breaking news

ಸುದ್ದಿ ಮನೆಯಲ್ಲಿ ಕೆಲಸ ಮಾಡಿ ಯಶಸ್ವಿಯಾಗಿರುವ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ

ಸುದ್ದಿ ಮನೆಯಲ್ಲಿ ಕೆಲಸ ಮಾಡಿ ಯಶಸ್ವಿಯಾಗಿರುವ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ
ಸುದ್ದಿ ಮನೆಯಲ್ಲಿ ಕೆಲಸ ಮಾಡಿ ಯಶಸ್ವಿಯಾಗಿರುವ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ: ತುಮಕೂರು ಪತ್ರಕರ್ತರ ಸಂಘದಿಂದ ಅಭಿನಂದನೆ

ತುಮಕೂರು: ಕಲ್ಪತರು ನಗರಿ ತುಮಕೂರಿನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆಯುವ ರಾಜ್ಯ ಮಟ್ಟದ 39ನೇ
ಸಮ್ಮೇಳನ ಗರಿಗೆದರಿದ್ದು ತುಮಕೂರು ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ ಜನವರಿ 18 ಮತ್ತು 19ರಂದು ನಗರದ ಎಸ್ ಎಸ್ ಐ ಟಿ ಕಾಲೇಜು ಕ್ಯಾಂಪಸ್ ಆವರಣದಲ್ಲಿ ನಡೆಯಲಿದ್ದು ಹತ್ತು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಲಿರುವ ಪತ್ರಕರ್ತರ ರಾಜ್ಯಮಟ್ಟದ ಸಮ್ಮೇಳನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸುದ್ದಿ ಮನೆಯಲ್ಲಿ ಕೆಲಸ ಮಾಡುವ ವಿವಿಧ ಪತ್ರಿಕಾ ಚೇತನಗಳಿಗೆ ವಾರ್ಷಿಕ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು ಈ ಪ್ರಶಸ್ತಿಗಳನ್ನ ಕಲ್ಪತರು ನಾಡಿನಲ್ಲಿ ನಡೆಯುವ ಪತ್ರಕರ್ತರ ಸಮ್ಮೇಳನದಲ್ಲಿ ವಿತರಣೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಘಟಕ ಅಭಿನಂದನೆ ಸಲ್ಲಿಸಿದೆ.

