ಸಾರ್ವಜನಿಕರು, ಶಾಲಾ ಮಕ್ಕಳಿಗಾಗಿ ಕೊರಟಗೆರೆ 12ನೇ ಕೆಎಸ್ಆರ್‌ಪಿ ಘಟಕದಲ್ಲಿ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ
ತುಮಕೂರು: ಮನುಷ್ಯನಿಗೆ ಮಾರಕವಾಗಿ ರೂಪುಗೊಂಡಿರುವ ಕ್ಯಾನ್ಸರ್ ಕಾಯಿಲೆಗೆ ಈವರೆಗೂ ಸರಿಪಡಿಸುವ ಉಪಕ್ರಮಗಳು ಸಿಕ್ಕಿಲ್ಲ ಕ್ಯಾನ್ಸರ್ ಕುರಿತು ಅನೇಕ ಸಂಶೋಧನೆಗಳು ನಡೆಯುತ್ತಿದ್ದರು ಪ್ರತಿನಿತ್ಯ ಕ್ಯಾನ್ಸರ್ ಗೆ ಮಾನವ ತುತ್ತಾಗುತಲೇ ಇದ್ದಾನೆ ಸರ್ಕಾರಗಳು ಕ್ಯಾನ್ಸರ್ ಕಾಯಿಲೆ ಬಗ್ಗೆ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿದೆ ಇದಕ್ಕೆ ಪೂರಕವೆಂಬಂತೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಹತ್ತಿರದಲ್ಲಿ ಇರುವ ಕೆ.ಎಸ್.ಆರ್.ಪಿ 12ನೇ ಪಡೆ ವತಿಯಿಂದ ಇಲ್ಲಿನ ಸುತ್ತಮುತ್ತಲಿನ ಸಾರ್ವಜನಿಕರು, ಏಕಲವ್ಯ ಶಾಲೆಯ ಮಕ್ಕಳು ಸೇರಿದಂತೆ 12ನೇ ಪಡೆಯ ತರಬೇತಿ ನಿರತ ಪೊಲೀಸ್ ಸಿಬ್ಬಂದಿಗಳಿಗೆ ಕ್ಯಾನ್ಸರ್ ಕುರಿತು ಅರಿವು ಜಾಗೃತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ಈ ವೇಳೆ ಮಂಗಳೂರಿನ ಖ್ಯಾತ ಕ್ಯಾನ್ಸರ್ ಆಸ್ಪತ್ರೆಯ ಉಪ ಕುಲಾಧಿಪತಿಗಳಾದ ಡಾ. ಎಂ ವಿಜಯ್ ಕುಮಾರ್ ಅವರು ಮಾತನಾಡಿ ಕ್ಯಾನ್ಸರ್ ಎಂದರೆ ದೇಹದೊಳಗಿನ ಕೋಶಗಳು ನಿಯಂತ್ರಣ ಕಳೆದುಕೊಂಡು ಅವ್ಯವಸ್ಥಿತವಾದ ಜೀವಕೋಶಗಳ ಗಣಿಯಾಗಿ ಪರಿಣಮಿಸಿ ಅಪಾಯವನ್ನುಂಟು ಮಾಡುತ್ತಿವೆ ಹೀಗಾಗಿ ಮನುಷ್ಯ ನಿಯಮಿತ ಆರೋಗ್ಯ ಪರೀಕ್ಷೆಗಳನ್ನ ಮಾಡಿಸುವುದು ಆರೋಗ್ಯಕರ ಆಹಾರ ಸೇವನೆ ವ್ಯಾಯಾಮ ಧೂಮಪಾನ ಮತ್ತು ಮಧ್ಯಪಾನದಿಂದ ದೂರವಿದ್ದು ಇಂತಹ ಕ್ಯಾನ್ಸರ್ ಅಪಾಯವನ್ನು ದೂರ ಮಾಡಬಹುದು ಎಂದು ಸಲಹೆ ಇತ್ತರು,
ಜಾಗತಿಕ ತಾಪಮಾನ ಮತ್ತು ತಾಂತ್ರಿಕತೆ ಬೆಳೆದಂತೆ ಮಾನವನ ದೇಹದಲ್ಲಿ ಹಾರ್ಮೋನ್ ಗಳ ವ್ಯತ್ಯಾಸ ಅಸಮರ್ಪಕ ತೂಕ ಇಳಿಕೆ ಅಧಿಕ ತೂಕ ಅಂಗಾಂಗಗಳನ್ನು ದೀರ್ಘಕಾಲಿಕ ಹುಣ್ಣು ಇತ್ಯಾದಿ ಲಕ್ಷಣಗಳು ಕ್ಯಾನ್ಸರ್ ನ ಮುಖ್ಯ ಕೊಂಡಿಗಳಾಗಿದ್ದು ಇದನ್ನು ಗಮನಿಸಿ ವೈದ್ಯಕೀಯ ಸಲಹೆ ಪಡೆಯುವುದು ಅತ್ಯಗತ್ಯವಾಗಿದೆ, ಈ ಕೂಡಲೇ ಇಂತಹ ಗುಣಲಕ್ಷಣಗಳು ಕಂಡು ಬಂದಲ್ಲಿ ವೈದ್ಯರನ್ನು ಸಂಪರ್ಕ ಮಾಡುವುದು ಅತಿ ಮುಖ್ಯ ಎಂದು ತಿಳಿಸಿದರು.
ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಒರಲ್ ಅಂಕಾಲಜಿ ವಿಭಾಗದ ಪ್ರೊಫೆಸರ್ ಡಾ. ನದೀಮೂಲ್ ಹೊಡಾ ಅವರು ಮಾತನಾಡುತ್ತಾ ಕ್ಯಾನ್ಸರ್ ಕಾಯಿಲೆ ಅನೇಕ ವಿಧಗಳಲ್ಲಿ ಮನುಷ್ಯನನ್ನ ಆಕ್ರಮಿಸಿಕೊಳ್ಳುತ್ತಿದ್ದು ಬಾಯಿ ಕ್ಯಾನ್ಸರ್ ಉಂಟಾದರೆ ತುಟಿಗಳು ವಸಡುಗಳು ನಾಲಿಗೆ ಒಳಕೆನ್ನೆ ಗಂಟಲಿನ ಮೇಲೆ ಪರಿಣಾಮ ಬೀರುತ್ತದೆ, ಇದು ಅತಿಯಾದ ತಂಬಾಕು ಜಿಗಿಯುವಿಕೆಯಿಂದ, ಬಾಯಿ ಸ್ವಚ್ಛತೆಯನ್ನ ಕಾಪಾಡು ಕೊಳ್ಳದೆ ಇರುವುದರಿಂದ ಪರಿಣಾಮಕಾರಿ ಕ್ಯಾನ್ಸರ್ ಉಂಟಾಗುತ್ತದೆ ಎಂದು ತಿಳಿಸಿದರು.

ಮನುಷ್ಯನ ಅತಿಯಾದ ಜೀವನ ಶೈಲಿಯ ಬಳಕೆ, ಅನಿಯಮಿತ ವ್ಯಾಯಾಮ ಧೂಮಪಾನ ಕುಡಿತದ ಚಟ ಸೇರಿದಂತೆ ಇತರೆ ವಿಧಗಳಿಂದ ಕ್ಯಾನ್ಸರ್ ಕಾಯಿಲೆ ಮನುಷ್ಯನಲ್ಲಿ ವಿವಿಧ ರೀತಿಯಲ್ಲಿ ಅರಳಬಹುದಾಗಿದೆ ಎಂದು ತಿಳಿಸಿದರು.
ಅಂತರಾಷ್ಟ್ರೀಯ ಯೋಗ ಮಾರ್ಗದರ್ಶಕರಾದ ಡಾ. ಭಾಗೀರಥಿ ಕನ್ನಡತಿಯವರು ಮಾತನಾಡುತ್ತಾ ಪ್ರತಿನಿತ್ಯ ಯೋಗ ಪ್ರಾಣಾಯಾಮ ಧ್ಯಾನ ಮಾಡುವುದು ಮನುಷ್ಯನಿಗೆ ದೇವರು ಕೊಟ್ಟಿರುವ ಬಹುದೊಡ್ಡದಾದ ವರ ಇದರಿಂದ ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು, ಯೋಗದಿಂದ ದೇಹದ ವಿವಿಧ ಅಂಗಾಂಗಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದರಿಂದ ಮಾರಕವೆನಿಸಿರುವ ಕ್ಯಾನ್ಸರ್ ಕಾಯಿಲೆಯಿಂದ ದೂರವಾಗಬಹುದಾಗಿದ್ದು ಸಾರ್ವಜನಿಕರ ಸೇವೆಗೆ ಮುಡುಪಾಗಿರುವ ಪೊಲೀಸ್ ಇಲಾಖೆಯ ಸಿಬ್ಬಂದಿಯವರು ಇದನ್ನು ತಪ್ಪದೆ ಕಡ್ಡಾಯವಾಗಿ ಅನುಸರಿಸುವುದು ಉತ್ತಮ ಎಂದು ತಿಳಿಸಿದರು.
