breaking news

ನಿಮ್ಮ ಕನಸನ್ನು ನನಸಾಗಿಸಲು ಇಲ್ಲಿದೆ ನೋಡಿ ಉತ್ತಮ ವೇದಿಕೆ: ಜೀ಼ ಕನ್ನಡ ರೈಟರ್ಸ್ ಆಡಿಷನ್ 

ನಿಮ್ಮ ಕನಸನ್ನು ನನಸಾಗಿಸಲು ಇಲ್ಲಿದೆ ನೋಡಿ ಉತ್ತಮ ವೇದಿಕೆ: ಜೀ಼ ಕನ್ನಡ ರೈಟರ್ಸ್ ಆಡಿಷನ್ 

ತುಮಕೂರು :ಬರಹಗಾರರಾಗುವ ನಿಮ್ಮ ಕನಸನ್ನು ನನಸಾಗಿಸಲು ಇಲ್ಲಿದೆ ನೋಡಿ ಉತ್ತಮ ವೇದಿಕೆ! ಮನರಂಜನೆಗೆ ಮತ್ತೊಂದು ಹೆಸರೇ ಜೀ಼ ಕನ್ನಡ. ತನ್ನ ವಿಭಿನ್ನ ಕಥಾ ಹಂದರದಿಂದ ನಿಮ್ಮ ಮನಕದ್ದ ಜೀ಼ ಕನ್ನಡ ಈಗ ನಿಮಗಾಗಿ ಮತ್ತೊಂದು ಸರ್ಪ್ರೈಸ್ ತಂದಿದೆ. ಹೌದು, ಆ ವಿಭಿನ್ನ ಕಥೆ ಬರೆಯುವ ಬರಹಗಾರರು ನೀವೇಯಾಕಾಗಬಾರದು? ಚೆನ್ನಾಗಿ ಕಥೆ ಬರೆಯುತ್ತೀರಾ? ಒಳ್ಳೆ ಸಂಭಾಷಣೆಯ ಕಲೆ ನಿಮ್ಮಲ್ಲಿ ಇದ್ಯಾ? ನೀವು ಬರಹಗಾರರಾಗಬೇಕೇ? ನಿಮ್ಮ ಪ್ರತಿಭೆಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲವೇ? ಡೋಂಟ್ ವರಿ.  ಪ್ರತಿಭಾವಂತ ಬರಹಗಾರರಿಗೆ ಎಲ್ಲಿಯೂ ಸಿಗದ ಅವಕಾಶವನ್ನು ಹೊತ್ತು ಜೀ ಕನ್ನಡ ನಿಮ್ಮ ಮುಂದೆ ಬರ್ತಿದೆ. ನಿಮ್ಮೊಳಗಿರುವ ಕಥೆಗಾರ ಮತ್ತು ಸಂಭಾಷಣೆಕಾರರಿಗೆ ಇದು ಅತ್ಯುತ್ತಮ ವೇದಿಕೆಯಾಗಿದ್ದು, ನಿಮ್ಮ ಕಲೆಗೆ ಈ ವೇದಿಕೆಯಲ್ಲಿ ಬೆಲೆ ಸಿಗಲಿದೆ. ಜೀ ಕನ್ನಡ ‘ ರೈಟರ್ಸ್ ಆಡಿಷನ್ ‘ ನಲ್ಲಿ ನಿಮ್ಮ  ಅತ್ಯುತ್ತಮ ಬರವಣಿಗೆ ಸಾಮರ್ಥ್ಯವನ್ನು ಪ್ರದರ್ಶಿಸಲು ಒಂದು ಅವಕಾಶವನ್ನು  ನೀಡುವುದರ ಜೊತೆಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡುತ್ತಿದೆ.

 ಜ.12 ರಂದು ಭಾನುವಾರ  ಬೆಳಗ್ಗೆ 9 ಗಂಟೆಗೆ,  ಆದರ್ಶ ನಗರದ ಸೈಂಟ್ ಮೊಸಸ್ಆಂಗ್ಲ ಶಾಲೆಯಲ್ಲಿ ರೈಟರ್ಸ್ ಆಡಿಶನ್ ನಡೆಯಲಿದೆ.

Share this post

About the author

Leave a Reply

Your email address will not be published. Required fields are marked *