ತುಮಕೂರಿನ ಸಂಪಿಗೆ ಕಂಪರ್ಟ್ ನಲ್ಲಿ ಎಆರ್‍ಡಬ್ಲ್ಯ ರೀಟೆಲರ್ಸ್ ಮತ್ತು ಟೆಕ್ನಿಷಿಯನ್ಸ್ ವೇಲ್ಫೇರ್ ಅಸೋಸಿಯೇಷನ್ ವತಿಯಿಂದ ಗಾಂಧಿ ಜಯಂತಿ ಹಾಗೂ ಸಂಘದ ಎರಡನೇ ವರ್ಷದ ವಾರ್ಷಿಕೊತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸದಸ್ಯರೆಲ್ಲರಿಗೂ ಟೂಲ್ಸ್ ಕಿಟ್ ವಿತರಿಸಲಾಯಿತು.
ಸಂಘದ ಎರಡನೇ ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಹೊಸ ಕಮಿಟಿಯ ಕಾರ್ಯಮಂಡಳಿಗೆ ಸಂಸ್ಥಾಪಕ ಅಧ್ಯಕ್ಷರಾದ ಅಮರನಾಥ ಶೆಟ್ಟಿ ಅವರು ಅಧಿಕಾರ ಹಸ್ತಾಂತರ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷ ಅಮರನಾಥ ಶೆಟ್ಟಿ ರವರು, ಹೊಸ ಕಮಿಟಿ ಸಂಘವನ್ನು ಮತ್ತಷ್ಟು ಉನ್ನತ್ತಿಯ ಕಡೆಗೆ ತೆಗೆದುಕೊಂಡು ಹೋಗುವಂತೆ ಸಲಹೆ ನೀಡಿದರು. ಗಾಂಧಿಜೀಯರ ಸ್ವಾತಂತ್ರ ಹೋರಾಟದ ಕುರಿತು ಸಂಘದ ಸದಸ್ಯರುಗಳಿಗೆ ಮಾಹಿತಿ ನೀಡಿದರು.
ಈ ವೇಳೆ ಸಂಸ್ಥಾಪಕ ಅಧ್ಯಕ್ಷರಾದ ಅಮರನಾಥ ಶೆಟ್ಟಿ, ನೂತನ ಅಧ್ಯಕ್ಷರಾದ ಕೃಷ್ಣೇಗೌಡ, ಉಪಾಧ್ಯಕ್ಷರಾದ ಅಬೀದ್, ಪ್ರಸನ್ನ, ಕಾರ್ಯದರ್ಶಿಯಾದ ಜಮೀರ್, ಖಜಾಂಚಿ ಸಮೀರ್ ಅಹಮದ್, ಜಬಿವುಲಾ, ನಯಾಜ್ ಪಾಷ, ನಬ್ಬಿ, ನವೀದ್, ಅಬ್ದುಲ್ ರಹೀಂ, ಸುಹೇಲ್,ಖಲೀಲ್,ಯೂನಿಸ್ ಹಾಗೂ ಸಂಘದ ಸರ್ವ ಸದಸ್ಯರು ಹಾಜರಿದ್ದರು.