ಜಿಲ್ಲಾಧ್ಯಕ್ಷ ಚಿನಿ. ಪುರುಷೋತ್ತಮ್ ಅವರು ಮಾತನಾಡಿ ತುಮಕೂರು ಜಿಲ್ಲೆ ಸಾಂಸ್ಕೃತಿಕ ಶೈಕ್ಷಣಿಕ ಕಲೆ ಸಾಹಿತ್ಯ ಸೇರಿದಂತೆ ಹಲವು ರಂಗಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ, ಅದೇ ರೀತಿಯಾಗಿ ಪತ್ರಿಕಾರಂಗ ಮತ್ತು ಪತ್ರಿಕೋದ್ಯಮದ ಹುಟ್ಟಿಗೂ ಕಾರಣವಾಗಿದ್ದು ಡಿ ವಿ ಗುಂಡಪ್ಪರನAತಹ ಮಹಾನ್ ಚೇತನಗಳು ಇಲ್ಲಿ ಬದುಕಿ ಬಾಳಿ ಪತ್ರಿಕಾ ಕ್ಷೇತ್ರಕ್ಕೆ ತಮ್ಮದೇ ಆದ ಕೊಡಗೆಗಳನ್ನ ನೀಡಿದ್ದಾರೆ ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ಪತ್ರಕರ್ತರ 39ನೇ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಕೆ ಯು ಡಬ್ಲ್ಯೂ ಜೆ ಯು ತನ್ನ ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಿಸಿ ವಿತರಣೆ ಮಾಡುತ್ತಿರುವುದು ಜಿಲ್ಲಾ ಸಂಘದ ಪದಾಧಿಕಾರಿಗಳಿಗೆ ಅತೀವ ಸಂತೋಷವನ್ನುಂಟು ಮಾಡಿದೆ ಎಂದು ತಿಳಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಘುರಾಮ್ ಮಾತನಾಡಿ ಕಳೆದು ತಿಂಗಳು ರಾಜ್ಯಮಟ್ಟದ ಕ್ರೀಡಾಕೂಟವನ್ನು ಯಶಸ್ವಿಯಾಗಿ ಮಾಡಿದ ಜಿಲ್ಲಾ ಸಂಘಕ್ಕೆ ಇದೀಗ ರಾಜ್ಯಮಟ್ಟದ ಸಮ್ಮೇಳನ ನಡೆಸಲು ಆತಿಥ್ಯವನ್ನು ವಹಿಸಿಕೊಂಡಿರುವುದು ನಮ್ಮ ಭಾಗ್ಯವೆನಿಸಿದಂತಾಗಿದೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಜಿ ಪರಮೇಶ್ವರ್ ಅವರ ಮಾರ್ಗದರ್ಶನ ಮತ್ತು ಆಶಯದಂತೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಈಗಾಗಲೇ ಕೈಗೊಂಡಿದ್ದು ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಪತ್ರಕರ್ತರಿಗೆ ಕಲ್ಪತರು ನಗರಿಯ ಊಟ, ವಸತಿ, ಸಾರಿಗೆ ಕಲೆ, ಸಾಹಿತ್ಯ, ಸಂಸ್ಕೃತಿ ಸೇರಿದಂತೆ ಇತರೆ
ತರಹೇವಾರಿ ವಿಧಾನಗಳ ಮೂಲಕ ತೃಪ್ತಿಪಡಿಸಲು ಅನೇಕ ರೀತಿಯ ಪುರೇಷಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Congratulations to the award winning journalists from KUWJ Tumkur Journalists Association

ಸುದ್ದಿ ಮನೆಯಲ್ಲಿ ಸದಾ ಕಾರ್ಯ ನಿರತರಾಗಿ ಕೆಲಸ ಮಾಡುವ ಪತ್ರಿಕೋದ್ಯಮದ ವಿವಿಧ ವಲಯಗಳನ್ನು ಗುರುತಿಸಿ ಕಾರ್ಯನಿರತ ಪತ್ರಕರ್ತರ ಸಂಘ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಣೆ ಮಾಡಿದ್ದು ಅವುಗಳು ಈ ಕೆಳಕಂಡAತೆ ಇವೆ. ವಾರ್ಷಿಕ ಪ್ರಶಸ್ತಿಗಳ ಪ್ರಕಟ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ತುಮಕೂರಿನಲ್ಲಿ ಜನವರಿ 18 ಮತ್ತು 19 ರಂದು ನಡೆಯಲಿರುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ
ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಅವರು ತಿಳಿಸಿದ್ದಾರೆ.

An annual award for successful journalists working in a news house

ಪ್ರಶಸ್ತಿಗಳ ವಿವರ ಇಂತಿದೆ.

  1. ಜಿ. ನಾರಾಯಣಸ್ವಾಮಿ ಪ್ರಶಸ್ತಿ (ಅತ್ಯುತ್ತಮ ಗ್ರಾಮಾಂತರ ವರದಿಗೆ)
    ಚಂದ್ರಶೇಖರ ಮುಕ್ಕುಂದಿ, ವಿಜಯ ಕರ್ನಾಟಕ, ಗಂಗಾವತಿ

