ತುಮಕೂರು: ಕಲ್ಪತರು ನಾಡು ತುಮಕೂರಿನಲ್ಲಿ ಶಾಂತಿ ನೆಲೆಸುವಂತೆ ಜನರಿಗೆ ಮಾರ್ಗದರ್ಶನ ಮಾಡುವಂತೆ ತುಮಕೂರು ನಾಗರಿಕ ಸೌಹಾರ್ಧ ವೇದಿಕೆ ವತಿಯಿಂದ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಶ್ರೀಸಿದ್ದಲಿಂಗಸ್ವಾಮೀಜಿ ಅವರಿಗೆ ಮನವಿ ಸಲ್ಲಿಸಲಾಗಿದೆ.
ಇತ್ತೀಚಗೆ ತುಮಕೂರು ನಾಗರಿಕ ಸೌಹಾರ್ಧ ವೇದಿಕೆಯವತಿಯಿಂದ ಉದ್ಯಮಿ ತಾಜುದ್ದೀನ್ ಷರೀಫ್ ಮತ್ತಿತರರು ಸಾವಿರಾರು ಮಕ್ಕಳಿಗೆ ಅನ್ನ,ಅಕ್ಷರ, ಅಶ್ರಯ ನೀಡುವ ತ್ರಿವಿಧ ದಾಸೋಹ ಕೇಂದ್ರವೆಂದೇ ಪ್ರಸಿದ್ದ ಪಡೆದಿರುವ ಶ್ರೀಸಿದ್ದಗಂಗಾ ಮಠದ ಅಧ್ಯಕ್ಷರಾದ ಶ್ರೀಸಿದ್ದಲಿಂಗಸ್ವಾಮೀಜಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ,ಇತ್ತೀಚಿನ ಬೆಳವಣ ಗೆಗಳ ಕುರಿತು ವಿವರ ನೀಡಿ, ತಮ್ಮ ಮಾರ್ಗದರ್ಶನ ಅತಿ ಅಗತ್ಯವೆಂದು ಮನವರಿಕೆ ಮಾಡಿದ್ದಾರೆ.
ಕಲ್ಪತರು ನಾಡು, ದಾಸೋಹದ ಬೀಡು ಎನಿಸಿಕೊಂಡಿರುವ ತುಮಕೂರು ನಗರದ ಮತ್ತು ಜಿಲ್ಲೆಯಲ್ಲಿ ರಸ್ತೆ ವಿಚಾರಕ್ಕಾಗಿ ಇಬ್ಬರ ನಡುವೆ ನಡೆದ ಜಗಳವನ್ನೇ ದೊಡ್ಡದು ಮಾಡಿ,ಒಂದು ಕೋಮಿನ ಜನರ ಭಾವನೆಗಳಿಗೆ ಧಕ್ಕೆಯಾಗುವಂತೆ, ಜನರಲ್ಲಿ ದ್ವೇಷ ಭಾವನೆ ಬರುವಂತಹ ಭಾಷಣಗಳನ್ನು ಮಾಡಿರುವುದಲ್ಲದೆ,ಧರ್ಮ ರಕ್ಷಣೆಗೆ ನಾವು ತಳವಾರ್ ಹಿಡಿದರೆ ನಿಮಗೆ ಹೂಳಲು ಜಾಗವಿರುವುದಿಲ್ಲ, ಹಿಂದೂಗಳನ್ನು ಮುಟ್ಟಿದರೆ ಮುಸ್ಲಿಂರು ಪಾಕಿಸ್ಥಾನಕ್ಕೆ ಹೋಗಬೇಕಾಗುತ್ತದೆ.ಧರ್ಮ ರಕ್ಷಣೆಗೆ ಹಿಂಸೆ ಅನಿವಾರ್ಯ ಎಂಬ ಆಕ್ರೋಶದ ಮಾತುಗಳ ಜೊತೆಗೆ,ಟಿಪ್ಪು ಸುಲ್ತಾನನ ಬಗ್ಗೆ ಅವ ಹೇಳನಕಾರಿಯಾಗಿ ಮಾತನಾಡಿ ಶಾಂತಿ ಕದಡುವ ಯತ್ನ ನಡೆಸಲಾಗಿದೆ. ತಾವುಗಳು ಇಂತಹವರಿಗೆ ಮಾರ್ಗದರ್ಶನ ಮಾಡುವ ಮೂಲಕ ನಗರದಲ್ಲಿ ಶಾಂತಿ ನೆಲೆಸಲು ಸಹಕರಿಸುವಂತೆ ಮನವಿಯಲ್ಲಿ ಕೋರಲಾಗಿದೆ.
