Inauguration of Women’s Unit of Kannada Sene
ತುಮಕೂರು:ನಗರದ ಹನುಮಂತಪುರದಲ್ಲಿರುವ ಸೀತಾ
ಪ್ರೌಢಶಾಲೆಯಲ್ಲಿ ಕನ್ನಡ ಸೇನೆಯ ಮಹಿಳಾ ಘಟಕ ಉದ್ಘಾಟನೆ ಹಾಗೂ ಒನಕೆ
ಓಬವ್ವ ವೇಷ ಭೂಷಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಗಿಡ ನೆಟ್ಟು ನೀರೆರೆಯುವ ಮೂಲಕ ಬೇವಿನ ಮರದ
ಸಿದ್ದಪ್ಪ ಎಂದೇ ಖ್ಯಾತರಾದ ಪ್ರೊ.ಸಿದ್ದಪ್ಪ ಚಾಲನೆ ನೀಡಿದರು. ಈ ವೇಳೆ
ಮಾತನಾಡಿದ ಅವರು,ಮಕ್ಕಳು ಪ್ರಕೃತಿಯ ಆರಾಧನೆಯ ಜೊತೆಗೆ,
ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕು. ಪ್ರಕೃತಿ ನಮಗೆ ಗಾಳಿ,
ಬೆಳಕು, ನೀರನ್ನು ಉಚಿತವಾಗಿ ನೀಡಿ, ಪ್ರಾಣಿ ಸಂಕುಲ ಬೆಳೆಯಲು
ಸಹಕಾರಿಯಾಗಿದೆ. ಹಾಗೆಯೇ ಮನುಷ್ಯ ತನ್ನ ಭಾವನೆಗಳನ್ನು
ವ್ಯಕ್ತಪಡಿಸಿಲು ಭಾಷಾ ಬಹಳ ಮುಖ್ಯವಾಗಿದೆ. ಹಾಗಾಗಿ ಮಕ್ಕಳು ಪ್ರಕೃತಿ
ಆರಾಧನೆಯ ಜೊತೆಗೆ, ಭಾಷಾಭಿಮಾನ ಹಾಗೂ e್ಞÁನವನ್ನು ಬೆಳೆಸಿಕೊಂಡು
ಸಮಾಜದಲ್ಲಿ ಉತ್ತುಂಗಕ್ಕೆ ಏರಬೇಕೆಂದು ಸಲಹೆ ನೀಡಿದರು.
ನಾವು ಯಾವ ಶಾಲೆಯಲ್ಲಿ ,ಯಾವ ಮಾಧ್ಯಮದಲ್ಲಿ ಕಲಿಯುತ್ತೇವೆ ಎಂಬುದು
ಮುಖ್ಯವಲ್ಲ.ಆದರೆ ಯಾವ ರೀತಿಯ ಅಭ್ಯಾಸ ಮಾಡುತ್ತೇವೆ. ಯಾವ
ಗುರಿಯೊಂದಿಗೆ ಮುನ್ನೆಡೆಯುತ್ತೇವೆ ಎಂಬುದು ಮುಖ್ಯ. ಇಂದು ಐಐಎಸ್, ಐಪಿಎಸ್
ಅಧಿಕಾರಿಗಳಾಗಿರುವ ವ್ಯಕ್ತಿಗಳು, ದೊಡ್ಡ ದೊಡ್ಡ ವಿe್ಞÁನಿಗಳು,
ಸಂಶೋಧಕರು ಸರಕಾರಿ ಶಾಲೆಗಳಲ್ಲಿ, ಕನ್ನಡ ಮಾಧ್ಯಮಗಳಲ್ಲಿ ಓದಿ
ಬಂದವರೆ ಆಗಿದ್ದಾರೆ.ಹಾಗೂ ಶಾಲೆ ಮತ್ತು ಮಾಧ್ಯಮಕ್ಕಿಂತ ಓದುವ ರೀತಿ
ಮುಖ್ಯವಾಗಿದೆ ಎಂದರು.