ದಿಗಂಬರ ಮುರುಳೀಧರ ಪೂಜಾರ್, ಸಂಯುಕ್ತ ಕರ್ನಾಟಕ, ಗದಗ

  1. ಪಟೇಲ್ ಭೈರಹನುಮಯ್ಯ ಪ್ರಶಸ್ತಿ (ಅತ್ಯುತ್ತಮ ಮಾನವೀಯ ವರದಿಗೆ)
    ಪ್ರಸನ್ನ ಮನೋಹರ ಕುಲಕರ್ಣಿ, ಡೆಕ್ಕನ್ ಹೆರಾಲ್ಡ್, ಖಾನಾಪುರ.
    ರವಿರಾಜ್ ಆರ್ ಗಲಗಲಿ, ವಿಜಯ ಕರ್ನಾಟಕ, ಬಾಗಲಕೋಟೆ
  2. ಗಿರಿಧರ್ ಪ್ರಶಸ್ತಿ (ಅತ್ಯುತ್ತಮ ಅಪರಾಧ ವರದಿಗೆ)
    ಮಂಜುನಾಥ್.ಕೆ., ವಿಜಯವಾಣಿ, ಬೆಂಗಳೂರು
    ಶಕೀಲ ಚೌದರಿ, ಅ್ಜಲಪುರ, ಕಲಬುರಗಿ
  3. ಬಿ. ಎಸ್. ವೆಂಕಟರಾA ಪ್ರಶಸ್ತಿ (ಅತ್ಯುತ್ತಮ ಸ್ಕೂಪ್ ವರದಿಗೆ)
    ಕೆ.ಓಂಕಾರಮೂರ್ತಿ, ಪ್ರಜಾವಾಣಿ, ಕೋಲಾರ
    ಸಿದ್ದು ಆರ್ ಜಿ ಹಳ್ಳಿ, ಪ್ರಜಾವಾಣಿ, ಮಂಡ್ಯ
  4. ಕೆ. ಎ. ನೆಟ್ಟಕಲಪ್ಪ ಪ್ರಶಸ್ತಿ (ಅತ್ಯುತ್ತಮ ಕ್ರೀಡಾ ವರದಿಗೆ)
    ಕಾಯಪಂಡ ಶಶಿ ಸೋಮಯ್ಯ, ಶಕ್ತಿ ಪತ್ರಿಕೆ, ಕೊಡಗು
    ಪುನೀತ್ ಸಿ.ಜಿ. ಚಪ್ಪರದಹಳ್ಳಿ, ವಿಜಯವಾಣಿ ಪಿರಿಯಾಪಟ್ಟಣ
  5. ಖಾದ್ರಿ ಶಾಮಣ್ಣ ಪ್ರಶಸ್ತಿ (ಅತ್ಯುತ್ತಮ ರಾಜಕೀಯ ವಿಮರ್ಶಾತ್ಮಕ ವರದಿ)
    ಅಪ್ಪಾರಾವ್ ಸೌದಿ, ಕನ್ನಡಪ್ರಭ, ಬೀದರ್.
    ರಮೇಶ್ ದೊಡ್ಡಪುರ, ಹಿರಿಯ ಪತ್ರಕರ್ತರು
  6. ಮಂಗಳ ಎಂ. ಸಿ. ವರ್ಗಿಸ್ ಪ್ರಶಸ್ತಿ (ವಾರ ಪತ್ರಿಕೆಯಲ್ಲಿ ಪ್ರಕಟವಾದ ಚಿತ್ರ
    ಲೇಖನಕ್ಕೆ)
    ಕೋಡಿಬೆಟ್ಟು ರಾಜಲಕ್ಷ್ಮಿ, ಸುಧಾ, ಮಂಗಳೂರು.
    ನಾರಾಯಣ ರೈ ಕುಕ್ಕುವಳ್ಳಿ, ಮಧುಪ್ರಪಂಚ, ಧರ್ಮಸ್ಥಳ
    8) ತಗಡೂರು ಕಮಲಮ್ಮ ವೀರೇಗೌಡ ಪ್ರಶಸ್ತಿ (ರೈತಾಪಿ ಜನರ ಸಮಸ್ಯೆ
    ವರದಿಗಾಗಿ)
    ಪುಟ್ಟರಾಜು, ಸಂಯುಕ್ತ ಕರ್ನಾಟಕ, ದಿಡಗ, ಚನ್ನರಾಯಪಟ್ಟಣ
    ಮರಿದೇವರು ಹೂಗಾರ್, ವಿಜಯವಾಣಿ, ಹುಬ್ಬಳ್ಳಿ.
    9) ಆರ್.ಎಲ್.ವಾಸುದೇವರಾವ್ ಪ್ರಶಸ್ತಿ (ಅರಣ್ಯ ಅತ್ಯುತ್ತಮ ವರದಿ)
    ಗುರುಪ್ರಸಾದ್ ತುಂಬಸೋಗೆ, ಪ್ರತಿನಿಧಿ, ಮೈಸೂರು
    ಹರಿಪ್ರಸಾದ್ ನಂದಳಿಕೆ, ಕಾರ್ಕಳ, ಉಡುಪಿ
  7. ಆರ್.ಎಲ್. ವಾಸುದೇವರಾವ್ ಪ್ರಶಸ್ತಿ (ವನ್ಯ ಪ್ರಾಣಿಗಳ ಅತ್ಯುತ್ತಮ ವರದಿ)
    ರೇಣುಕೇಶ್, ಎಂ., ಹೊಸದಿಗಂತ, ಚಾಮರಾಜನಗರ
    ಶಿವು ಹುಣಸೂರು, ವಿಜಯವಾಣಿ, ಹುಣಸೂರು.
  8. ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ (ಆರ್ಥಿಕ ದುರ್ಬಲ ವರ್ಗದವರ ಅತ್ಯುತ್ತಮ
    ವರದಿಗೆ)

