PM ಮೋದಿ ಜನ್ಮದಿನ : ಶಾಸಕರ ಕಚೇರಿಯಲ್ಲಿ ರಕ್ತದಾನ
ಭಾರತದ ಪ್ರಧಾನಿ ಸನ್ಮಾನ್ಯ ನರೇಂದ್ರ ಮೋದೀಜಿಯವರ 71ನೇ ಜನ್ಮದಿನದ ಅಂಗವಾಗಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಬಿ ಜ್ಯೋತಿಗಣೇಶ್ ರವರು ರಕ್ತದಾನ ಶಿಬಿರವನ್ನು ಏರ್ಪಡಿಸುವ ಮೂಲಕ ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಹಿಂದಿನ ದಿನವೇ ಅಂದರೆ, 16.09.2021 ರಂದೇ ಮಾನ್ಯ ಶಾಸಕರು ವಿಶ್ವದ ಸರ್ವ ಶ್ರೇಷ್ಠ ನಾಯಕ ಶ್ರೀ ನರೇಂದ್ರ ಮೋದೀಜಿಯವರ ಜನ್ಮ ದಿನದ ಅಂಗವಾಗಿ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಗೌರವ ಸಮರ್ಪಿಸಬೇಕಾಗಿದೆ. ಹಾಗಾಗಿ ನಮ್ಮ ಕಛೇರಿಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು, ಸಹೃದಯ ನಾಗರೀಕರು ಶಿಬಿರದಲ್ಲಿ ಪಲ್ಗೊಂಡು ಅಭಿವೃದ್ಧಿಯ ಹರಿಕಾರ ಮೋದಿ ಜೀ ಅವರಿಗೆ ಗೌರವ ಸಲ್ಲಿಸಬೇಕೆಂದು ಮನವಿ ಮಾಡಿದ್ದರು.
ತುಮಕೂರಿನ ರೆಡ್ ಸರ್ಕಲ್ ಬ್ಲಡ್ ಬ್ಯಾಂಕ್‍ನ ಸಹಯೋಗದೊಂದಿಗೆ ಶಾಸಕರ ಕಛೇರಿಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಸುಮಾರು 26 ಜನ ಮೋದಿ ಜೀ ಅಭಿಮಾನಿಗಳು ರಕ್ತದಾನ ಮಾಡಿದರು. ವಿಶೇಷವಾಗಿ ತುಮಕೂರು ಮಹಾನಗರಪಾಲಿಕೆಯ ಬಿಜೆಪಿ ಮಹಿಳಾ ಸದಸ್ಯರುಗಳು ರಕ್ತದಾನ ಮಾಡಿದ್ದು ವಿಶೇಷವಾಗಿತ್ತು. ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು, ಪೂಜ್ಯ ಮಹಾಪೌರರಾದ ಶ್ರೀ ಬಿ.ಜಿ.ಕೃಷ್ಣಪ್ಪ ರವರು, ಬಿಜೆಪಿ ನಗರಾಧ್ಯಕ್ಷರಾದ ಟಿ.ಹೆಚ್.ಹನುಮಂತರಾಜು ರವರು ರಕ್ತದಾನಿಗಳಿಗೆ ಕೃತಜ್ಞತೆ ಸಲ್ಲಿಸಿ, ಪ್ರಮಾಣ ಪತ್ರವನ್ನು ವಿತರಿಸಿದರು.
ಈ ಸಂಧರ್ಭದಲ್ಲಿ ನಗರ ಶಾಸಕರ ಕಛೇರಿಯ ಸಿಬ್ಬಂದಿ, ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಸಾದ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್ ಜೀ, ಯುವ ಮೋರ್ಚಾ ಅಧ್ಯಕ್ಷರಾದ ನಾಗೇಂದ್ರ, ಪಾಲಿಕೆ ಸದಸ್ಯರುಗಳಾದ ಮಂಜುಳ ಆದರ್ಶ್, ನವೀನ ಅರುಣ್, ದೀಪಶ್ರೀ ಮಹೇಶ್ ಬಾಬು ಹಾಗೂ ಮುಂತಾದ ಬಿಜೆಪಿ ಕಾರ್ಯಕರ್ತರು ಹಾಗೂ ಮುಂಖಡರು ಹಾಜರಿದ್ದರು.