BJPbreaking newsPolitics Public

Dalit Seva Abhiyan by BJP in Tumkur

Dalit Seva Abhiyan by BJP in Tumkur

ತುಮಕೂರು:ಬಿಜೆಪಿ ಪಕ್ಷದ ದೇಶ ಮೊದಲು, ನಂತರ ವ್ಯಕ್ತಿ ಎಂಬ ಮಹತ್ವದ ಉದ್ದೇಶದಿಂದ ಕೆಲಸ ಮಾಡುತಿದ್ದು, ಇಂತಹ ಪಕ್ಷವನ್ನು ದಲಿತರು ಬಲಗೊಳಿಸಬೇಕಿದೆ ಎಂದು ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ತಿಳಿಸಿದ್ದಾರೆ.


ನಗರದ ಕ್ಯಾತ್ಸಂದ್ರದ ಎಸ್.ಎಲ್.ಎನ್. ನಗರದಲ್ಲಿರುವ ಸಿದ್ದಗಂಗಯ್ಯನವರ ಮನೆಯಲ್ಲಿ ಬಿಜೆಪಿ ಪಕ್ಷ ಆಯೋಜಿಸಿದ್ದ ದಲಿತ ಸೇವಾ ಅಭಿಯಾನ ಮತ್ತು ಭಾರತ ಮಾತೆಯ ಪೂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು, ಒಂದು ಉತ್ತಮ ರಾಷ್ಟ್ರ ನಿರ್ಮಾಣವಾಗಬೇಕಾದರೆ ದಲಿತರು ಧರ್ಮ,ಸಂಸ್ಕøತಿಯ ಬಗ್ಗೆ ಇರುವ ಭಾವನೆಗಳು ಪರಿಷ್ಕರಣೆಯಾಗಬೇಕಿದೆ ಎಂದರು.


ಇದುವರೆಗೂ ದೇಶದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷ ಹೆಂಡ,ಸರಾಯಿ,ಇನ್ನಿತರ ಸಣ್ಣ,ಪುಟ್ಟ ಆಮೀಷಗಳಿಗೆ ಬಲಿಯಾ ಗುವಂತೆ ಮಾಡಿ, ಅಭಿವೃದ್ದಿ ಎಂಬುದು ಮರಿಚೀಕೆಯಾಗಿತ್ತು.ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಈ ವರ್ಷಗಳ ಅಭಿವೃದ್ದಿಗೆ ಹಗಲಿರುಳು ದುಡಿಯುತ್ತಿದ್ದಾರೆ. ಹಾಗಾಗಿ ಬಿಜೆಪಿಯನ್ನು ಬಲಪಡಿಸುವಂತೆ ಕೆಲಸವನ್ನು ದಲಿತರು ಮಾಡಬೇಕಾ ಗಿದೆ ಎಂದು ವೈ.ಹೆಚ್.ಹುಚ್ಚಯ್ಯ ತಿಳಿಸಿದರು.


ಈಗಾಗಲೇ ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ವತಿಯಿಂದ ತುಮಕೂರು ನಗರದ ದಿಬ್ಬೂರು, ಪೂರ್ ಹೌಸ್ ಕಾಲೋನಿ, ಜಯಪುರ, ದೇವರಾಯಪಟ್ಟಣ ದಲಿತ ಕಾಲೋನಿಗಳಿಗೆ ಭೇಟಿ ನೀಡಿ, ಅವರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ಪ್ರಯತ್ನ ನಡೆಸಲಾಗಿದೆ.ದಲಿತರನ್ನು ಹೊಟ್ಟೆಪಾಡಿನವರು ಎಂದಿರುವ ಸಿದ್ದರಾಮಯ್ಯ ಅವರು ದಲಿತ ಕಾಲೋನಿಗೆ ಬರದಂತೆ ತಡೆಬೇಕೆಂದು ವೈ.ಹೆಚ್.ಹುಚ್ಚಯ್ಯ ಮನವಿ ಮಾಡಿದರು.