ದಯವಿಲ್ಲದ ಧರ್ಮ ಅದಾವುದಯ್ಯ ಎಂದ ಜಗಜೋತಿ ಬಸವೇಶ್ವರರೇ ಹೇಳಿದ್ದಾರೆ.ಮಾನವನಿಗಿಂತ ಮಾನವೀಯತೆ ದೊಡ್ಡದು ಎಂಬ ಮಾತುಗಳನ್ನು ಆನೇಕ ಹಿರಿಯರು ನುಡಿದಿದ್ದಾರೆ.ಒರ್ವ ಅಮಾಯಕನನ್ನು ಕೊಂದರೆ ಇಡೀ ಮಾನವ ಕುಲವನ್ನು ಕೊಂದಂತೆ,ಒರ್ವನ ಪ್ರಾಣ ಉಳಿಸಿದರೆ, ಇಡೀ ಮನುಕುಲದ ಪ್ರಾಣ ಉಳಿದಂತೆ ಎಂದು ಪ್ರವಾದಿ ಮಹಮದ್ ಪೈಗಂಬರ್ ಅವರು ತಿಳಿಸಿದ್ದಾರೆ.
ಈಗಾಗಲೇ ಜಗಳದಲ್ಲಿ ಬಜರಂಗದಳದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಐವರನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.ಇಷ್ಟಿದ್ದರೂ ಅನಗತ್ಯವಾಗಿ ನಗರವನ್ನು ಬಂದ್ ಮಾಡಿ,ಒಂದು ಕೋಮಿನ ಜನರ ಬಗ್ಗೆ ತುಂಬ ತುಚ್ಚವಾಗಿ ಮಾತನಾಡಿರುವುದು ಯಾವುದೇ ಸಮಾಜಕ್ಕೆ ಶೋಭೆ ತರುವಂತಹದಲ್ಲ.ಹಾಗಾಗಿ ನಾಡಿನಲ್ಲಿಯೇ ಹೆಸರುವಾಸಿ ಯಾಗಿರುವ ಸಿದ್ದಗಂಗಾ ಮಠ ಸಮಾಜದಲ್ಲಿ ಶಾಂತಿ ಕದಡಲು ಹೊರಟಿರುವ ಇಂತಹ ಶಕ್ತಿಗಳಿಗೆ ಕರೆದು ಬುದ್ದಿವಾದ ಹೇಳಿ, ಸೂಕ್ತ ಮಾರ್ಗದರ್ಶನ ಮಾಡುವ ಮೂಲಕ ನಗರದಲ್ಲಿ ಶಾಂತಿ ನೆಲೆಸಲು ಸಹಕರಿಸಬೇಕೆಂದು ಮನವಿ ಮಾಡಲಾಗಿದೆ.
ಈ ವೇಳೆ ತುಮಕೂರು ನಾಗರಿಕ ಸೌಹಾರ್ಧ ವೇದಿಕೆಯ ಮುಖಂಡರಾದ ಜಮಾಆತೆ ಅಧ್ಯಕ್ಷರಾದ ಪ್ರೊ.ಅಸಾದುಲ್ಲಾ ಖಾನ್,ಹನೀಫ್‍ವುಲ್ಲಾ, ಅಲ್ಲಾಭಕಾಶ್, ಗೌಸ್‍ಪಾಷ್, ಉಬೇದ್‍ವುಲ್ಲಾ, ಪ್ರೋ.ಇರ್ಫಾನ್, ವಕೀಲರಾದ ಮೊಹಮದ್ ಅಲಿ ಮತ್ತಿತರರು ಉಪಸ್ಥಿತರಿದ್ದರು.