Food for Hungry at District Hospital -Public was appreciated of RK Rizwan’s service
ಅನ್ನ ದಾಸೋಹ ಕ್ಷೇತ್ರ ಅಂದರೆ ಕಲ್ಪತರು ನಾಡು ನೇಡೆದಾಡುವ ದೇವರು ಪರಮ ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳ ಪುಣ್ಯ ಭೂಮಿ ತುಮಕೂರಿನ ಸಿದ್ದಗಂಗಾ ಮಠ ಇಲ್ಲಿ ಬಂದ ಜನರಿಗೆ ಉಪಹಾರ ನೀಡುವ ಪವಿತ್ರವಾದ ಸ್ಥಳ ಇಂತಹ ಪುಣ್ಯ ಭೂಮಿಯಲ್ಲಿ ಹಸಿದವರಿಗೆ ಅನ್ನ ನೀಡುವ ಮೂಲಕ ಜಿಲ್ಲೆಗೆ ಮಾದರಿಯಾಗಿ ಸಮಾಜ ಸೇವೆ ಮಾಡುತ್ತಿರುವ ತುಮಕುರಿನ ಆರ್.ಕೆ ಲೇತ್ ಮಾಲಿಕ ರಿಜ್ವಾನ್ ಅಹಮದ್.
ತುಮಕೂರು ನಗರದಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳನ್ನು ನೋಡಲು ಬರುವ ಸಾರ್ವಜನಿಕರಿಗೆ ಪ್ರತಿ ಗುರುವಾರದಂದು ಊಟ ನೀರು ನೀಡುತ್ತಿರುವ ರಿಜ್ವಾನ್ ಅಹಮದ್ ಅವರು ಒಂದು ಸಾರಿ ಅನಾರೋಗ್ಯದಿಂದ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾದ ಸಂದರ್ಭದಲ್ಲಿ ಅಲ್ಲಿ ಬರುವ ಸಾರ್ವಜನಿಕರು ಊಟಕ್ಕೆ ಪರದಾಡಿದ ದೃಶ್ಯವನ್ನು ಕಂಡು ತಾನು ಸಂಪಾದಿಸಿದ ಸಂಪಾದನೆಯಲ್ಲಿ ಇಂತಿಷ್ಟು ಜನರ ಸೇವೆ ಮಾಡುವ ಮೂಲಕ ಸ್ವಯಂ ಸೇವಕರಾಗಿ ಕಾಣುತ್ತಿರುವ ಜನ ಸೇವಕ .
https://youtu.be/qgSf9CnibJ0
ಸುಮಾರು ಎರಡು ವರ್ಷಗಳಿಂದಲೂ ಯಾವುದೇ ಪ್ರಾಚಾರದ ಆಸೆ ಇಲ್ಲದೆ ಊಟ ನೀರು ನೀಡುತ್ತಾ ಜನ ಸೇವಕನಾಗಿ ಜನರ ಮನಗೆದ್ದ ರಿಜ್ವಾನ್ ಅವರು ಮಾತನಾಡಿ ಯಾವುದೇ ಒಬ್ಬ ವ್ಯಕ್ತಿ ತಾನು ಎಷ್ಟೇ ಸಂಪಾದನೆ ಮಾಡಿದರು ಅವನ ಅಂತ್ಯಕಾಲದಲ್ಲಿ ಯಾವುದನ್ನು ಜೋತೆಯಲ್ಲಿ ತೆಗೆದುಕೊಂಡು ಹೋಗುವುದಿಲ್ಲ ಹುಟ್ಟಿನಿಂದ ಸಾವಿನ ಮಧ್ಯೆ ನಾವು ಯಾವ ರೀತಿಯ ಕೆಲಸ ಮಾಡುತ್ತೆವೆಯೋ ಅದೆ ನಮಗೆ ಒಳ್ಳೆಯ ಕಾರ್ಯವಾಗುತ್ತದೆ .
ನಾವು ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಿ ಅದನ್ನು ನಾಲ್ಕು ಜನರ ಮುಂದೆ ಹೇಳಿಕೊಳ್ಳಬಾರದು ಭಗವಂತ ನಮಗೆ ನಾಲ್ಕು ಜನರಿಗೆ ಸಹಾಯ ಮಾಡಲೆಂದು ಅಮೂಲ್ಯವಾದ ಸಮಯವನ್ನು ನೀಡಿದಾಗ ಆ ಸಮಯದಲ್ಲಿ ನಾವು ಬೇರೆಯವರಿಗೆ ಸಹಾಯ ಮಾಡಬೇಕು ಎಂದು ತಿಳಿಸಿದರು .
ರಿಜ್ವಾನ್ ಅಹಮದ್ ರವರು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಹಾರೈಕೆ ಮಾಡಲು ಬರುವ ಹಾಗೂ ರೋಗಿಗಳನ್ನು ನೋಡಲು ಬರುವ ಬಡವರಿಗೆ ಸಾರ್ವಜನಿಕರಿಗೆ ಪ್ರತಿ ಗುರುವಾರದಂದು ಊಟ ಮತ್ತು ನೀರು ನೀಡುತ್ತಿರುವುದು ಶ್ಲಾಘನೀಯ ಅದೆ ರೀತಿಯಲ್ಲಿ ತುಮಕೂರು ಜಿಲ್ಲೆಯಲ್ಲಿ ಅನೇಕ ರಾಜಕೀಯ ಮುಖಂಡರು ಮತ್ತು ದೊಡ್ಡ ದೊಡ್ಡ ಕಂಪನಿಗಳ ಉದ್ಯಮಿಗಳು ವಾರದ ಪ್ರತಿ ದಿನವೂ ಜಿಲ್ಲಾಸ್ಪತ್ರೆಯಲ್ಲಿ ಊಟದ ವ್ಯವಸ್ಥೆ ಮಾಡಿದರೆ ಆಸ್ಪತ್ರೆಗೆ ಬರುವ ಬಡವರಿಗೆ ಅನುಕೂಲವಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.