ತುಮಕೂರು:ಜಿಲ್ಲಾಡಳಿತವತಿಯಿಂದ ನಡೆಯುತ್ತಿರುವ 66ನೇ ಕನ್ನಡ ರಾಜೋತ್ಸವ ಕಾರ್ಯಕ್ರಮಕ್ಕೆ ಕನ್ನಡ ನಾಡು, ನುಡಿ, ನೆಲ, ಜಲದ ವಿಚಾರವಾಗಿ ಸದಾ ಹೋರಾಟ ನಡೆಸುತ್ತಿರುವ ಕನ್ನಡಪರ ಸಂಘಟನೆಗಳನ್ನು ಕಡೆಗಣ ಸುವ ಮೂಲಕ ಹೋರಾಟಗಾರರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಅಕಾಲಿಕ ಮರಣವನ್ನಪ್ಪಿದ ಚಲನಚಿತ್ರ ನಟ ಪುನಿತ್ ರಾಜಕುಮಾರ್ ಅವರಿಗೆ ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಸಭೆಯ ನಂತರ ಮಾತನಾಡಿದ ಮುಖಂಡರುಗಳು, ಕನ್ನಡ ನೆಲ, ಜಲ, ಭಾಷೆಯ ಬಗ್ಗೆ ಹತ್ತಾರು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿರುವ ಸಂಘಟನೆಗಳನ್ನು ಸೌಜನ್ಯಕ್ಕೂ ನಾಡ ಹಬ್ಬ ಆಚರಣೆಗೆ ಆಹ್ವಾನಿಸದೆ ಕಡೆಗಣ ಸಿರುವುದು ಸರಿಯಲ್ಲ. ಜಿಲ್ಲಾಡಳಿತದ ಈ ಧೋರಣೆ ಖಂಡನೀಯ ಎಂದರು.
ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮಾತನಾಡಿ, ಈ ಹಿಂದಿನ ಜಿಲ್ಲಾಧಿಕಾರಿಗಳು ಕನ್ನಡಪರ ಸಂಘಟನೆಗಳನ್ನು ಪ್ರತಿ ನಾಡ ಹಬ್ಬದ ಸಂದರ್ಭದಲ್ಲಿಯೂ ಆಹ್ವಾನಿಸಿ,ನಮ್ಮ ಆಹವಾಲುಗಳನ್ನು ಮನ್ನಿಸುತ್ತಿದ್ದರು.ಆದರೆ ಕಳೆದ ಎರಡು ವರ್ಷಗಳಿಂದ ಕೋರೋನ ಹೆಸರಿನಲ್ಲಿ ಕನ್ನಡಪರ ಸಂಘಟನೆಗಳನ್ನು ಮರೆತಿದೆ.ಈ ಧೋರಣೆ ತೊಲಗಬೇಕು. ಹಾಗೆಯೇ ಕನ್ನಡ ರಾಜೋತ್ಸವ ಆಚರಣೆಗೆ ಅವಕಾಶ ಕಲ್ಪಿಸಬೇಕು ಎಂದು ಧನಿಯಕುಮಾರ್ ಆಗ್ರಹಿಸಿದರು.
