ತುಮಕೂರು: ಜಿಲ್ಲೆಯ ಶಿರಾ ತಾಲ್ಲೂಕು ದಿನಾಂಕ: 06.11.2022 ರಂದು ಜಿಲ್ಲಾ ವಕ್ಫ್ ಸಲಹಾಸಮಿತಿ ತುಮಕೂರು ರವರು ಶಿರಾ ತಾಲ್ಲೂಕು ಕಸಬಾ ಹೋಬಳಿ ಸೇರಿರುವಂತಹ “ದರ್ಗಾ ಹಜರತ್ ಪರೀದ್ದುಲ್ಲಾ-ಷಾ-ಮಕಾನ್” ಮತ್ತು ದರ್ಗಾ ಭೇಟಿ ನೀಡಿರುತ್ತಾರೆ.
ಮಾನ್ಯ ಮುಖ್ಯಕಾರ್ಯ ನಿರ್ವಾಹಣಾಧಿಕಾರಿಗಳು ಕರ್ನಾಟಕ ರಾಜ್ಯ ವಾಕ್ಫ್ ಮಂಡಳಿ ಬೆಂಗಳೂರು ರವರ ಆದೇಶದನ್ವಯ ಜಿಲ್ಲಾ ವಕ್ಫ್ ಅಧಿಕಾರಿಗಳಾದ ನವೀದ್ ಪಾಷ ತುಮಕೂರು ರವರು ಸದರಿ ದರ್ಗಾದ ಉಸ್ತುವಾರಿ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಮಾನ್ಯ ಜಿಲ್ಲಾಧಿಕಾರಿಗಳಲ್ಲಿ ಈ ದರ್ಗಾದ ಜಮೀನಿನ ಮೇಲೆ ಪಕರಣ ದಾಖಲಾಗಿ ವಕ್ಫ್ ಮಂಡಳಿಯ ಪರವಾಗಿ ತೀರ್ಪಗಿರುತ್ತದೆ. ಈ ಸಂದರ್ಭದಲ್ಲಿ ಜಿಲ್ಲಾ ವಕ್ಫ್ ಸಲಹಾಸಮಿತಿಯ ಅಧ್ಯಕ್ಷರಾದ ಮಹುಮ್ಮದ್ ಆಪೋಜ್ ಆಹಮದ್ ಉಪಾಧ್ಯಕ್ಷರಾದ ಹಮೀದ್ ಪಾಷ, ಮೌಲಾನ ಆರೀಫ್ ರಜಾ, ಶಬ್ಬಿರ್ ಆಹಮ್ಮದ್, ಖಾಲೀದ್ ಸದಸ್ಯರಾದ ಸೈಯದ್ ನೂರ್ ಮಹಮ್ಮದ್, ಅಸ್ಲಂಖಾನ್, ಅಮ್‌ಜದ್ ಪಾಷ, ಸುಹೇಲ್, ಆಮೀಮ್ ಆಹಮದ್, ಝಬೀವುಲ್ಲಾ ಖಾನ್ ಪಾಲ್ಗೊಂಡಿದ್ದರು.