಜನೆ ವಿಭಾಗದಲ್ಲಿ ಒಂದೇ ಬಾವಿಯಲ್ಲಿ ಮಾರುತಿ ಕಾರು, ಮೋಟಾರು ಬೈಕ್‍ಗಳು ಒಟ್ಟಿಗೆ ಚಲಿಸುವ ಸಾಹಸ ದೃಶ್ಯಗಳಿವೆ.
ಬಾಹುಬಲಿ ಸೆಟ್ ಅಮ್ಯೂಜ್‍ಮೆಂಟ್ ಪಾರ್ಕು ನೋಡಲು ಬರುವ ಗ್ರಾಹಕರಿಗಾಗಿ ಗೃಹ ಬಳಕೆಯ ವಸ್ತುಗಳು, ಉಪಕರಣಗಳು,ಮಕ್ಕಳ ಆಟದ ಸಾಮಗ್ರಿಗಳು,ಅಡುಗೆ ಸಾಮಗ್ರಿಗಳು,ರೆಡಿಮೆಟ್ ಡ್ರಸ್‍ಗಳು,ಪಾಪ್‍ಕಾರ್ನ್, ಪಂಜು ಮಿಠಾಯಿ, ಬೇಲ್‍ಪುರಿ, ಪಾನಿಪುರಿ, ಚಾಟ್ಸ್, ಊಟಿ ಮೆಣಸಿನಕಾಯಿ ಬಜ್ಜಿ, ತಂಪು ಪಾನೀಯ, ಐಸ್ ಕ್ರೀಂ, ಡೆಲ್ಲಿ ಹಪ್ಪಳ ಸೇರಿದಂತೆ ಆಹಾರ ಪದಾರ್ಥಗಳು ದೊರೆಯಲಿವೆ.
ದೀಪಾವಳಿ ಸಂಜೆ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಶ್ರೀಸಿದ್ದಲಿಂಗಸ್ವಾಮಿ ಅವರು ರೈನ್‍ಬೋ ಎಕ್ಸಿಬಿಷನ್ ಅವರ ತುಮಕೂರು ಉತ್ಸವ ಬಾಹುಬಲಿ ಸೆಟ್ ಅಮ್ಯೂಜ್‍ಮೆಂಟ್ ಪಾರ್ಕ್‍ನ್ನು ಟೆಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.ಈ ವೇಳೆ ಮಾತನಾಡಿದ ಸಿದ್ದಗಂಗಾ ಶ್ರೀಗಳು,ಕಳೆದ ಒಂದುವರೆ ವರ್ಷದಿಂದ ಕೋರೋನದಿಂದಾಗಿ ಜನರಿಗೆ ಮನರಂಜನೆ ಎಂಬುದು ಮರೀಚಿಕೆಯಾಗಿತ್ತು.ಮಹಾಮಾರಿ ಕೋರೋನದಿಂದ ಜನರು ಒತ್ತಡದಲ್ಲಿದ್ದು, ಸರಕಾರ ಕೋವಿಡ್ ನಿಯಮದಲ್ಲಿ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ ನಗರದಲ್ಲಿ ರೈನ್‍ಬೋ ಎಕ್ಸಿಬಿಷನ್‍ನವರು ತುಮಕೂರು ಉತ್ಸವದ ಹೆಸರಿನಲ್ಲಿ ಜನಪ್ರಿಯ ಸಿನಿಮಾವೊಂದರ ಅಯ್ದ ದೃಶ್ಯಗಳನ್ನು ಸೆಟ್ ರೂಪದಲ್ಲಿ ಅಳವಡಿಸಿ, ಜನರಿಗೆ ಉತ್ತಮ ಮನರಂಜನೆ ಒದಗಿಸಿದ್ದಾರೆ.ಜನರು ಇಲ್ಲಿಗೆ ಭೇಟಿ ನೀಡುವ ಮೂಲಕ ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ರೈನ್‍ಬೋ ಎಕ್ಸಿಬಿಷನ್‍ನ ಆಯೋಜಕರಾದ ವಿಜಯ್ ವಿಲ್ಸನ್ ಮಾತನಾಡಿ,ಸುಮಾರು 60 ಜನ ಕೆಲಸಗಾರರು ಸತತವಾಗಿ ಒಂದು ತಿಂಗಳ ಕಾಲ ಕೆಲಸ ಮಾಡಿ,ಮಹಾಸ್ಮತಿ ಸಮಾಜ್ರ್ಯ ಎಂಬ ಬಾಹುಬಲಿ ಸಿನಿಮಾ ಆಧರಿಸಿದ ಐದು ವಿವಿಧ ದೃಶ್ಯಗಳನ್ನು ಒಳಗೊಂಡ ಬಾಹುಬಲಿ ಸೆಟ್ ತಯಾರಿಸಲಾಗಿದೆ.ಸಂಜೆ 5 ರಿಂದ ರಾತ್ರಿ 9:30ರವರೆಗೆ ತೆರೆದಿರುತ್ತದೆ. 50 ರೂ ಪ್ರವೇಶ ಪಡೆದು ಬಾಹುಬಲಿಸೆಟ್‍ಗೆ ಬರುವ ವ್ಯಕ್ತಿಗೆ ಮನಸ್ಸಿಗೆ ಮುದ ನೀಡುವ ಐದು ದೃಶ್ಯಗಳನ್ನು ಇಲ್ಲಿ ನಿರ್ಮಿಸಲಾಗಿದೆ.
