ಗೋಪೂಜೆ ನೆರವೇರಿಸಿದ ಶಾಸಕ ಜ್ಯೋತಿಗಣೇಶ್
ತುಮಕೂರು- ನಗರದ ಹೊರವಲಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಬಲಿಪಾಢ್ಯಮಿ ಅಂಗವಾಗಿ ಶಾಸಕ ಜ್ಯೋತಿಗಣೇಶ್ ಅವರು ಗೋಪೂಜೆ ನೆರವೇರಿಸಿದರು.
ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ದೇವಾಲಯಕ್ಕೆ ಕರೆ ತಂದ ಗೋಮಾತೆಗೆ ಕಾಲು ತೊಳೆದು ಅರಿಶಿನ ಕುಂಕುವನ್ನಿಟ್ಟು, ಅದರ ಮೈಮೇಲೆ ಹೊಸ ವಸ್ತ್ರವನ್ನು ಹಾಕಿ ಪೂಜೆ ನೆರವೇರಿಸಿ ಆಶೀರ್ವಾದ ಪಡೆದರು.
ನಂತರ ಮಾತನಾಡಿದ ಶಾಸಕ ಜ್ಯೋತಿಗಣೇಶ್ ಅವರು, ಹಿಂದೂ ಧರ್ಮದಲ್ಲಿ ಗೋವುಗಳಿಗೆ ತಾಯಿಯ ಸ್ಥಾನವನ್ನು ನೀಡಿದ್ದು, ಗೋಮಾತೆ ದೇವತೆ ಎಂದು ಭಾವಿಸಿ ಪೂಜಿಸಲಾಗುತ್ತಿದೆ. ಹಿಂದೂ ಧರ್ಮದ ಪುರಾಣ ಉಪನಿಷತ್ತುಗಳಲ್ಲಿ ಗೋಮಾತೆಗೆ ವಿಶೇಷ ಸ್ಥಾನಮಾನವಿದೆ ಎಂದರು.
ಗೋಮಾತೆಯನ್ನು ಪೂಜಿಸಿದರೆ ಅನೇಕ ಸಮಸ್ಯೆಗಳು ಪರಿಹಾರವಾಗುವುದರ ಜತೆಗೆ ವಾಸ್ತು ದೋಷವು ನಿವಾರಣೆಯಾಗುತ್ತದೆ ಎಂಬ ನಂಬಿಕೆ ನಮ್ಮ ಸಮಾಜದಲ್ಲಿದೆ ಎಂದು ಅವರು ಹೇಳಿದರು.
ಗೋಪೂಜೆಯಲ್ಲಿ ತಹಶೀಲ್ದಾರ್ ಮೋಹನ್‍ಕುಮಾರ್, ಅರ್ಚಕರಾದ ಅಜಿತ್‍ಕುಮಾರ್, ಆರ್‍ಐ ಅಜಯ್, ಗ್ರಾಮ ಲೆಕ್ಕಿಗರು, ಶೆಟ್ಟಿಹಳ್ಳಿ ರವಿಶಂಕರ್ ಹಾಗೂ ಶೆಟ್ಟಿಹಳ್ಳಿ ಗ್ರಾಮಸ್ಥರು ಪಾಲ್ಗೊಂಡಿದ್ದರು.