ತುಮಕೂರು: ರಾಮಕೃಷ್ಣ ಪರಮಹಂಸರು ದೀನದಲಿತರು ಅಶಕ್ತರಲ್ಲಿ ದೇವರನ್ನು ಕಂಡಂತೆ ಶಕ್ತರೆಲ್ಲರು ಅಶಕ್ತರಲ್ಲಿ ದೇವರನ್ನು ಕಾಣಬೇಕು, ಆಗಷ್ಟೇ ಅಲಭ್ಯವಾದ ಮಾನವ ಜನ್ಮ ಸಾರ್ಥಕ ಹೊಂದುವುದು ಎಂದು ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ ನುಡಿದರು.
ನಗರದ ಸಿದ್ದರಾಮೇಶ್ವರ ಬಡಾವಣೆಯಲ್ಲಿರುವ ಅಂಧ ಮಕ್ಕಳ ಕಲ್ಯಾಣ ಕೇಂದ್ರವಾದ ದಾರಿದೀಪ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಕೆಜಿಎಲ್‍ರವಿ ಅಭಿಮಾನಿ ಬಳಗ ಮತ್ತು ದಿವ್ಯದೃಷ್ಠಿ ಸಂಸ್ಥೆ ಸಹಯೋಗದಲ್ಲಿ ಜರುಗಿದ ಜಿಲ್ಲಾ ಜೆಡಿಯು ಅಧ್ಯಕ್ಷ ಹಾಗೂ ಸಮಾಜಸೇವಕರಾದ ಕೆ.ಜಿ.ಎಲ್.ರವಿ ಅವರ 56ನೇ ಹುಟ್ಟುಹಬ್ಬ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ತೀರ್ಥಯಾತ್ರೆ, ದೇವರನಾನಾ ಸೇವೆಗಳನ್ನು ಮಾಡುವ ಮಂದಿ ವಿಕಲಚೇತನರ ಸೇವೆಯನ್ನು ನಿರ್ಮಲಭಾವದಿಂದ ಮಾಡಿ ಪುಣ್ಯವನ್ನಾರ್ಜಿಸಲು ಮುಂದಾಗಬೇಕು, ಹುಟ್ಟುಹಬ್ಬ ಆಚರಣೆ ನೆಪದಲ್ಲಿ ಕಟೌಟ್‍ಗಳಿಗೆ ಕ್ಷೀರಾಭಿಷೇಕ ಮಾಡುವ ಬದಲು ದುಂದುವೆಚ್ಚ ಮಾಡುವ ಬದಲು ವಿಕಲಚೇತನರ ಸೇವೆಗೆ ಮುಂದಾಗಿ ಬದುಕು ಸಾರ್ಥಕ ಪಡಿಸಿಕೊಳ್ಳಬೇಕು. ಕೆಜಿಎಲ್ ರವಿ ಕುಟುಂಬದವರು ಮಕ್ಕಳಿಗೆ ಆಸನ ನೀಡಿರುವುದು ಅಭಿನಂದನೀಯ ಎಂದರು.
ದಿವ್ಯದೃಷ್ಠಿ ಸಂಸ್ಥೆಯವರು ದಾರಿದೀಪದಲ್ಲಿನ 25 ಹೆಣ್ಣುಮಕ್ಕಳ ಆರೋಗ್ಯ ತಪಾಸಣೆ ಮಾಡಿಸಿದರಲ್ಲದೇ ಔಷಧ ಸಾಮಗ್ರಿಯನ್ನು ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಬೆಂಗಳೂರು ನಗರ ಜೆಡಿಯು ಅಧ್ಯಕ್ಷ ರಮೇಶ್‍ಗೌಡ ವಹಿಸಿದ್ದರಲ್ಲದೆ, ರಾಜಕಾರಣ ಗಳ ಹುಟ್ಟುಹಬ್ಬದಂತೆ ವೈಭವೀಕರಣದತ್ತ ಹೋಗದೇ ಕೆಜಿಎಲ್‍ರವಿ ಹುಟ್ಟುಹಬ್ಬ ವಿಕಲಚೇತನರೊಂದಿಗೆ ಪ್ರೀತಿ ಪ್ರೇಮಗಳೊಂದಿಗೆ ಸಾರ್ಥಕ ಆಚರಣೆಗೆ ಸಾಕ್ಷಿಯಾಗಿದ್ದು ಅಭಿನಂದನೀಯ ಎಂದರು.
ಜಯಕರ್ನಾಟಕ ಸಂಘಟನೆಯ ಜಿಲ್ಲಾ ಮಹಿಳಾಧ್ಯಕ್ಷೆ ದಿವ್ಯ ಸೋಮಶೇಖರ್, ದಿವ್ಯದೃಷ್ಠಿ ಸಂಸ್ಥೆಯ ನಂದಿನಿ ಜೈನ್, ಜೆಡಿಯು ರಾಜ್ಯ ಕಾರ್ಯದರ್ಶಿ ಕಲ್ಪನಾ, ನಗರಾಯಕ್ಷೆ ಲಕ್ಷ್ಮೀ, ಶಾರದಾಂಬ ಟ್ರಸ್ಟ್‍ನ ಯಶೋಧ, ಸಮಾಜ ಸೇವಕ ನಟರಾಜು, ಬಸವರಾಜು ಮಾತನಾಡಿದರು. ಇದೇ ಸಂದರ್ಭದಲ್ಲಿ ಕೆಜಿಎಲ್ ರವಿ ಅವರನ್ನು ಸಂಘಸಂಸ್ಥೆಗಳು ಗೌರವಿಸಿದರು. ದಾರಿದೀಪ ಟ್ರಸ್ಟ್‍ನ ಶಿವಕುಮಾರ್ ಉಪಸ್ಥಿತರಿದ್ದರು.
ಕುಸುಮ ಜೈನ್ ಮತ್ತು ದಾರಿ ದೀಪ ಮಕ್ಕಳು ಪ್ರಾರ್ಥಿಸಿದರು, ವೀರಪ್ಪದೇವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ರೇಣುಕಾ ಪ್ರಸಾದ್ ವಂದಿಸಿದರು.
good jobs