ಎನ್.ಡಿ.ತಿಪ್ಪೇಸ್ವಾಮಿ, ವಿಜಯ ಕರ್ನಾಟಕ., ಗಂಗಾವತಿ
ನಜೀರ್ ಅಹಮದ್, ಆಂದೋಲನ, ಮೈಸೂರು

  1. ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ (ಗ್ರಾಮೀಣ ಜನ-ಜೀವನದ ಅತ್ಯುತ್ತಮ
    ವರದಿಗೆ)
    ರವಿ ಬಿದನೂರು, ಹೊಸನಗರ, ಶಿವಮೊಗ್ಗ
    ಸಿದ್ಧನಗೌಡ ಎಚ್ ಪಾಟೀಲ್, ಸಂಯುಕ್ತ ಕರ್ನಾಟಕ, ಹಟ್ಟಿ, ರಾಯಚೂರು.
  2. ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿ (ಬೆಂಗಳೂರು ನಗರ ಮತ್ತು
    ಗ್ರಾಮಾಂತರ ಜಿಲ್ಲೆ)
    ಡಿ.ಬಿ.ಬಸವರಾಜು, ಉದಯಕಾಲ., ಶಿವಾನಂದ, ಸೂರ್ಯವಂಶ.
    ಮುತ್ತುರಾಜ್, ಪ್ರಜಾ ಟಿವಿ., ಕೆ.ಎಸ್.ನಾಗರಾಜ್, ನಂದೀಶ್ ದುಗಡಿ.,
    14, ಯಜಮಾನ್ ಟಿ. ನಾರಾಯಣಪ್ಪ ಸ್ಮಾರಕ ಪ್ರಶಸ್ತಿ (ಜಿಲ್ಲಾ ಮಟ್ಟದ ಅತ್ಯುತ್ತಮ
    ಕೃಷಿ ವರದಿ)
    ಹುಡೇಂ ಕೃಷ್ಣಮೂರ್ತಿ, ವಿಜಯ ಕರ್ನಾಟಕ, ಕೂಡ್ಲಿಗಿ, ವಿಜಯನಗರ.
    ವಿಜಯ ಬಾಸ್ಕರರೆಡ್ಡಿ, ಉದಯವಾಣಿ, ಯಾದಗಿರಿ
    ಜಯಂತಿ ಯು.ಎಂ., ಜನಮಿತ್ರ, ಕೊಡಗು
  3. ನಾಡಿಗೇರ ಕೃಷ್ಣರಾಯರ ಪ್ರಶಸ್ತಿ (ಅತ್ಯುತ್ತಮ ವಿಡಂಬನಾತ್ಮಕ ಲೇಖನಕ್ಕೆ)
    ಸಿದ್ದಯ್ಯ ಹಿರೇಮಠ, ಪ್ರಜಾವಾಣಿ, ದಾವಣಗೆರೆ
