ಹೊರಪೇಟೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ನ.14:- ತುಮಕೂರು ನಗರದ ಹೊರಪೇಟೆಯಲ್ಲಿ ವಾರ್ಡ್ ಸದಸ್ಯ ಮತ್ತು ಬೀದಿ ಬದಿ ವ್ಯಾಪಾರಿಗಳ ಸಂಘದ ವತಿಯಿಂದ
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾತು ವಾರ್ಡ್ ಸದಸ್ಯ ಇನಾಯತ್ ಉಲ್ಲಾ ಮತ್ತು ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಭದ್ರೇಗೌಡ ಅವರಿಂದ ಕನ್ನಡ ಭುನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಪಾಲಿಕೆ ಸದಸ್ಯ ಇನಾಯತ್ ಉಲ್ಲಾ ಮಾತನಾಡಿ ನಮ್ಮ ವಾರ್ಡ್ ನಲ್ಲಿ ರಾಜ್ಯೋತ್ಸವ ಆಚರಣೆ ಮಾಡುತ್ತಿರುವುದು ಖುಷಿಯ ವಿಚಾರ ನಾವುಗಳು ಎಲ್ಲರೊಂದಿಗೆ ನಾಡು ನುಡಿ ಕಲೆ ಸಂಸ್ಕ್ರತಿ ರಕ್ಷಣೆ ಬಗ್ಗೆ ಹೋರಾಡುತ್ತೇವೆ ವಾರ್ಡ್ ನ ಎಲ್ಲಾ ಸಾರ್ವಜನಿಕರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳು ಎಂದು ಶುಭ ಕೋರಿದರು.
ನನ್ನ ವಾರ್ಡ್ ನಲ್ಲಿ ಮಳೆ ಚಳಿ ಬಿಸಿಲೇನ್ನದೇ ಬೀದಿ ಬದಿಯ ವ್ಯಾಪಾರಿಗಳು ಜೀವನೋಪಾಯಕ್ಕಾಗಿ ಹಗಲಿರುಳು ದುಡಿಯುತ್ತಾರೆ ಇವರಿಗೆ ವ್ಯಾಪಾರ ಮಾಡಲು ಮಳಿಗೆಗಳನ್ನು ಕಟ್ಟಿಸಲಾಗುವುದು ಈ ಸಂಬಂಧ ಮಹಾನಗರ ಪಾಲಿಕೆಯ ಆಯುಕ್ತ ರೊಂದಿಗೆ ಜಿಲ್ಲಾಧಿಕಾರಿಗಳ ಬಳಿ ನಿಯೋಗ ಹೋಗಿ ಅಂಗಡಿ ಮಳಿಗೆ ನಿರ್ಮಾಣಕ್ಕೆ ಶ್ರಮಿಸುವುದಾಗಿ ತಿಳಿಸಿದರು.
ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಭದ್ರೇಗೌಡ ಮಾತನಾಡಿ ನಗರದ ಪ್ರತಿಯೊಂದು ವಾರ್ಡ್ ಗಳಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಘಟನೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಇಲ್ಲಿ ಯಾವುದೇ ಜಾತಿ ಮತ ಪಂಥಗಳನ್ನೆದೆ ನಾಡು ನುಡಿಗೆ ಶ್ರಮಿಸುವ ಕೆಲಸ ಮಾಡಲಾಗುವುದು ಎಂದರಲ್ಲದೇ ಹೊರಪೇಟೆ ಸರ್ಕಲ್ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ ದಾರಿ ದೀಪ ಚಾರಿಟಬಲ್ ಟ್ರಸ್ಟ್ ನ ಅಂಧ ಮಕ್ಕಳಿಗೆ ಬೀದಿ ಬದಿಯ ವ್ಯಾಪಾರಿಗಳ ಸಂಘದಿಂದ ಹಣ್ಣು ಮತ್ತು ತರಕಾರಿ ದಿನಸಿ ಪದಾರ್ಥಗಳನ್ನು ವಿತರಿಸಲಾಗುವುದು ಎಂದು ಈ ವೇಳೆ ತಿಳಿಸಿದರು.
ರಾಜ್ಯೋತ್ಸವ ಆಚರಣೆಯಲ್ಲಿ ಬೀದಿ ಬದಿ ವ್ಯಾಪಾರಿ ಸಂಘದ ಪದಾಧಿಕಾರಿಗಳು ಸೇರಿದಂತೆ ಮಹಿಳಾ ಸದಸ್ಯರು ವಾರ್ಡ್ ನ ಸಾರ್ವಜನಿಕರು ಉಪಸ್ಥಿತಿ ಇದ್ದರು.