ಓನಕೆ ಓಬವ್ವ ಓರ್ವ ಸಾದಾರಣ ಹೆಣ್ಣು ಮಕ್ಕಳು, ಆದರೆ ಎದುರಾಳಿಯೊಬ್ಬ
ಕೋಟೆಯೊಳಗೆ ನುಗ್ಗುವುದನ್ನು ನೋಡಿ,ಸಮಯ ಪ್ರಜ್ಞೆಯಿಂದ
ಕೈಗೆ ಸಿಕ್ಕ ವಸ್ತುವನ್ನೇ ಆಯುಧ ಮಾಡಿ, ನೂರಾರು ಸೈನಿಕರನ್ನು ಸದೆ
ಬಡಿದ ಆಕೆಯ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ನಾವೆಲ್ಲರೂ
ಕೊಂಡಾಡಬೇಕಿದೆ. ಅಂತಹ ಸಮಯಪ್ರಜ್ಞೆಯನ್ನು ನಾವೆಲ್ಲರೂ
ಮೂಡಿಸಿಕೊಳ್ಳಬೇಕಿದೆ ಎಂದು ಬೇವಿನ ಮರದ ಸಿದ್ದಪ್ಪ ಸಲಹೆ ನೀಡಿದರು.
ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್ ಮಾತನಾಡಿ, ಕನ್ನಡ ಸೇನೆ
ದೊಡ್ಡ ಸ್ಟಾರ್ ಹೊಟೇಲ್‍ಗಳಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳುವಂತಹ
ಸಂಘಟನೆಯಲ್ಲ. ಜನರ ನಡುವೆ ಇದ್ದು, ಜನರ ಕಷ್ಟ ಸುಖಃಗಳಿಗೆ ಸ್ಪಂದಿಸಿ,
ಕೆಲಸ ಮಾಡುತ್ತಿದೆ.ಪರಿಸರ ಸಂರಕ್ಷಣೆ, ನಾಡು, ನುಡಿ, ನೆಲ.ಜಲದ ವಿಚಾರದಲ್ಲಿ
ರಾಜಿಯಾಗದೆ ಸದಾ ಹೋರಾಟದ ಮುಂಚೂಣಿಯಲ್ಲಿದೆ. ನಮ್ಮ ಕನ್ನಡ
ಸೇನೆಯ ಮಹಿಳಾ ಘಟಕ ಸಹ ಇಂದಿನಿಂದ ಆರಂಭವಾಗಿದ್ದು,ಮಹಿಳೆಯರ
ಕಷ್ಟು ಸುಖಃಗಳಿಗೆ ಸ್ಪಂದಿಸಿ ಕೆಲಸ ಮಾಡಲಿದೆ.ಬೇವಿನ ಮರದ ಸಿದ್ದಪ್ಪ
ಇದುವರೆಗೂ ಸುಮಾರು 86 ಸಾವಿರ ಗಿಡಗಳನ್ನು ತಮ್ಮ ವೃಕ್ಷಮಿತ್ರ ಟ್ರಸ್ಟ್
ವತಿಯಿಂದ ಹಾಕಿ ಪೋಷಿಸುತ್ತಾ ಬಂದಿದ್ದಾರೆ.ಇವರ ರೀತಿಯ ಸಾಧಕರ
ಕೆಲಸಗಳಿಗೆ ಕನ್ನಡ ಸೇನೆ ಸದಾ ಬೆಂಬಲವಾಗಿ ನಿಲ್ಲುತ್ತದೆ ಎಂದರು.
ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲರಾದ ಡಾ.ಟಿ.ಆರ್.ಲೀಲಾ ಲೇಪಾಕ್ಷ,
ಕನ್ನಡಸೇನೆಯ ಮಹಿಳಾ ಘಟಕದ ತುಮಕೂರು ನಗರ ಅಧ್ಯಕ್ಷೆ
ಸುಕನ್ಯ, ಉಪಾಧ್ಯಕ್ಷೆ ಚೇತನ, ಸೀತಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ
ಶ್ರೀಮತಿ ಶೈಲ ಹಾಗೂ ಉಪಾದ್ಯಾಯರು, ಸಿಬ್ಬಂದಿಗಳು, ಮಕ್ಕಳು ಹಾಜರಿದ್ದರು.
ಸುಮಾರು 25ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಒನಕೆ ಓಬವ್ವ ವೇಷ ಧರಿಸಿ,
ಪ್ರದರ್ಶನ ನೀಡಿದರು.