  4. ಅತ್ಯುತ್ತಮ ಪುಟ ವಿನ್ಯಾಸಗಾರರಿಗೆ (ಡೆಸ್ಕ್ನಲ್ಲಿ ಕೆಲಸ ಮಾಡುವವರು)
    ಜನಾರ್ಧನ, ಉದಯವಾಣಿ, ಬೆಂಗಳೂರು
    ಸಿ.ಎನ್.ವಿಜಯಕುಮಾರ್, ವಿಜಯವಾಣಿ, ಬೆಂಗಳೂರು.
  5. ನ್ಯಾಯಾಲಯದ (ಕೋರ್ಟ್ ಬೀಟ್) ಅತ್ಯುತ್ತಮ ವರದಿಗಾಗಿ.
    ಷಣ್ಮುಖಪ್ಪ, ಪ್ರಜಾವಾಣಿ, ಬೆಂಗಳೂರು.
  6. ಸುಣ್ಣುವಂಡ ಶ್ರೀನಿವಾಸ ಚಂಗಪ್ಪ ಪ್ರಶಸ್ತಿ. (ಅತ್ಯುತ್ತಮ ಸೇನಾ ವರದಿಗೆ)
    ವಿಶ್ವಕುಮಾರ್, ಇ.ಆರ್., ಚಿತ್ತಾರ, ಕೊಡಗು.
  7. ಕೆ.ಎನ್.ಸುಬ್ರಮಣ್ಯ ಪ್ರಶಸ್ತಿ ( ಇಂಗ್ಲೀಷ್ ಪತ್ರಿಕೆ ವರದಿ)
    ಪಿ.ಶಿಲ್ಪ, ಡೆಕನ್ ಹೆರಾಲ್ಡ್, ಮೈಸೂರು
    ಅಕ್ಷಯ ಪಿ.ವಿ., ಸ್ಟಾರ್ ಆಫ್ ಮೈಸೂರು
  8. ಮಲಗೊಂಡ ಪ್ರಶಸ್ತಿ (ಅತ್ಯುತ್ತಮ ತನಿಖಾ ವರದಿ)
    ಶರಣ ಬಸವ ನೀರ ಮಾನ್ವಿ, ವಿಜಯವಾಣಿ, ಮಾನ್ವಿ

ಪಿ.ರಾಮಸ್ವಾಮಿ ಕಣ್ವ, ಈ ಸಂಜೆ., ಬೆಂಗಳೂರು.
ಕೇಶವಮೂರ್ತಿ ವಿ.ಬಿ., ವಿಜಯವಾಣಿ, ಹಾವೇರಿ.

  1. ನಟ, ನಿರ್ದೇಶಕ ದ್ವಾರಕೀಶ್ ಸ್ಮಾರಕ ಪ್ರಶಸ್ತಿ (ಚಲನ ಚಿತ್ರ ವಿಭಾಗ)
    ಕೆ.ಎಸ್.ವಾಸು, ಹಿರಿಯ ಪತ್ರಕರ್ತರು,

22.ಅಭಿಮಾನಿ ಪ್ರಕಾಶನ ಪ್ರಶಸ್ತಿ
ಗಜಾನನ ಹೆಗಡೆ ಬೆಟ್ಟನ್ನೆ, ವಿಜಯ ಕರ್ನಾಟಕ, ಬೆಳಗಾವಿ.
ಮಾಲತೇಶ ಅರಸು, ಈ ನಗರವಾಣಿ, ಚಿತ್ರದುರ್ಗ.

