ನೀಟ್ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ಸಾಧನೆಗೈದ ಗ್ಲೋಬಲ್ ಶಾಹೀನ್ ಕಾಲೇಜಿನ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ
ತುಮಕೂರು ನಗರ ಭೀಮಸಂದ್ರದಲ್ಲಿರುವ ಗ್ಲೋಬಲ್ ಶಾಹೀನ್ ಕಾಲೇಜು 2018 ರಲ್ಲಿ ಸ್ಥಾಪನೆಯಾಗಿ ಅಲ್ಪಾವದಿಯಲ್ಲಿಯೇ ಅತ್ಯುತ್ತಮ ಸಾದನೆಗೈಯುತ್ತಿದ್ದು, ಈ ಬಾರಿಯ ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾಲೇಜಿನ ವಿದ್ಯಾರ್ಥಿನಿ ನೀಟ್ ಟಾಪರ್ ಖತೇಜತುಲ್ ಕುಬ್ರಾ ರವರು 577 ಅಂಕ ಪಡೆಯುವ ಮೂಲಕ ಉಚಿತ ವೈದ್ಯಕೀಯ(ಎಂ.ಬಿ.ಬಿ.ಎಸ್.) ಸೀಟನ್ನು ಪಡೆಯುವ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಹಾಗೆಯೇ ಇದೇ ಕಾಲೇಜಿನಲ್ಲಿ ನೀಟ್ ಪರೀಕ್ಷೆಯ ತಯಾರಿ ನಡೆಸಿದಂತಹ ಸಾನಿಯಾ 507 ಅಂಕಗಳು, ಹುಸ್‍ನಾ ಕೌಸರ್ 454 ಅಂಕಗಳು, ಕುಲ್ಸುಮ್ ಆಸಿಫ್ 399 ಅಂಕಗಳು ಹಾಗೂ ಮುಸ್ಕಾನ್ ಡಿ. 390 ಅಂಕಗಳನ್ನು ಪಡೆದು ಹಲವು ವಿದ್ಯಾರ್ಥಿಗಳು ಆಯುರ್ವೇದ ಹಾಗೂ ಯುನಾನಿ ಕೋರ್ಸುಗಳಿಗೆ ಸರ್ಕಾರೀ ಕೋಟಾದಡಿಯಲ್ಲಿ ಉಚಿತವಾಗಿ ಪ್ರವೇಶ ಪಡೆಯುವ ಅವಕಾಶವಿದೆ.
ನೀಟ್ ಟಾಪರ್ ಖತೇಜತುಲ್ ಕುಬ್ರಾ ಮಾತನಾಡಿ ಎರಡು ವರ್ಷಗಳ ಅವಧಿಯಲ್ಲಿ ನೀಡಲಾದ ತರಬೇತಿಯಿಂದಾಗಿ ಯಾವುದೇ ಖಾಸಗೀ ತರಬೇತಿ ಕೇಂದ್ರಗಳಿಗೆ ಹೋಗದೇ ಕಾಲೇಜಿನ ಉಪನ್ಯಾಸಕರ ಬೋದನೆ, ಮಾರ್ಗದರ್ಶನ ಹಾಗೂ ವಾರಕೊಮ್ಮೆ ನೀಟ್ ಪರೀಕ್ಷೆ, ಕಾಲೇಜಿನ ವಿಶೇóಷ ಸ್ಟಡಿ ಮೆಟೀರಿಯಲ್‍ನ ವ್ಯವಸ್ಥಿತ ಬಳಕೆಯಿಂದಾಗಿ ಈ ಅದ್ಭುತ ಸಾದನೆ ಮಾಡಲು ಸಾದ್ಯವಾಗಿದ್ದು ಎಂಬಿಬಿಎಸ್ ಮುಗಿಸಿ ಐಎಸ್ ಪರೀಕ್ಷೆಗೆ ತಯಾರಿ ಮಾಡಬೇಕೆಂಬ ಬಯಕೆಯಿದೆ.
