BJP Corporator bends down at Iftar Gathering of Muslim community
ತುಮಕೂರು ನಗರದ ಖಾದರ್ ನಗರ ಬಡಾವಣೆಯಲ್ಲಿ ಮುಸ್ಲಿಂ ಸಮುದಾಯದ ವತಿಯಿಂದ ಹಿಂದೂ ಬಾಂಧವರಿಗೆ ರಂಜಾನ್ ಇಫ್ತಾರ್ ಕೂಟ ಆಯೋಜಿಸಿದ್ದರು.
ಇಫ್ತಾರ್ ಕೂಟ ಗೆ ಭಾಗವಹಿಸಿದ 35ನೆ ವಾರ್ಡ್ ಕಾರ್ಪೊರೇಟರ್ ನಿರ್ಮಲದೇವಿ ಹಾಗೂ ಬಿಜೆಪಿ ಹಿರಿಯ ಮುಖಂಡ ಶಿವಕುಮಾರ್ ರವರು ಸುದ್ದಿಗಾರರೊಂದಿಗೆ ಮಾತನಾಡಿ ಖಾದರ್ ನಗರದ ಮಸೀದಿಯಲ್ಲಿ ಮುಸ್ಲಿಂ ಸಮುದಾಯದ ವತಿಯಿಂದ ಪವಿತ್ರವಾದ ರಂಜಾನ್ ತಿಂಗಳಿನ ಉಪವಾಸ ಇಫ್ತಾರ್ ಕೋಟದಲ್ಲಿ ಎಲ್ಲಾ ಧರ್ಮದವರುಗೂ ಆಹ್ವಾನಿಸಿದರು. ಇಫ್ತಾರ್ ಭೋಜನ ನಂತರ ಭಾಗವಹಿಸಿದ ಎಲ್ಲಾ ಹಿಂದೂ ಬಾಂಧವರಿಗೆ ಸನ್ಮಾನಿಸಿದ ಮುಸ್ಲಿಂ ಬಾಂಧವರಿಗೆ ಧನ್ಯವಾದಗಳನ್ನು ತಿಳಿಸಿದರು. ನಾವು ಹಿಂದೂ-ಮುಸ್ಲಿಂ ಅನ್ನುವ ಯಾವುದೇ ಭೇದಭಾವ ಇಲ್ಲದೆ ಒಂದಾಗಿ ಬಾಳಬೇಕು ಎಂದು ಸಮಾಜಕ್ಕೆ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ರಾಜಣ್ಣ ರೈತ ಮುಖಂಡರು, ಲೋಕೇಶ, ಮಸೀದಿ ಅಧ್ಯಕ್ಷರು ರಹಮತ್ ಉಲ್ಲಾ ಖಾನ್, ಉಪಾಧ್ಯಕ್ಷರು ನಾಸಿರ್ ಖಾನ್, ಕಾರ್ಯದರ್ಶಿ ಬಾಬಾಜಾನ್, ಉಪನ್ಯಾಸಕರ ಭಾಷಾ ಸಾಹೇಬ್, ಡಾ. ಜಿ ಇರ್ಫಾನ್, ಜೆ.ಐ.ಹೆಚ್ ಅಧ್ಯಕ್ಷರು ಅಸದ್ ಉಲ್ಲಾ ಖಾನ್, ಎ.ಪಿ.ಸಿ.ಆರ್ ಅಧ್ಯಕ್ಷರು ತಾಜುದ್ದೀನ್ ಶರೀಫ್ ಮತ್ತು ಹಿಂದೂ ಮುಸ್ಲಿಂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
List your business online