ತುಂಬಗಾನಳ್ಳಿಯ 12ನೇ ಕೆ.ಎಸ್.ಆರ್.ಪಿ ಪಡೆಯ ಕಮಾಂಡೆಂಟ್ ಎಸ್ಪಿ ಹಂಜಾ ಹುಸೇನ್ ಅವರು ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮನುಷ್ಯ ಪ್ರತಿನಿತ್ಯ ಯೋಗ ಧ್ಯಾನ ಮತ್ತು ಸರಿಯಾದ ನಿದ್ದೆ ಉತ್ತಮ ಆಹಾರ ಪದ್ಧತಿಯ ಮೂಲಕ ದೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು, ತಮ್ಮ ಶರೀರದಲ್ಲಿನ ಬದಲಾವಣೆಗಳ ಬಗ್ಗೆ ಗಮನ ನೀಡಬೇಕು ವಿವಿಧ ರೀತಿಯಲ್ಲಿ ಉಂಟಾಗುವ ಸಣ್ಣಪುಟ್ಟ ವ್ಯತ್ಯಾಸಗಳ ಬಗೆಗೂ ಗಮನಹರಿಸಿ ವೈದ್ಯರನ್ನು ಸಂಪರ್ಕಿಸಬೇಕು ಆಗ ಮಾನವ ಕುಲಕ್ಕೆ ಮಾರಕವಾಗಿರುವ ಈ ಕ್ಯಾನ್ಸರ್ ಕಾಯಿಲೆಯನ್ನು ದೂರ ಇಡಬಹುದಾಗಿದ್ದು ಈಗಾಗಲೇ ಕ್ಯಾನ್ಸರ್ ನಿಯಂತ್ರಣಕ್ಕಾಗಿ ಪ್ರಪಂಚದ ವಿವಿಧ ಮೂಲೆಗಳಿನ ವಿಜ್ಞಾನಿಗಳು ಅನೇಕ ರೀತಿಯಲ್ಲಿ ಸಂಶೋಧನೆಗಳನ್ನು ನಡೆಸಿಕೊಂಡು ಬರುತ್ತಿದ್ದು ಶೀಘ್ರದಲ್ಲಿಯೇ ಇದಕ್ಕೆ ಸೂಕ್ತ ಪರಿಹಾರ ಸಿಗುವ ಸಾಧ್ಯತೆಗಳಿವೆ ಆದರೂ ಮನುಷ್ಯ ಈ ಕ್ಯಾನ್ಸರ್ ಬಗೆಗಿನ ಅಸಡ್ಡೆಯನ್ನು ದೂರಗೊಳಿಸಿ ಶುಚಿತ್ವ ಕಾಪಾಡಿಕೊಂಡು ನಿರಂತರವಾಗಿ ಉತ್ತಮ, ಒಳ್ಳೆಯ ಆಹಾರ ಸೇವನೆಯಿಂದ ಸದೃಢವಾದ ನಮ್ಮ ಜೀವನ ಶೈಲಿಯನ್ನ ಕಟ್ಟಿಕೊಳ್ಳಬೇಕಾಗಿದೆ ಎಂದು ಸಲಾಕೆ ನೀಡಿದರು.
ಕಾರ್ಯಕ್ರಮದ ವೇಳೆ ಸಮಾಜಮುಖಿ ಫೌಂಡೇಶನ್ ನ ಅಧ್ಯಕ್ಷರಾದ ಎಸ್.ಎಂ ಇರ್ಫಾನ್ ರವರ ವತಿಯಿಂದ ಸಸಿ ನಿಟ್ಟಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು ಈ ಸಂದರ್ಭದಲ್ಲಿ ಎಸ್.ಜಿ ರೈಸ್ ಮಿಲ್ ಫಯಾಜ್ ಸೇರಿದಂತೆ ಮತ್ತಿತರರು ಇದ್ದರು.