ಈ ಸಾಧನೆಗೆ ಸಹಕರಿಸಿದ ಸಂಸ್ಥೆಯ ಅಫ್ಜಲ್ ಷರೀಫ್, ಎಲ್ಲಾ ಉಪನ್ಯಾಸಕರು ಹಾಗೂ ನನ್ನ ಪೋಷಕರಿಗೆ ಕೃತಜ್ನತೆ ಸಲ್ಲಿಸುತ್ತೇನೆ ಎಂದರು.ಸಂಸ್ಥೆಯ ಅದ್ಯಕ್ಷರಾದ ಅಫ್ಜಲ್ ಷರೀಫ್‍ರವರು ಮಾತನಾಡಿ ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಲಾಗಿದ್ದು ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಲು ಪಿಯುಸಿಯಿಂದಲೇ ಅಗತ್ಯ ಮಾರ್ಗದರ್ಶನ ಹಾಗೂ ತರಬೇತಿ ನೀಡುವ ಮೂಲಕ ಕೈಗೆಟುಕದ ದುಬಾರಿ ಎಂಬಿಬಿಎಸ್ ಪದವಿಗೆ ಸರ್ಕಾರಿ ಕೋಟಾದಡಿ ಉಚಿತ ವೈದ್ಯಕೀಯ ಸೀಟನ್ನು ಪಡೆಯಲು ಅನುಕೂಲ ಮಾಡಲಾಗುತ್ತಿದ್ದು ಇದಕ್ಕೆ ಪೂರಕವೆಂಬಂತೆ ಈ ವರ್ಷ ನಮ್ಮ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಅದ್ಬುತ ಸಾಧನೆ ಮಾಡಿದ್ದಾರೆ.
ಇದೇ ರೀತಿ ಮುಂದಿನ ದಿನಗಳಲ್ಲಿ ಗುಣಾತ್ಮಕ ಶಿಕ್ಷಣ ಹಾಗೂ ಯೋಜನಾಬದ್ದ ತರಬೇತಿ ನೀಡುವ ಮೂಲಕ ಅತಿ ಹಿಂದುಳಿದ ಹಾಗೂ ಮದ್ಯಮ ವರ್ಗದ ಮಕ್ಕಳು ಸರ್ಕಾರೀ ಸೀಟನ್ನು ಪಡೆದು ಉನ್ನತ ವ್ಯಾಸಂಗ ಮಾಡಲು ಅನುಹು ಮಾಡಿಕೊಡಲಾಗುವುದು, ಗ್ಲೋಬಲ್ ಶಾಹೀನ್ ಕಾಲೇಜು ಬೀದರಿನ ಶಾಹೀನ್ ಶಿಕ್ಷಣ ಸಂಸ್ಥೆಯ ಅಂಗಸಂಸ್ಥೆಯಾಗಿದ್ದು ಈ ವರ್ಷದ ನೀಟ್ ಪರೀಕ್ಷೆಯಲ್ಲಿ ಶಾಹೀನ್ ಸಂಸ್ಥೆಯು ಅಭೂತಪೂರ್ವ ಫಲಿತಾಂಶ ಪಡೆದಿದ್ದು 50 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು 600ಕ್ಕಿಂತ ಅದಿಕ ಅಂಕಗಳನ್ನು ಪಡೆದಿರುತ್ತಾರೆ.
ಹಾಗೂ ಸುಮಾರು 450 ಕ್ಕಿಂತ ಅಧಿಕ ವಿದ್ಯಾರ್ಥಿಗಳು ಸರ್ಕಾರಿ ಉಚಿತ ವೈದ್ಯಕೀಯ(ಎಂ.ಬಿ.ಬಿ.ಎಸ್.) ಸೀಟುಗಳು ಸಿಗುವ ಸಾಧ್ಯತೆಯಿರುವುದು ಹೆಮ್ಮೆಯ ವಿಷಯವಾಗಿದ್ದು ಈ ಮೂಲಕ ಕರ್ನಾಟಕ ರಾಜ್ಯದ ಅತಿ ಹೆಚ್ಚು ಸರ್ಕಾರಿ ವೈದ್ಯಕೀಯ ಸೀಟನ್ನು ಪಡೆಯುವ ದಾಖಲೆ ಮಾಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಲೇಜಿನ ಕಾರ್ಯದರ್ಶಿಗಳಾದ ಅಬ್ರಾರ್ ಅಹಮದ್, ಪ್ರಾಂಶುಪಾಲರಾದ ಶೇಕ್ ಮಹಮ್ಮದ್ ಅನ್ವರ್, ಉಪನ್ಯಾಸಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.