BJPbreaking newsPolitics Public

BJP state leader MB Nandish statement about MLC candidate’s of Tumkur

BJP state leader MB Nandish statement about MLC candidate’s of Tumkur

ತುಮಕೂರು:ಮುಂಬರುವ ಡಿಸೆಂಬರ್ 10 ರಂದು ನಡೆಯುವ ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ನವೆಂಬರ್ 19ರಂದು ಬಿಜೆಪಿ ಪಕ್ಷದವತಿಯಿಂದ ಜನಸ್ವರಾಜ್ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್ ತಿಳಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರಾಗಿರುವ ಗ್ರಾಮಪಂಚಾಯಿತಿ ಸದಸ್ಯರು,ಪಕ್ಷದ ಬೆಂಬಲಿತ ಸದಸ್ಯರು ಹಾಗೂ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರನ್ನು ಒಂದೆಡೆ ಸೇರಿಸಿ, ಮತದಾರರನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಜನಸ್ವರಾಜ್ ಯಾತ್ರೆ ಹಮ್ಮಿಕೊಳ್ಳಲಾಗಿದೆ.ರಾಜ್ಯದಲ್ಲಿ ನಾಲ್ಕು ಕಡೆ ಜನಸ್ವರಾಜ್ ಯಾತ್ರೆಗಳು ನಡೆಯುತ್ತಿದ್ದು, ತುಮಕೂರು, ದಾವಣಗೆರೆ, ಚಿತ್ರದುರ್ಗ, ರಾಮನಗರ ಜಿಲ್ಲೆಗಳನ್ನು ಒಳಗೊಂಡ ಯಾತ್ರೆ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ನಡೆಯಲಿದ್ದು, ಇಡೀ ಯಾತ್ರೆಯ ರೂಪುರೇಷೆಗಳನ್ನು ಮಹೇಶ್ ತೆಂಗಿನ ಕಾಯಿ ಮತ್ತು ತುಳಿಸಿ ಮುನಿರಾಜುಗೌಡ ಅವರ ಉಸ್ತುವಾರಿಯಲ್ಲಿ ನಡೆಯಲಿದೆ ಎಂದರು.


ನ.19ರಂದು ತುಮಕೂರು ನಗರದ ಗಾಜಿನಮನೆಯಲ್ಲಿ ನಡೆಯುವ ಬಿಜೆಪಿ ಜನಸ್ವರಾಜ್ ಯಾತ್ರೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್,ಅಶ್ವತ್ಥ ನಾರಾಯಣ ಎ.ನಾರಾಯಣಸ್ವಾಮಿ,ಮಾಧುಸ್ವಾಮಿ,ಬಿ.ಸಿ.ನಾಗೇಶ್, ಬಿ.ವೈ.ವಿಜಯೇಂದ್ರ, ಅವರ ತಂಡ ಬಿಜೆಪಿ ಕಾರ್ಯಕರ್ತರ, ಬೆಂಬಲಿಗರೊಂದಿಗೆ ಮತ ಯಾಚನೆ ಮಾಡಲಿದ್ದಾರೆ.
ಜನ ಸ್ವರಾಜ್ ಯಾತ್ರೆ ಕಾರ್ಯಕ್ರಮ ನಡೆಯಲಿದ್ದು, ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಮುಖಂಡರು, ಗ್ರಾ.ಪಂ.ಸದಸ್ಯರನ್ನು ಭೇಟಿ ಮಾಡಿ, ಅಭಿಪ್ರಾಯ ಸಂಗ್ರಹಿಸಿದ್ದು, ಎಲ್ಲ ಮುಖಂಡರೊಂದಿಗೆ ಚುನಾವಣೆಯಲ್ಲಿ ಭಾಗವಹಿಸಲು ಯೋಜನೆ ರೂಪಿಸಿದ್ದೇವೆ ಎಂದರು.

ಬಿಜೆಪಿ ಸಂಸದರು, ಐವರು ಶಾಸಕರು ಜಿಲ್ಲೆಯಲ್ಲಿದ್ದಾರೆ, 1800 ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ, ಕಳೆದ ಬಾರಿ ಸಂಸದರಿಲ್ಲದೇ ಪಡೆದುಕೊಂಡಿದ್ದ ಮತಕ್ಕಿಂತ ಹೆಚ್ಚು ಮತಗಳನ್ನು ಪಡೆದುಕೊಂಡು ಬಿಜೆಪಿ ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸವನ್ನು ಎಂ.ಬಿ.ನಂದೀಶ್ ವ್ಯಕ್ತಪಡಿಸಿದರು.


ವಿಧಾನಪರಿಷತ್ ಚುನಾವಣೆಗೆ ತುಮಕೂರು ಜಿಲ್ಲೆಯಿಂದ ಮಾಜಿ ಎಂ.ಎಲ್.ಸಿ. ಡಾ.ಎಂ.ಆರ್.ಹುಲಿನಾಯ್ಕರ್, ಅಂಬಿಕಾ ಹುಲಿನಾಯ್ಕರ್, ವೈ.ಎಚ್.ಹುಚ್ಚಯ್ಯ,ರಾಜೇಶ್‍ಗೌಡ, ಸೇರಿದಂತೆ ಐವರು ಅಭ್ಯರ್ಥಿಗಳಿದ್ದು, ನಾಳೆ ಸಂಜೆ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳಲಿದೆ ಎಂದು ತಿಳಿಸಿದರು.
ಜನಸ್ವರಾಜ್ ಯಾತ್ರೆ ಸಾಮೂಹಿಕ ನೇತೃತ್ವದಲ್ಲಿ ನಡೆಯಲಿದ್ದು,ರಾಜ್ಯದ ನಾಲ್ಕು ಕಡೆಗಳಲ್ಲಿ ಜನಸ್ವರಾಜ್ ಯಾತ್ರೆ ನಡೆಯಲಿದ್ದು, ಬಿ.ಎಸ್.ಯಡಿಯೂರಪ್ಪ,ಬಿಜೆಪಿ ರಾಜ್ಯಾಧ್ಯಕ್ಷ ನಳೀನಿಕುಮಾರ್ ಕಟೀಲ್,ಬಿ.ಎಸ್.ಯಡಿಯೂರಪ್ಪ ಅವರುಗಳು ನೇತೃತ್ವದಲ್ಲಿ ನಡೆಯಲಿವೆ ಎಂದರು.

Share this post

About the author

Leave a Reply

Your email address will not be published. Required fields are marked *