ಸೆಲ್ಪಿಗೂ ಅವಕಾಶವಿದೆ.ಅಲ್ಲದೆ ಮಕ್ಕಳಿಗೆ, ದೊಡ್ಡವರಿಗೆ ವಿವಿಧ ಆಟೋಟಗಳಿಗೂ ಅವಕಾಶವಿದೆ.ಪ್ರತ್ಯೇಕ ದರ ಪಾವತಿಸಿ,ಆಟೋಟದಲ್ಲಿ ಪಾಲ್ಗೊಳ್ಳಬಹುದು.ಆಹಾರ ಪದಾರ್ಥ,ಗೃಹೋಪಯೋಗಿ ವಸ್ತುಗಳ ಖರೀದಿಗೂ ಅವಕಾಶವಿದೆ.ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಬಾಹುಬಲಿ ಸೆಟ್ ನಿರ್ಮಿಸಲಾಗಿದೆ. ಜನರು ಬಂದು ನೋಡುವ ಮೂಲಕ ತಮ್ಮ ಮನದ ಬೇಸರ ಕಳೆದುಕೊಳ್ಳಬಹುದು ಎಂದರು.
ಅಮ್ಯೂಜ್‍ಮೆಂಟ್ ಪಾರ್ಕಿನ ಸಹ ಆಯೋಜಕರಾದ ಎ.ಎಸ್.ಭದ್ರಪ್ಪ ಮಾತನಾಡಿ,ಸುಮಾರು ಐವತ್ತು ಲಕ್ಷ ರೂಗಳನ್ನು ಖರ್ಚು ಮಾಡಿ,ಕೋರೋನದಿಂದಾಗಿ ಅಮ್ಯೂಜ್‍ಮೆಂಟ್ ಪಾರ್ಕು,ಸಿನಿಮಾ, ನಾಟಕ ಕಲಾವಿದರ ಸ್ಥಿತಿ ಹೇಳತೀರದಾಗಿತ್ತು. ಸರಕಾರ ನಿಯಮ ಸಡಿಲಿಕೆ ಮಾಡಿದ ಪರಿಣಾಮ ಅಮ್ಯೂಜ್‍ಮೆಂಟ್ ಪಾರ್ಕಿಗೆ ಅವಕಾಶ ನೀಡಿದೆ.60 ಜನ ಕಲಾವಿದರು ಸತತವಾಗಿ ಒಂದು ತಿಂಗಳ ಕಾಲ ಶ್ರಮಪಟ್ಟು ಈ ಬಾಹುಬಲಿ ಸೆಟ್ ನಿರ್ಮಿಸಿದ್ದಾರೆ.
ಈ ಹಿಂದೆಯೂ ಹಲವಾರು ಸ್ಮಾರಕಗಳ ಸೆಟ್‍ನ್ನು ತುಮಕೂರಿನ ವಿವಿಧೆಡೆ ನಿರ್ಮಿಸಲಾಗಿತ್ತು. ಜನರು ಬಾಹುಬಲಿ ಸೆಟ್‍ಗೆ ಭೇಟಿ ನೀಡಿ, ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಇದೇ ವೇಳೆ ಶಾಸಕರಾದ ಜಿ.ಬಿ.ಜೋತಿಗಣೇಶ್,ರೈನ್‍ಬೋ ಎಕ್ಸಿಬಿಷನ್‍ನ ಸಹ ಆಯೋಜಕರಾದ ಕಮಲಾಕರ ಬಾಹುಬಲಿ ಸೆಟ್‍ಗೆ ಭೇಟಿ ನೀಡಿ, ಆಯೋಜಕರಿಗೆ ಶುಭ ಹಾರೈಸಿದರು.