ಕನ್ನಡ ಸಂಘಟನೆಯ ಅರುಣ್‍ಕುಮಾರ್ ಮಾತನಾಡಿ, ಜಿಲ್ಲಾಡಳಿತಕ್ಕೆ ಒಂದು ವಾರದ ಮೊದಲೇ ರಾಜೋತ್ಸವದ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳನ್ನು ಪರಿಗಣ ಸುವಂತೆ ಮನವಿ ಮಾಡಲಾಗಿತ್ತು. ಆದರೆ ಜಿಲ್ಲಾಡಳಿತ ನಮ್ಮನ್ನು ನಿರ್ಲಕ್ಷಿಸಿದೆ.ಅಲ್ಲದೆ ಒಂದೆಡೆ ನಗರದ ವಿವಿಧ ಸರ್ಕಲ್‍ಗಳಲ್ಲಿ ಕನ್ನಡ ರಾಜೋತ್ಸವ ಆಚರಣೆಗೆ ಮೊದಲು ಅನುಮತಿ ನೀಡಿ, ನಂತರ ಪೊಲೀಸ್ ಇಲಾಖೆಯ ಮೂಲಕ ಇನ್ನಿಲ್ಲದ ನಿಯಮಗಳನ್ನು ಜಾರಿಗೆ ತಂದು ನಾಡಹಬ್ಬ ಆಚರಣೆಗೆ ಅಡ್ಡಿಯುಂಟು ಮಾಡುತ್ತಿದೆ.ಒಂದು ವೇಳೆ ಜಿಲ್ಲಾಡಳಿತ ರಾಜೋತ್ಸವ ಆಚರಣೆಗೆ ಅವಕಾಶ ಕಲ್ಪಿಸದಿದ್ದರೆ ಸರಕಾರದ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ದೂರವಾಣ ಮೂಲಕ ಕನ್ನಡಪರ ಸಂಘಟನೆಗಳ ಮುಖಂಡರ ಜೊತೆ ಮಾತನಾಡಿದ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಕಾರ್ಯಕ್ರಮದ ನಂತರ ಕನ್ನಡ ಪರ ಸಂಘಟನೆಗಳ ಮುಖಂಡರ ಜೊತೆಗೆ ಮಾತುಕತೆ ನಡೆಸಿ,ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ನೀಡಿದ್ದಾರೆ.
ಆಗಲಿದ ಯುವರತ್ನನಿಗೆ ಕಂಬಿನಿ ಮಿಡಿದ ಕನ್ನಡಪರ ಸಂಘಟನೆಗಳು:ಪುನಿತ್ ರಾಜ್‍ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕನ್ನಡಪರ ಸಂಘಟನೆಗಳ ಮುಖಂಡರು,ಪುನಿತ್ ರಾಜಕುಮಾರ್ ನಟನೆಯಲ್ಲಿ ತಮ್ಮ ತಂದೆಯನ್ನು ಮೀರಿಸಿದ ನಟ. ಭಕ್ತ ಪ್ರಹ್ಲಾದ ಸಿನಿಮಾದ ಅವರ ಮನೋಜ್ಞ ಅಭಿನಯವೇ ಇದಕ್ಕೆ ಸಾಕ್ಷಿ. ಬೆಟ್ಟದ ಹೂವು ಸೇರಿದಂತೆ ಅನೇಕ ಚಿತ್ರಗಳಲ್ಲಿ ಮನದುಂಬಿ ನಟಿಸುವ ಮೂಲಕ ಕನ್ನಡಿಗರ ಮನೆ ಮಾತಾಗಿದ್ದರು. ಇಂದು ಇಡೀ ಕರ್ನಾಟಕದ ಪ್ರತಿ ಮನೆಯಲ್ಲಿಯೂ ಸೂತಕದ ಛಾಯೆ ಕಾಣುತ್ತಿದೆ. ಕನ್ನಡ ಚಿತ್ರರಂಗವಲ್ಲದೆ, ಭಾರತೀಯ ಚಿತ್ರರಂಗಕ್ಕೂ ಪುನಿತ್ ಸಾವು ತುಂಬಲಾರದ ನಷ್ಟವನ್ನು ಉಂಟು ಮಾಡಿದೆ ಎಂದು ಆತೀವ ಶೋಕವನ್ನು ಮುಖಂಡರು ವ್ಯಕ್ತಪಡಿಸಿದರು.
ಈ ವೇಳೆ ಕನ್ನಡಪರ ಸಂಘಟನೆಗಳ ಮುಖಂಡರಾದ ಉಮೇಶ್, ಸೋಮಶೇಖರ್, ಟಿ.ಇ.ರಘುರಾಮ್, ಆನಂದ್, ಕನ್ನಡ ಪ್ರಕಾಶ್, ಮುಬಾರಕ್ ಪಾಷ, ಪ್ರದೀಪ್‍ಕುಮಾರ್, ರಕ್ಷಿತ್, ರಾಕೇಶ್, ಕಿರಣ್, ಬಾಲು, ನಾಣ , ಸತೀಶ್ ಮತ್ತಿತರರು ಪಾಲ್ಗೊಂಡಿದ್ದರು.