ತುಮಕೂರು ನಗರ ಶಾಸಕ ಜೋತಿಗಣೇಶ್,ಬಿಜೆಪಿ ಶ್ರೀಮಂತರ ಪಕ್ಷ ಎಂಬ ಹಣಪಟ್ಟೆ ಕಳಚಿ 15-20 ವರ್ಷಗಳೇ ಕಳೆದಿವೆ.ಇಂದಿನ ರಾಷ್ಟ್ರಪತಿ,ಪ್ರಧಾನ ಮಂತ್ರಿಗಳು ತಳಸಮುದಾಯಕ್ಕೆ ಸೇರಿದವರು,ಸಂಪುಟ ವಿಸ್ತರಣೆಯಲ್ಲಿ ಹಲವಾರು ಶೋಷಿತ ಸಮುದಾಯಗಳಿಗೆ ಅವಕಾಶ ಕಲ್ಪಿಸಿದೆ.ಕಟ್ಟಡ ಕಡೆಯ ವ್ಯಕ್ತಿಗೂ ಅಧಿಕಾರ ನೀಡಿದ್ದರೆ ಅದು ಬಿಜೆಪಿ ಪಕ್ಷ, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಅಕ್ಷರಶಹಃ ಜಾರಿಗೆ ತಂದಿದೆ.ಭಾರತಕೋಸ್ಕರ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡೋಣ ಎಂದು ಸಲಹೆ ನೀಡಿದರು.


ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೆಚ್.ಎನ್.ಚಂದ್ರಶೇಖರ್ ಮಾತನಾಡಿ, ಭಾರತೀಯ ಸಂಸ್ಕøತಿ,ಹಿಂದೂ ಧರ್ಮದಲ್ಲಿ ಜಾತಿ ಎಂಬುದೇ ಇಲ್ಲ. ಮೌರ್ಯರ ಆಗಮನದ ನಂತರ, ವರ್ಗ ವ್ಯವಸ್ಥೆಯನ್ನೇ ಜಾತಿ ಎಂದು ಬಿಂಬಿಸಿ, ಜನರಲ್ಲಿ ಧರ್ಮದ ಬಗ್ಗೆ ಕೆಟ್ಟ ಭಾವನೆ ಬರುವಂತೆ ಮಾಡಿದರು.ಜಾತಿಯತೆ ತೊಲಗದೆ ಭಾರತದ ಉದ್ದಾರ ಸಾಧ್ಯವಿಲ್ಲ.ಹಾಗಾಗಿ ಎಲ್ಲರೂ ಎಲ್ಲರೊಂದಿಗೆ ಬೇರತು ಸಹಬೋಜನ ಮಾಡುವ ಮೂಲಕ ಅಂತರವನ್ನು ಕಡಿಮೆ ಮಾಡಿಕೊಳ್ಳಲು ನಾವೆಲ್ಲರೂ ಪಣ ತೊಡಬೇಕಾಗಿದೆ.ಇಂದು ಭಾರತೀಯರು ಪೂಜಿಸುತ್ತಿರುವ ದೇವರುಗಳೆಲ್ಲಾ ಮೇಲ್ವರ್ಗಕ್ಕೆ ಸೇರಿದವರಲ್ಲ.ದೇಶಕ್ಕೆ ವೇದ,ಉಪನಿಷತ್ತು, ರಾಮಾಯಣ, ಮಹಾಭಾರತ ನೀಡಿದವರು ಮೇಲ್ವರ್ಗದವರಲ್ಲ.ಇದನ್ನು ನಾವು ಪ್ರತಿ ಕಾಲೋನಿಯ ಯುವಜನತೆಗೂ ತಿಳಿಸುವ ಮೂಲಕ ಬಿಜೆಪಿ ಪಕ್ಷದ ಪರ ಕೆಲಸ ಮಾಡುವಂತೆ ಮಾಡಬೇಕಾಗಿದೆ ಎಂದರು.


ಬಿಜೆಪಿ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಮೇಶ್.ಎಸ್.ಆರ್, ನಗರ ಅಧ್ಯಕ್ಷ ವರದಯ್ಯ, ಹನುಮಂತರಾಯಪ್ಪ, ನವೀನ್, ಸಿದ್ದಗಂಗಯ್ಯ, ನಗರ ಅಧ್ಯಕ್ಷ ಹನುಮಂತರಾಜು ಮತ್ತಿತರರು ಸಹಬೋಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Share this post

About the author

Leave a Reply

Your email address will not be published. Required fields are marked *