23.ಸುದ್ದಿಚಿತ್ರ(ಛಾಯಾಚಿತ್ರ ಸಹಿತಿ ವರದಿ)
ಡಿ.ಜೆ.ಮಲ್ಲಿಕಾಜುನ, ಪ್ರಜಾವಾಣಿ, ಶಿಡ್ಲಘಟ್ಟ
ನಂದನ್ ಪುಟ್ಟಣ್ಣ, ಕನ್ನಡಪ್ರಭ, ಚನ್ನರಾಯಪಟ್ಟಣ.

  1. ಪೋಟೋಗ್ರಫಿ
    ಅತೀಖುರ್ ರೆಹಮಾನ್, ಹಾಸನ
    ಎಸ್.ಚರಣ್ ಬಿಳಿಗಿರಿ, ಚಾಮರಾಜನಗರ
ವಿದ್ಯುನ್ಮಾನ (ಟಿವಿ)ವಿಭಾಗ: *ಅತ್ಯುತ್ತಮ ರಾಜಕೀಯ ವಿಶ್ಲೇಷಣೆ ಅಜಿತ್ ಹನುಮಕ್ಕನವರ್, ಸುವರ್ಣ ಟಿವಿ *ಸಾಮಾಜಿಕ, ಮಾನವೀಯ ವರದಿ
ಕೆ.ಪಿ.ನಾಗರಾಜ್, ಪಬ್ಲಿಕ್ ಟಿ.ವಿ., ಮೈಸೂರು. ವಿದ್ಯುನ್ಮಾನ ವಿಭಾಗ: ವಿಜಯ್ ಜೆ.ಆರ್., ಆರ್ ಕನ್ನಡ ಸತೀಶ್ ಕುಮಾರ್ ಎಂ., ಟಿವಿ 5
ಮಂಜುನಾಥ್ ಕೆ.ಬಿ., ಟಿವಿ 9 ರಶ್ಮಿ ಶ್ರೀನಿವಾಸ ಹಳಕಟ್ಟಿ ರಾಜ್ ನ್ಯೂಸ್

ಕೆಯುಡಬ್ಲ್ಯೂಜೆ ವಿಶೇಷ ಪ್ರಶಸ್ತಿ

ಮುರುಳೀಧರ್ ಡಿ.ಪಿ. | ಪದ್ಮ ನಾಗರಾಜ್ | ಮುಮ್ತಾಜ್ ಅಲೀಂ | ಕೆ.ಆರ್.ರೇಣು- ನವದೆಹಲಿ ವೇಣುಗೋಪಾಲ್ – ಕಾಸರಗೋಡು ರೋನ್ಸ್ ಬಂಟ್ವಾಳ- ಮುಂಬಯಿ ಶರಣಬಸಪ್ಪ ಜಿಡಗ- ಕಲಬುರ್ಗಿ, ಅಲ್ಲಮಪ್ರಭ ಮಲ್ಲಿಕಾರ್ಜುನ- ವಿಜಯಪುರ, ಮೊಹಮದ್ ಯೂನಸ್- ಕೋಲಾರ
ಎಸ್.ಕೆ.ಒಡೆಯರ್ -ದಾವಣಗೆರೆ, ಗುರುರಾಜ ಹೂಗಾರ್- ಹುಬ್ಬಳ್ಳಿ

ಜಿ.ಸಿ.ಲೋಕೇಶ, ಪ್ರಧಾನ ಕಾರ್ಯದರ್ಶಿ ಶಿವಾನಂದ ತಗಡೂರು, ರಾಜ್ಯಾಧ್ಯಕ್ಷರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ
ಕಂದಾಯ ಭವನ, 3ನೇ ಮಹಡಿ, ಬೆಂಗಳೂರು

Share this post

About the author

Leave a Reply

Your email address will not be published. Required fields are marked *