ತುಮಕೂರು: ಜಿಲ್ಲೆಯ ಗೊಲ್ಲಹಳ್ಳಿಯಲ್ಲಿರುವ ಜವಾಹರ್ ನವೋದಯ ವಿದ್ಯಾಲಯದ ೬ನೇ ತರಗತಿ ಪ್ರವೇಶಕ್ಕೆ ಜನವರಿ ೧೮ರಂದು ಬೆಳಿಗ್ಗೆ ೧೧-೩೦ ರಿಂದ ಮಧ್ಯಾಹ್ನ ೧.೩೦ ಗಂಟೆಯವರೆಗೆ ಪ್ರವೇಶ ಪರೀಕ್ಷೆ ನಡೆಸಲಾಗುವುದು. ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ
ಜಿಲ್ಲೆಯ ವಿದ್ಯಾರ್ಥಿಗಳು ನವೋದಯ ಸಮಿತಿಯ ಜಾಲತಾಣ www.navodaya.gov.in ಮೂಲಕ ಪ್ರವೇಶ ಪತ್ರವನ್ನು
ಪಡೆಯಬಹುದಾಗಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪ್ರವೇಶ ಪತ್ರದೊಂದಿಗೆ ತಮ್ಮ ಆಧಾರ್ ಕಾರ್ಡ್ ಅಥವಾ
ವಾಸಸ್ಥಳ ದೃಢೀಕರಣ ಪತ್ರವನ್ನು ಹೊಂದಿರಬೇಕೆAದು ವಿದ್ಯಾಲಯದ ಪ್ರಾಚಾರ್ಯ ಶ್ರೀಕಲಾ ಜೆ. ತಿಳಿಸಿದ್ದಾರೆ.