ತುಮಕೂರು: ಸಮೃದ್ಧಿ ಶಿಕ್ಷಣ ಟ್ರಸ್ಟ್ ಸ್ಥಾಪನೆಯಾದ ಕೆಲವೇ ತಿಂಗಳಲ್ಲಿ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ ಅತ್ಯುನ್ನತ ಸೇವೆ ಸಲ್ಲಿಸಿದೆ ಎಂದು ಗೌಡಗೆರೆ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರದ ಸಂಸ್ಥಾಪಕ ಮಲ್ಲೇಶ್ ರವರು ತಿಳಿಸಿದರು.
ರಾಮನಗರದ ಗೌಡಗೆರೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೊಸ ವರ್ಷದ ಪ್ರಯುಕ್ತ ಸಮೃದ್ಧಿ ಶಿಕ್ಷಣ ಟ್ರಸ್ಟ್ ನ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು ಸಮೃದ್ಧಿ ಶಿಕ್ಷಣ ಟ್ರಸ್ಟ ನ ಕಚೇರಿಯನ್ನು ಸ್ವ ಹಸ್ತದಿಂದ ಉದ್ಘಾಟನೆ ಮಾಡಿದ್ದು ಈ ಟ್ರಸ್ಟ್ ವತಿಯಿಂದ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯಸ್ತ, ಬಡವರ ದಿನಬಳಕೆಗೆ ಆಹಾರ ಧಾನ್ಯಗಳ ವಿತರಣೆಮಾಡುತ್ತಿದ್ದು, ಸೇವ ಮನೋಭಾವನೆ ಹೊಂದಿರುವ ಬೆಳಗುಂಬ ವೆಂಕಟೇಶ್ ರವರು ಈ ಟ್ರಸ್ಟ್ ನ ಮೂಲಕ ಸಮಾಜಕ್ಕೆ ಅತ್ಯುತ್ತಮ ಸೇವೆ ಸಲ್ಲಿಸಿತ್ತಿರುವುದು ಸಂತೋಷದ ವಿಚಾರ, ಈ ಟ್ರಸ್ಟ್ ಅಡಿಯಲ್ಲಿ ಶಿಕ್ಷಣ ಸಂಸ್ಥೆ ಯಾಗಲೆಂದು ಶ್ರೀ ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಲ್ಲೇಶ್ ರವರು ಹೇಳಿದರು.
ಸಮೃದ್ಧಿ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷ ಬೆಳಗುಂಬ ವೆಂಕಟೇಶ್ ಹಾಗೂ ಪದಾಧಿಕಾರಿಗಳು ಗೌಡಗೆರೆಯ ಶ್ರೀ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಪಡೆದು ಟ್ರಸ್ಟಿನ ಕ್ಯಾಲೆಂಡರ್ ಬಿಡುಗಡೆ ಮಾಡಿದ ವೇಳೆ ಟ್ರಸ್ಟಿನ ಉಪಾಧ್ಯಕ್ಷರು ನಂಜುಂಡಯ್ಯ ಯಲ್ಲಾಪುರ, ಕಾರ್ಯದರ್ಶಿ ನಾಗರಾಜ್ ಬುಗುಡನಹಳ್ಳಿ, ಖಜಾಂಚಿ ನಾಗರಾಜ್ ತಿಮ್ಮನಾಯಕನಹಳ್ಳಿ ,
ಸುನಿಲ್ ತೊಂಡಿಗೆರೆ, ನರಸಿಂಹರಾಜು ವಡ್ಡರಹಳ್ಳಿ , ಬೈರಸಂದ್ರ ಹರೀಶ್, ಹೆಬ್ಬಾಕ ಕುಮಾರ್, ನಂದಿಹಳ್ಳಿ ನಾಗರಾಜ್ ಹಾಗೂ ಪತ್ರಕರ್ತರಾದ ಪುಟ್ಟಲಿಂಗಯ್ಯ ಉಪಸ್ಥಿತರಿದ್ದರು.