ತುಮಕೂರು: ತಿಗಳ ಸಮಾಜದ ಹಿರಿಯ ಮುಖಂಡ, ನಗರದ ಅಗ್ನಿಬನ್ನಿರಾಯಸ್ವಾಮಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ
ಟಿ.ಎಲ್.ಕುಂಭಯ್ಯ ಅವರ ೭೯ನೇ ಹುಟ್ಟು ಹಬ್ಬವನ್ನು ಸಮಾಜದ ಮುಖಂಡರು ಸೇರಿ ಆಚರಿಸಿ ಸಂಭ್ರಮಿಸಿದರು.
ಬುಧವಾರ ನಗರದ ಹನುಮಂತಪುರದ ಕೊಲ್ಲಾಪುರದಮ್ಮ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ
ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಟಿ.ಎಲ್.ಕುಂಭಯ್ಯನವರಿಗೆ ಜನ್ಮದಿನದ ಶುಭಾಶಯ ಕೋರಿ, ಸಮಾಜದ ಸಂಘಟನೆ,
ಸೌಹಾರ್ದತೆಗೆ ಹೆಸರಾದ ಕುಂಭಯ್ಯನವರು, ಹಲವು ರೀತಿಯಲ್ಲಿ ಸಮಾಜಕ್ಕೆ ನೆರವಾಗುತ್ತಾ ಎಲ್ಲಾ ಸಮಾಜದವರ ಪ್ರೀತಿ, ವಿಶ್ವಾಸಕ್ಕೆ
ಪಾತ್ರರಾಗಿದ್ದಾರೆ ಎಂದರು.
೭೯ನೇ ವಯಸ್ಸಿನಲ್ಲೂ ಸದಾ ಚಟುವಟಿಕೆಯಿಂದ ಸಮಾಜದ ಕಾರ್ಯದಲ್ಲಿ ತೊಡಗಿಕೊಂಡಿರುವ ಇವರು ಅಸಹಾಯಕರಿಗೆ
ಸಹಾಯಾಸ್ತ ಚಾಚುತ್ತಾ, ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡುತ್ತಾ ನೆರವಾಗುತ್ತಿದ್ದಾರೆ. ಇಂತಹ
ಹಿರಿಯರು ಸಮಾಜಕ್ಕೆ ದೊಡ್ಡ ಕೊಡುಗೆಯಾಗಿದ್ದಾರೆ ಎಂದು ಅಭಿನAದಿಸಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ಮಾತನಾಡಿ, ಟಿ.ಎಲ್.ಕುಂಭಯ್ಯನವರು ಈ ಸಮಾಜದ ದೊಡ್ಡ ಶಕ್ತಿ, ತಮ್ಮ
ಸಜ್ಜನಿಕೆ, ಸನ್ನಡತೆಯಿಂದ ಜಿಲ್ಲೆಯಾದ್ಯಂತ ಜನರ ಪ್ರೀತಿ ಗಳಿಸಿದ್ದಾರೆ. ಒಳ್ಳೆಯ ದಾರಿಯಲ್ಲಿ ಸಾಗಿ, ಜೀವನವನ್ನು
ಉತ್ತಮಪಡಿಸಿಕೊಂಡು ಬಾಳಿದರೆ ಎಲ್ಲರೂ ಗೌರವಿಸುವ ಆದರ್ಶ ವ್ಯಕ್ತಿಯಾಗಬಹುದು ಎಂಬುದಕ್ಕೆ ಕುಂಭಯ್ಯನವರು ನಮ್ಮ
ಮುಂದಿರುವ ಪ್ರತ್ಯಕ್ಷ ಉದಾಹರಣೆಯಾಗಿದ್ದಾರೆ ಎಂದರು. ಜೆಡಿಎಸ್ ಮುಖಂಡ ಯೋಗಾನಂದಕುಮಾರ್ ಮಾತನಾಡಿ, ಸಮಾಜದ
ಕೆಲಸಗಳಾಗಲಿ, ಯಾವುದೇ ಕುಟುಂಬದ ಸಮಸ್ಯೆಗಳಾಗಲಿ ಕುಂಭಯ್ಯನವರು ಮುಂದೆ ನಿಂತು ನಿರ್ವಹಿಸುತ್ತಾರೆ, ಕುಟುಂಬದ ಆಸ್ತಿ ಹಂಚಿಕೆ ವಿವಾದವನ್ನೂ ತಿಗಳ ಸಮಾಜದ ಯಜಮಾನರ ನೇತೃತ್ವದಲ್ಲಿ ಸೌಹಾರ್ದಯುತವಾಗಿ ಬಗೆಹರಿಸಿ ಎಲ್ಲರ ವಿಶ್ವಾಸ ಗಳಿಸಿದ್ದಾರೆ ಎಂದರು.
ನಗರ ಸಭೆ ಮಾಜಿ ಅಧ್ಯಕ್ಷ ಟಿ.ಹೆಚ್.ಜಯರಾಮ್ ಮತ್ತಿತರರು ಕುಂಭಯ್ಯನವರನ್ನು ಅಭಿನಂದಿಸಿ ಮಾತನಾಡಿದರು.
ತಿಗಳ ಸಮಾಜದ ಯಜಮಾನರುಗಳಾದ ಗಂಗಹನುಮಯ್ಯ, ಹನುಮAತರಾಜು, ಕುಮಾರಣ್ಣ, ನಗರ ಪಾಲಿಕೆ ಮಾಜಿ
ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಸದಸ್ಯರಾದ ಎ.ಶ್ರೀನಿವಾಸ್, ಟಿ.ಹೆಚ್.ವಾಸುದೇವ್, ರಾಮಕೃಷ್ಣಪ್ಪ, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ
ಟಿ.ಆರ್.ನಾಗರಾಜ್, ಮುಖಂಡರಾದ ರವೀಶ್ ಜಹಂಗೀರ್, ಗಂಗಣ್ಣ, ಟಿ.ಎನ್.ಶಿವಣ್ಣ ಸೇರಿದಂತೆ ಸಮಾಜದ ವಿವಿಧ ಮುಖಂಡರು
ಭಾಗವಹಿಸಿದ್ದರು. ಈ ವೇಳೆ ಬೃಹತ್ ಕೇಕ್ ಕತ್ತರಿಸಿ ಕುಂಭಯ್ಯನವರ ಜನ್ಮದಿನ ಆಚರಿಸಿ ಸಂಭ್ರಮಿಸಿದರು.