breaking news

ಎಸ್ಎಸ್ಐಟಿ ಕ್ಯಾಂಪಸ್ ಆವರಣದಲ್ಲಿ ಪತ್ರಕರ್ತರ ರಾಜ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ

ಎಸ್ಎಸ್ಐಟಿ ಕ್ಯಾಂಪಸ್ ಆವರಣದಲ್ಲಿ ಪತ್ರಕರ್ತರ ರಾಜ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ
ಪತ್ರಕರ್ತರ ರಾಜ್ಯ ಸಮ್ಮೇಳನ ಯಶಸ್ವಿಗೊಳಿಸಲು ಸಾರ್ವಜನಿಕರ ಪಾತ್ರವೂ ಬಹು ಮುಖ್ಯ:

ತುಮಕೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮೊದಲ ಬಾರಿಗೆ ಕಲ್ಪತರು ನಗರಿಯಲ್ಲಿ ರಾಜ್ಯಮಟ್ಟದ 39ನೇ ಸಮ್ಮೇಳನ ನಡೆಯುತ್ತಿದ್ದು ತುಮಕೂರಿನಲ್ಲಿ ನಡೆಯುವ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನ ಹತ್ತು ಹಲವು ವಿಶೇಷತೆಗಳಿಂದ ಕೂಡಿದ್ದು ಜಿಲ್ಲಾ ಉಸ್ತುವಾರಿ ಸಚಿವ ಡಾ ಜಿ ಪರಮೇಶ್ವರ್ ಸಹಕಾರ ಸಚಿವ ಕೆ ಎನ್ ರಾಜಣ್ಣ ಕೇಂದ್ರ ಸಚಿವ ವಿ. ಸೋಮಣ್ಣ ಸೇರಿದಂತೆ ಜಿಲ್ಲೆಯ ಹಲವು ರಾಜಕಾರಣಿಗಳು ವಿವಿಧ ಜನಪ್ರತಿನಿಧಿಗಳ ಸಹಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶಯದಿಂದ ಪತ್ರಕರ್ತರ ರಾಜ್ಯ ಸಮ್ಮೇಳನ ಯಶಸ್ವಿಗೊಳ್ಳಲಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಚೀನಿ ಪುರುಷೋತ್ತಮ ಅವರು ತಿಳಿಸಿದರು.

