breaking news

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಿಕ್ಷಕರ ಸಂಘ ಬಿಇಓಗೆ ಮನವಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಿಕ್ಷಕರ ಸಂಘ ಬಿಇಓಗೆ ಮನವಿ

ತುಮಕೂರು:ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ),
ತುಮಕೂರು ತಾಲೂಕು ಘಟಕದವತಿಯಿಂದ ತಾಲೂಕು ಅಧ್ಯಕ್ಷ
ಪಿ.ಜಿ.ತಿಮ್ಮೇಗೌಡ ನೇತೃತ್ವದಲ್ಲಿ ಇಂದು ತುಮಕೂರು ತಾಲೂಕು ಕ್ಷೇತ್ರ
ಶಿಕ್ಷಣಾಧಿಕಾರಿಗಳನ್ನು ಭೇಟಿಯಾಗಿ ಬೇಸಿಗೆ ರಜಾ ಅವಧಿಯಲ್ಲಿ ಬಿಸಿಯೂಟ
ಕಾರ್ಯದಲ್ಲಿ ನಿರತ ಶಿಕ್ಷಕರಿಗೆ ರಜೆ ಮಂಜೂರು ಸೇರಿದಂತೆ ವಿವಿಧ ಬೇಡಿಕೆಗಳ
ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತುಮಕೂರು
ತಾಲೂಕು ಘಟಕದ ಪದಾಧಿಕಾರಿಗಳು ಬಿಇಓ ಹನುಮಂತಪ್ಪ ಅವರಿಗೆ ಮನವಿ
ಸಲ್ಲಿಸಿದರು. ಮನವಿಯಲ್ಲಿ ೨೦೨೪ರ ಬೇಸಿಗೆ ರಜೆ ಅವಧಿಯಲ್ಲಿ ಅಕ್ಷರ ದಸೋಹ
ಕರ್ತವ್ಯ ನಿರ್ವಹಿಸಿರುವ ಶಿಕ್ಷಕರಿಗೆ ನಿಯಮಾನುಸಾರ ಗಳಿಕೆ ರಜೆ ಮಂಜೂರು,
೩೯ ಕಲಂಗಳಿರುವ ಹೆಚ.ಆರ್.ಎಂ.ಎಸ್.ಪ್ರತಿಯನ್ನು ತಿದ್ದುಪಡಿಯ ನಂತರ ಎಲ್ಲಾ
ಅಂಶಗಳನ್ನು ಒಳಗೊಂಡ ಪ್ರತಿಯನ್ನು ಗುರು ಸ್ಪಂದನೆ
ಕಾರ್ಯಕ್ರಮದ ಮೂಲಕ ಎಲ್ಲ ಶಿಕ್ಷಕರ ಕುಂದುಕೊರತೆ
ಬಗೆಹರಿಸುವುದು.ಶಿಕ್ಷಕರುಗಳ ಮತ್ತು ಶಾಲಾ ದಾಖಲೆಗಳ
ಸರಳೀಕರಣ,ಬೋ|ಧನೆಗೆ ಹೆಚ್ಚು ಒತ್ತು ನೀಡುವುದು, ಅತಿಥಿ ಶಿಕ್ಷಕರ
ವೇತನ ಸಕಾಲದಲ್ಲಿ ಬಿಡುಗಡೆ, ಸ್ಥಗಿತ ವೇತನ ಬಡ್ತಿ ಗೆ ಆರ್ಹರಿರುವ ಶಿಕ್ಷಕರ
ಪಟ್ಟಿ ಬಿಡುಗಡೆ ಸೇರಿದಂತೆ ೧೪ಕ್ಕೂ ಹೆಚ್ಚು ಬೇಡಿಕೆಗಳನ್ನು ಒಳಗೊಂಡ
ಮನವಿ ಪತ್ರವನ್ನು ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಬಿಇಓ ಎಂ.ಹನುಮAತಪ್ಪ,ಸAಘದ
ಬೇಡಿಕೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು. ಎಲ್ಲಾ
ಶಿಕ್ಷಕರುಗಳು ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು
ಕಾಯ್ದುಕೊಳ್ಳಬೇಕು.ಬೋಧನೆಗೆ ಹೆಚ್ಚು ಒತ್ತು ಕೊಡಬೇಕು. ಶಾಲಾ
ಅವಧಿಯಲ್ಲಿ ತಾಲೂಕಿನ ಕೆಲವು ಶಿಕ್ಷಕರುಗಳು ಶಾಲೆಯನ್ನ ಬಿಟ್ಟು
ಹೊರಗಡೆ ಓಡಾಡುತ್ತಿರುವುದು ಗಮನಕ್ಕೆ ಬಂದಿದೆ.ಅAತಹ ಶಿಕ್ಷಕರುಗಳ
ವಿರುದ್ಧ ಶಿಸ್ತುಕ್ರಮವನ್ನು ಕೈಗೊಳ್ಳಲಾಗುವುದು.ಅಂತಹ
ಶಿಕ್ಷಕರುಗಳಿಗೆ ಶಿಕ್ಷಕ ಪ್ರತಿನಿಧಿಗಳು ಕಿವಿಮಾತು ಹೇಳಬೇಕು. ಸರಕಾರಿ
ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎಂಬ ಕಿವಿ ಮಾತನ್ನು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಪಿ.ಜಿ.ತಿಮ್ಮೇಗೌಡ,
ಉಪಾಧ್ಯಕ್ಷರುಗಳಾದ ಕೋಮಲ,ಜೈರಾಮ್, ಕಾರ್ಯಾಧ್ಯಕ್ಷರಾದ
ಶಿವಕುಮಾರ್, ಪದ್ಮರಾಜ್, ಖಜಾಂಚಿ ಲೋಕೇಶ್, ಜಿಲ್ಲಾ ಸಂಘದ ಪದಾಧಿಕಾರಿಗಳಾದ
ಮಂಜಣ್ಣ, ಜಯಲಕ್ಷ್ಮಮ್ಮ,ದಿನೇಶ್, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ
ಕೆ.ನಾಗರಾಜ್, ನಿರ್ದೇಶಕರುಗಳಾದ ಸಂಪತ್ ಕುಮಾರ್, ನಾಗರತ್ನ,
ಮಂಗಳಮ್ಮ, ಸುರೇಶ್‌ಬಾಬು, ಆರ್ಯ ಬಾಲಿಕಾ ಸಂಪತ್‌ಕುಮಾರ್,,
ಮಲ್ಲಿಕಾರ್ಜುನ,ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷರಾದ
ಅನುಸೂಯಾದೇವಿ, ಸಿದ್ದಮ್ಮ ರವರುಗಳು ಉಪಸ್ಥಿತರಿದ್ದರು.

Appeal to the BEO of the teachers’ union demanding the fulfillment of various demands

Share this post

About the author

Leave a Reply

Your email address will not be published. Required fields are marked *