breaking news

ತುಮಕೂರಿನ ಶಾಂತಿಪ್ರಿಯರಿಂದ ಸೌಹಾರ್ದಯುತ ಸಂಕ್ರಾಂತಿ ಆಚರಣೆ

ತುಮಕೂರಿನ ಶಾಂತಿಪ್ರಿಯರಿಂದ ಸೌಹಾರ್ದಯುತ ಸಂಕ್ರಾಂತಿ ಆಚರಣೆ

ಸಂಕ್ರಾಂತಿ ಹಬ್ಬವು ಸಂತೋಷ ಮತ್ತು ಪ್ರೀತಿಯನ್ನು ಹಂಚುವ ಹಬ್ಬವಾಗಿದ್ದು ತನ್ನ ಸುತ್ತಲಿನ ಪರಿಸರವನ್ನು ಸೌಹಾರ್ದಯುತವಾಗಿ
ಕಾಪಾಡಿಕೊಳ್ಳುವುದು ಸಂಕ್ರಾಂತಿ ಹಬ್ಬದ ವಿಶೇಷವಾಗಿದೆ ಎಂದು ಚಿಂತಕ ಪ್ರೊ. ಕೆ. ದೊರೈರಾಜ್ ತಿಳಿಸಿದರು ಅವರು ದಿನಾಂಕ : 14-01-2025ರಂದು ಸಂಜೆ 4 ಗಂಟೆಗೆ ಸೌಹಾರ್ದ ತುಮಕೂರು ವತಿಯಿಂದ ಹಮ್ಮಿಕೊಂಡಿದ್ದ ಸೌಹಾರ್ದ ಸಂಕ್ರಾಂತಿ ಹಬ್ಬವನ್ನು ಜನಚಳವಳಿ ಕೇಂದ್ರದಲ್ಲಿ ಎಳ್ಳು ಬೆಲ್ಲ, ಕಡಲೆ ಕಾಯಿ. ಗೆಣಸು ಅವರೆ ಕಾಯಿ ನೀಡುವುದರ ಮೂಲಕ ಚಾಲÀನೆ ನೀಡಿ ಮಾತನಾಡಿದರು. ಸಂಕ್ರಾಂತಿ ಹಬ್ಬವು ದುಡಿಯುವ ವರ್ಗದ ಹಬ್ಬವಾಗಿದ್ದು ಇದು ಜಾತಿ- ಧರ್ಮವನ್ನು ಮೀರಿದ್ದಾಗಿದೆ ಈ ಹಬ್ಬವು ಪ್ರೀತಿ, ಪ್ರೇಮ, ಸಂತೋಷವನ್ನು ನೀಡುವ ಹಬ್ಬವಾಗಿದ್ದು ಈ ಪರಂಪರಯನ್ನು ನಿರಂತರವಾಗಿ ಮುಂದುವರಿಸಿಕೊಡು ಹೋಗಬೇಕು ಎಂದರು.

ತುಮಕೂರಿನ ಸಮಾನಮನಸ್ಕ ಸಮಿತಿಯಿಂದ ಸೌಹಾರ್ದಯುತ ಸಂಕ್ರಾಂತಿ ಆಚರಣೆ

ಪರಿಸರವಾದಿ ಸಿ.ಯತಿರಾಜು ಮಾತನಾಡಿ ಸೌಹಾರ್ದಯುತವಾದ ಹಬ್ಬಗಳನ್ನು ಸಹ ತನ್ನ ವೈಯುಕ್ತಿಕ ಕಾರಣಗಳಿಗೆ ಧ್ವೇಷದ ರಾಜಕಾರಣ ಮಾಡಲು ಬಳಸುತ್ತಿರುವ ಕಾಲಘಟ್ಟದಲ್ಲಿ ನಾವುಗಳು ಇದ್ದು ಇದನ್ನು ಸೋಲಿಸಬೇಕಾದರೆ ಅದು ಪ್ರೀತಿಯನ್ನು ಹಂಚುವ ಮೂಲಕ ಮಾತ್ರ ಸೋಲಿಸಲು ಸಾಧ್ಯವಾಗಿದ್ದು ಈ ರೀತಿಯ ಸೌಹಾರ್ದ
ಆಚರಣೆಗಳು ಮತ್ತಷ್ಟು ಹೆಚ್ಚಲಿ ಎಂದರು.

ತಾಜುದ್ದೀನ್ ಷರೀಪ್ ಮಾತನಾಡಿ ನಾವು ಚಿಕ್ಕವರಿದ್ದಾಗ ಹಳ್ಳಿಗಳಲ್ಲಿ ನೀಡುವ ಕಡೆಲೆ ಕಾಯಿ ಗೆಣಸು ಗಳನ್ನು ತಿಂದು ಸಂಭ್ರಮಿಸುತ್ತಿದ್ದೇವು ಇಂದು ನಮ್ಮ ನಡುವೆ ಸೌಹಾರ್ದಯುತವಾದ ಸಮಾಜ ನಿರ್ಮಾಣಕ್ಕಾಗಿ ಸೌಹಾರ್ದಯುತವಾದ
ವಾತವರಣ ನಿರ್ಮಾಣ ಮಾಡಬೇಕಾದ ಅವಶ್ಯಕತೆ ಇದೆ ಎಂದುರು.

ಸೌಹಾರ್ದಕಾರ್ಯಕ್ರಮದಲ್ಲಿಬಿ.ಉಮೇಶ್,ಅಪ್ಸರ್,ವಕೀಲರಾದ ಮೊಹಿದ್ದೀನ್ ,ಕೆಂಪೇಗೌಡ,ಪಂಡಿತ್ ಜವಹರ್,ಪಿ.ಎನ್.ರಾಮಯ್ಯ,ಎಸ್.ಎನ್.ಸ್ವಾಮಿ,ಎ.ನರಸಿಂಹಮೂರ್ತಿ, ಸತ್ಯನಾರಾಯಣ,ಕಲ್ಪನಾ, ಅನುಪಮ, ಚಂದ್ರಶೇಖರ, ಸುಜಿತ್ನಾಯಕ್,ಯೋಗಿಶ್,ವ ಮುಜೀಬ್,ಅಶ್ವಥಯ್ಯ,ರವಿಶಂಕರ್,ರಫಿಕಪಾಷ್,ಬಾಬು,ಸುಬ್ರಹ್ಮಣ್ಯನಗರ
ಧಾಮಯ್ಯ,ಅಲ್ತಾಪ್‌, ಎನ್.ಕೆ.ಸುಬ್ರಮಣ್ಯ ಸಂಚಾಲಕರು ಸೇರಿದಂತೆ ಮುಂತಾದವರು ಭಗವಹಿಸಿದ್ದರು.

Amicable Sankranti celebration by like-minded committee of Tumkur

Share this post

About the author

Leave a Reply

Your email address will not be published. Required fields are marked *