ನಗರದ ಕುಣಿಗಲ್ ರಸ್ತೆಯ ಎಸ್ ಎಸ್ ಐ ಟಿ ಕಾಲೇಜ್ ಕ್ಯಾಂಪಸ್ ಆವರಣದಲ್ಲಿ ಆಯೋಜನೆ ಮಾಡಲಾಗಿರುವ ಪತ್ರಕರ್ತರ ರಾಜ್ಯ ಮಟ್ಟದ 39ನೇ ರಾಜ್ಯ ಸಮ್ಮೇಳನದ ವೇದಿಕೆ ನಿರ್ಮಾಣ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿ, ರಾಜ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗೊಳಿಸಿ ಮಾತನಾಡಿದವರು ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುವ ಪತ್ರಕರ್ತರುಗಳಿಗೆ ಆತಿಥ್ಯವನ್ನು ನೀಡುವ ಹೊಣಗಾರಿಕೆ ತುಮಕೂರು ಜಿಲ್ಲೆಯದಾಗಿದ್ದು ಜಿಲ್ಲೆಯ ಎಲ್ಲಾ ಸಾರ್ವಜನಿಕರ ಪಾತ್ರವೂ ಬಹಳ ಮುಖ್ಯವಾಗಿದ್ದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತುಮಕೂರು ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ವಿವಿಧ ಎಲ್ಲಾ ಸಂಘ ಸಂಸ್ಥೆಗಳು, ಕೈಗಾರಿಕೆಗಳು, ಉದ್ಯಮಿಗಳು ಸೇರಿದಂತೆ ಸಾರ್ವಜನಿಕ ವಲಯದ ವಿವಿಧ ಗಣ್ಯರು ಪತ್ರಕರ್ತರ ರಾಜ್ಯ ಸಮ್ಮೇಳನ ಯಶಸ್ಸಿಗೆ ಶ್ರಮಿಸುತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯ ಕಾಲೇಜ್ ಕ್ಯಾಂಪಸ್ ಆವರಣದಲ್ಲಿ ಈಗಾಗಲೇ ಬೃಹತ್ ಗಾತ್ರದ ವೇದಿಕೆ ನಿರ್ಮಾಣವಾಗುತ್ತಿದ್ದು ಊಟ ತಿಂಡಿ ತಯಾರಿಗಾಗಿ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಜನವರಿ 18ರಂದು ಬೆಳಗ್ಗೆ 8:30 ಕ್ಕೆ ಸರಿಯಾಗಿ ಟೌನ್ ಹಾಲ್ ವೃತ್ತದಿಂದ ಕಾಲೇಜ್ ಕ್ಯಾಂಪಸ್ ಆವರಣದವರೆಗೂ ಪೂರ್ಣ ಕುಂಭ ಕಳಶ ಸ್ವಾಗತದೊಂದಿಗೆ ಜಿಲ್ಲೆಯ ವಿವಿಧ ಮಠಾಧೀಶರುಗಳು ಮೆರವಣಿಗೆಗೆ ಚಾಲನೆ
ನೀಡಲಿದ್ದು ಈ ಮೆರವಣಿಗೆಯನ್ನ ಗೃಹ ಸಚಿವ ಜಿ ಪರಮೇಶ್ವರ್ ಅವರು ಉದ್ಘಾಟಿಸಲಿದ್ದಾರೆ, ವಿವಿಧ ಜಾನಪದ ಕಲಾ ಪ್ರಕಾರಗಳು, ನೃತ್ಯಗಳು ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸ್ತಬ್ಧ ಚಿತ್ರಗಳು ಇರಲಿದ್ದು ವಿವಿಧ ಜಿಲ್ಲೆಗಳಿಂದ ಆಗಮಿಸುವ ಪತ್ರಕರ್ತರುಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದ್ದು ಈ ಮೆರವಣಿಗೆಯಲ್ಲಿ ಸುಮಾರು 5000ಕ್ಕೂ ಹೆಚ್ಚು ಜನರು ಸೇರಲಿದ್ದಾರೆ ಎಂದು ಮಾಹಿತಿ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಕಲ್ಪತರು ನಗರಿಯಲ್ಲಿ ನಡೆಯುವ 39ನೇ ರಾಜ್ಯಮಟ್ಟದ ಸಮ್ಮೇಳನವನ್ನು ಉದ್ಘಾಟನೆ ಮಾಡಲಿದ್ದು ಈ ಸಮ್ಮೇಳನದ ದಿವ್ಯ ಸಾನಿಧ್ಯವನ್ನು ಸಿದ್ದಗಂಗಾ ಮಠದ ಪೀಠಾಧಿಪತಿಗಳಾದ ಸಿದ್ಧಲಿಂಗ ಶ್ರೀಗಳು ವಹಿಸಲಿದ್ದಾರೆ ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಸಚಿವರು ವಿವಿಧ ಜಿಲ್ಲೆಯ ಪತ್ರಕರ್ತರುಗಳು, ಪತ್ರಿಕೆ ಟಿವಿ ಕಚೇರಿಗಳ ಮುಖ್ಯಸ್ಥರುಗಳು ಈ ಸಂದರ್ಭವನ್ನು ಸಾಕ್ಷಿಕರಿಸಲಿದ್ದಾರೆ ಇನ್ನೂ ವಿವಿಧ ಜಿಲ್ಲೆಗಳಿಂದ ಆಗಮಿಸುವ ಪತ್ರಕರ್ತರುಗಳಿಗೆ ಕಲ್ಪತರು ನಾಡಿನ ಸ್ಮರಣೀಯ ಕ್ಷಣಗಳನ್ನು ಅವರ ಮನದಲ್ಲಿ ಉಳಿಸುವ ಸಲುವಾಗಿ ತುಮಕೂರು ನಗರದ ಸೌಂದರ್ಯವನ್ನ ತೋರಿಸುವ ಕೆಲಸವನ್ನ ಸಾರಿಗೆ ಸಮಿತಿಯವರು ವಹಿಸಿಕೊಂಡಿದ್ದು ಈ ಸಂದರ್ಭದಲ್ಲಿ ತುಮಕೂರು ಅಮಾರಿಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಇನ್ನೂ ಹತ್ತಿರದಲ್ಲೇ ಇರುವ ನಾಮದ ಚಿಲುಮೆ, ದೇವರಾಯನ ದುರ್ಗ, ಮೈದಾಳ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳ ದರ್ಶನ ಮಾಡಿಸುವ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಇದಾದ ನಂತರ ಪತ್ರಕರ್ತರುಗಳಿಗಾಗಿ ವಿವಿಧ ಗೋಷ್ಠಿಗಳನ್ನು ಆಯೋಜನೆ ಮಾಡಿದ್ದು ಇದೇ ಸಂಜೆ ರಾಜ್ಯದ ಖ್ಯಾತ ಗಾಯಕಿ ಶಮಿತಾ ಮಲ್ನಾಡ್ ಅವರ ಸಂಗೀತ ರಸಸAಜೆ ಆಯೋಜನೆ ಮಾಡಿದ್ದು ಈ ಕಾರ್ಯಕ್ರಮಕ್ಕೆ ತುಮಕೂರು ಜಿಲ್ಲೆಯ ಎಲ್ಲಾ ಸಾರ್ವಜನಿಕರುಗಳು ಭಾಗಿಯಾಗಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಇನ್ನು ಸಮ್ಮೇಳನಕ್ಕೆ ಆಗಮಿಸುವ ಪತ್ರಕರ್ತರು ಸೇರಿದಂತೆ ಸಾರ್ವಜನಿಕರಿಗಾಗಿ ತುಮಕೂರು ಜಿಲ್ಲೆಯ ವಿಶೇಷ ಖಾದ್ಯಗಳನ್ನು ಉಣಬಡಿಸಲಾಗುತ್ತಿದ್ದು ಸಮ್ಮೇಳನದಲ್ಲಿ ಆಯೋಜನೆ ಮಾಡುವ ವಸ್ತು ಪ್ರದರ್ಶನ ಎಲ್ಲರನ್ನ ಕೈಬೀಸಿ ಕರೆಯಲಿದೆ, ಕ್ಯಾಂಪಸ್ ಆವರಣದಲ್ಲಿರುವ ಗ್ಲೋಬಲ್ ಲೈಬ್ರರಿ ಮುಖ್ಯ ಆಕರ್ಷಣೆವಾಗಿದೆ, ಕಾರ್ಯಕ್ರಮದ ಮಧ್ಯದಲ್ಲಿ ಮೂಡಿ ಬರಲಿರುವ ಗೀತಗಾಯನ ಎಲ್ಲರನ್ನ ವೇದಿಕೆಯತ್ತ ಸೆಳೆಯಲಿದ್ದು ಸದಾ ಒತ್ತಡದಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಈ ಸಮ್ಮೇಳನ ರಸದೌತಣದ ಸಂತೆಯAತೆ ಕಾಣ ಸಿಗಲಿದೆ, ಹೀಗೆ
ಹತ್ತು ಹಲವು ವಿಶೇಷತೆಗಳಿಂದ ಕೊಡಿದ್ದು 39ನೇ ರಾಜ್ಯ ಸಮ್ಮೇಳನದಲ್ಲಿ ಸಾರ್ವಜನಿಕರ ಸಹಭಾಗಿತ್ವ ಬಹಳ ಮುಖ್ಯವಾಗಿದ್ದು ಪತ್ರಕರ್ತರುಗಳ
ಕುಟುಂಬಸ್ಥರು ಮತ್ತು ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಾಗಿಯಾಗುವುದರ ಮೂಲಕ ಕಲ್ಪತರು ನಗರಿಯಲ್ಲಿ ಪ್ರಥಮ ಬಾರಿಗೆ ಆಯೋಜನೆ ಮಾಡಲಾಗಿರುವ 39ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಮಾತನಾಡಿ ತುಮಕೂರು ಜಿಲ್ಲೆ ವಿಶೇಷ ಎಂದರೆ ರಂಗಭೂಮಿ ಕಲೆ ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ ಪತ್ರಿಕೋದ್ಯಮ ಕ್ಷೇತ್ರವನ್ನು ಕಟ್ಟಿ ಬೆಳೆಸಿದ ಕಡುಗಲಿಗಳು ಇಲ್ಲಿ ನೆಲೆಸಿದ್ದು, ಇಲ್ಲಿನ ಪತ್ರಿಕಾ ರಂಗದ ಮಿತ್ರರುಗಳು ರಾಜ್ಯ ರಾಷ್ಟ್ರೀಯ ಮಟ್ಟದಲ್ಲಿ ಸೇವೆಗಳನ್ನ ಮಾಡುತ್ತಿದ್ದು ಇವರುಗಳೆಲ್ಲರನ್ನ ಕರೆದು ಒಗ್ಗೂಡಿಸಿಕೊಂಡು ಕಾರ್ಯಕ್ರಮವನ್ನು ರೂಪಿಸುವದೇ ಸಮ್ಮೇಳನದ ಮುಖ್ಯ ಭಾಗವಾಗಿದ್ದು ಸಮ್ಮೇಳನದ ಯಶಸ್ಸಿಗೆ ಶ್ರಮಿಸಿರುವ ನಮ್ಮ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಸಂಘ ಸಂಸ್ಥೆಯ ಮುಖAಡರುಗಳು ಕೈಗಾರಿಕೋದ್ಯಮಿಗಳು ವಾಣಿಜ್ಯೋದ್ಯಮಿಗಳು ಹಾಗೂ ಪರೋಕ್ಷ ಮತ್ತು ಪ್ರತ್ಯಕ್ಷವಾಗಿ ಸಹಕರಿಸಿರುವ ಎಲ್ಲರಿಗೂ ಅಭಿನಂದನೆಗಳನ್ನ ಸಂಘದ ವತಿಯಿಂದ ತಿಳಿಸಲಿದೆ ಎಂದರು.

Invitation Letter Released for State Conference of Journalists at SSIT College Campus

Share this post

About the author

Leave a Reply

Your email address will not be published. Required fields are marked *