ತುಮಕೂರು: ನಗರದ ಲೋಕಸಭಾ ಸದಸ್ಯರಾದ ಜಿ.ಎಸ್. ಬಸವರಾಜ್ ಅವರ ಕಚೇರಿಯಲ್ಲಿ ಮಹಾತ್ಮಗಾಂಧೀಜಿಯವರ 152ನೇ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ 117ನೇ ಜನ್ಮ ದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನೆರವೇರಿಸಲಾಯಿತು
.
ಈ ಸಂದರ್ಭದಲ್ಲಿ ಸಂಸದರಾದ ಜಿ.ಎಸ್. ಬಸವರಾಜ್ ಮಾತನಾಡಿ, ಮಹಾತ್ಮಗಾಂಧೀಜಿಯವರು ರಾಷ್ಟ್ರಪಿತ, ವಿಶ್ವಪಿತ, ಅಹಿಂಸಾವಾದಿ, ಮೂಲಪುರುಷ ಇವರ ಹುಟ್ಟು ಹಬ್ಬದ ಪ್ರಯುಕ್ತ ರಾಷ್ಟ್ರದ 75ನೇ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ನಿಮಿತ್ತ ರಾಷ್ಟ್ರಾದ್ಯಂತ ಪ್ರದಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಮಹತ್ತರ ಸಂದೇಶ ನೀಡಿರುವುದು ರಾಷ್ಟ್ರಪಿತ ಮಹಾತ್ಮಗಾಂಧಿಜಿಯವರಿಗೆ ಗೌರವ ಸಲ್ಲಿಸಲು ಕರೆ ನೀಡಿದ್ದಾರೆ ಎಂದರು.
ಮಹಾತ್ಮಗಾಂಧಿಜಿಯವರು ಖಾದಿ ಬಟ್ಟೆಗೆ ಆಧ್ಯತೆ ಕೊಡುತ್ತಿದ್ದರು, ಅದರಂತೆ ಪ್ರದಾನಿ ನರೇಂದ್ರ ಮೋದಿಯವರೂ ಸಹ ಮಹಾತ್ಮಗಾಂಧಿ ಜಯಂತಿ ಅಂಗವಾಗಿ ದೇಶದ ಜನತೆ ಖಾದಿ ಉಡುಪುಗಳನ್ನು ತೊಡುವಂತೆ ಕರೆ ನೀಡಿರುವುದು ಒಳ್ಳೆಯ ಸಂದೇಶವಾಗಿದೆ ಎಂದು ಹೇಳಿದರು.
ಪ್ರಕೃತಿಯನ್ನು ಸಂರಕ್ಷಿಸಲು ಪ್ರತಿಯೊಬ್ಬ ಭಾರತೀಯ ಕೂಡ ಒಂದೊಂದು ಸಸಿ ನೆಡುವ ಮೂಲಕ ರಾಷ್ಟ್ರದ ಸಂಪತ್ಪಭರಿತ ಸಸ್ಯ ಸಂಪತ್ತನ್ನು ರಕ್ಷಣೆ ಮಾಡುವಂತೆ ಪ್ರದಾನಿ ನರೇಂದ್ರ ಮೋದಿಯವರು ಕರೆ ಕೊಟ್ಟಿದ್ದಾರೆ. ಆದುದರಿಂದ ನಾವೆಲ್ಲರೂ ಸಹ ಒಂದೊಂದು ಗಿಡ ನೆಟ್ಟು ಪೋಷಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗುರುಸಿದ್ಧಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.