breaking news

ಸಾರ್ವಜನಿಕರಿಗೆ ತೊಂದರೆಯಾಗದಂತೆ ತುರ್ತಾಗಿ ಇ-ಸ್ವತ್ತು ಮಾಡಿಕೊಡಲು ಎನ್.ಡಿ.ಎ ಒತ್ತಾಯ

ಸಾರ್ವಜನಿಕರಿಗೆ ತೊಂದರೆಯಾಗದಂತೆ ತುರ್ತಾಗಿ ಇ-ಸ್ವತ್ತು ಮಾಡಿಕೊಡಲು ಎನ್.ಡಿ.ಎ ಒತ್ತಾಯ

ಬಿಜೆಪಿ ಮತ್ತು ಜೆಡಿಎಸ್ ನ ನಿಯೋಗ ತುಮಕೂರು ಮಹಾನಗರ ಪಾಲಿಕೆ ಆಯುಕ್ತರನ್ನ ಇ-ಆಸ್ತಿ ಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ
ಆಗುತ್ತಿರುವ ಸಮಸ್ಯೆಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಅಸಮರ್ಪಕತೆಯನ್ನ ವಿವರಿಸಲಾಯಿತು.

ಇ-ಆಸ್ತಿಗೆ ಸಂಬಂಧಿಸಿದಂತೆ, ಇನ್ನು ಮುಂದೆ ಅನೇಕ ದಾಖಲಾತಿಗಳಿಗೆ ಸಾರ್ವಜನಿಕರಿಗೆ ಅಲೆಸುವ ಬದಲಿಗೆ ನಮೂನೆ-೩
ನೀಡುವಾಗ ಈಗಾಗಲೇ ಎಲ್ಲಾ ದಾಖಲಾತಿಗಳನ್ನ ಖಾತಾದಾರರು ನೀಡಿರುತ್ತಾರೆ, ಅದನ್ನ ಪುನಃ ಕೇಳಿ ಅಲೆಸುವ ಅಗತ್ಯವಿಲ್ಲ
ನಮೂನೆ-೩ ರ ಆಧಾರದ ಮೇಲೆ ಇ-ಆಸ್ತಿ ತೆರೆಯಬೇಕು ಎಂದು ತುಮಕೂರು ಮಹಾನಗರಪಾಲಿಕೆಯ ಆಯುಕ್ತರಿಗೆ ಬಿಜೆಪಿ
ಹಾಗೂ ಜೆಡಿಎಸ್ ಪಕ್ಷದಿಂದ ಒತ್ತಾಯಿಸಲಾಯಿತು.

ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಆಯುಕ್ತರು ನಮೂನೆ-೩ ರ ಆಧಾರದ ಮೇಲೆ ಇ-ಆಸ್ತಿ ಮಾಡುವ ಆದೇಶವನ್ನ ಹೊರಡಿಸುವ ಭರವಸೆಯನ್ನ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ತುಮಕೂರು ಜಿಲ್ಲಾಧ್ಯಕ್ಷರಾದ ರವಿಶಂಕರ್ ಹೆಬ್ಬಾಕ, ಜೆಡಿಎಸ್ ತುಮಕೂರು ಜಿಲ್ಲಾಧ್ಯಕ್ಷರಾದ
ನಾಗರಾಜು, ಬಿಜೆಪಿ ಹಾಗೂ ಜೆಡಿಎಸ್ ಮಾಜಿ ಮಹಾನಗರಪಾಲಿಕೆ ಸದಸ್ಯರು, ಬಿಜೆಪಿ ನಗರಾಧ್ಯಕ್ಷರಾದ ಟಿ.ಹೆಚ್.ಹನುಮಂತರಾಜು,
ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸಂದೀಪ್‌ಗೌಡ ಹಾಗೂ ಮುಂತಾದ ಮುಖಂಡರುಗಳು ಹಾಜರಿದ್ದರು.

NDA demands immediate provision of e-asset without any inconvenience to public

Share this post

About the author

Leave a Reply

Your email address will not be published. Required fields are marked *