breaking news

Vote Chori: ಮತಗಳ್ಳತನ ವಿರೋಧಿಸಿ ಯುವ ಕಾಂಗ್ರೆಸ್ ಪೋಸ್ಟರ್ ಅಭಿಯಾನ

Vote Chori: ಮತಗಳ್ಳತನ ವಿರೋಧಿಸಿ ಯುವ ಕಾಂಗ್ರೆಸ್ ಪೋಸ್ಟರ್ ಅಭಿಯಾನ

Youth Congress Launches Poster Campaign Against Voter Fraud

ತುಮಕೂರು: ಮತಗಳ್ಳತನ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಜನಜಾಗೃತಿ ಅಭಿಯಾನದ ಅಂಗವಾಗಿ ನಗರದ ವಿವಿಧೆಡೆಗಳಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಅಭಿಮಾನ ಆರಂಭಿಸಿ ಮತಗಳ್ಳತನದ ವಿರುದ್ಧ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸಾರ್ವಜನಿಕರ ಗೋಡೆಗಳು, ವಾಹನಗಳ ಮೇಲೆ ಪೋಸ್ಟರ್ ಅಂಟಿಸಿ ಸಾರ್ವಜನಿಕರ ಗಮನ ಸೆಳೆದರು.

ಈ ವೇಳೆ ಮಾತನಾಡಿದ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಲಾಹಿ ಸಿಖಂದರ್, ನಮ್ಮ ನಾಯಕ ರಾಹುಲ್ ಗಾಂಧಿಯವರು ನಡೆಸುತ್ತಿರುವ ಮತಗಳ್ಳತನ ವಿರುದ್ಧದ ಹೋರಾಟ ಬೆಂಬಲಿಸಲು, ಹೋರಾಟದ ಉದ್ದೇಶವನ್ನು ಜನರಿಗೆ ಮನವರಿಕೆ ಮಾಡಿಕೊಡಲು ಪೋಸ್ಟರ್ ಅಭಿಯಾನ ಆರಂಭಿಸಲಾಗಿದೆ ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಕೂಟ ಇಂಡಿಯಾ ಒಕ್ಕೂಟಕ್ಕಿಂಥಾ ಕೇವಲ ಹೆಚ್ಚುವರಿಯಾಗಿ 30 ಸ್ಥಾನ ಪಡೆದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಚನೆಯಾಗಿದೆ. ಈ ವೇಳೆ ಇಂಡಿಯಾ ಒಕ್ಕೂಟದ 70ಕ್ಕೂ ಹೆಚ್ಚು ಅಭ್ಯರ್ಥಿಗಳು ಕೇವಲ 30 ಸಾವಿರ ಮತಗಳ ಅಂತರದಿಂದ ಪರಾಭವಗೊಂಡರು. ಈ ಚುನಾವಣೆಯಲ್ಲಿ ಚುನಾವಣಾ ಆಯೋಗ ಎನ್‌ಡಿಎ ಪರ ಕೆಲಸ ಮಾಡಿದ ಕಾರಣ ಮತಗಳ್ಳತನ ನಡೆದು ಫಲಿತಾಂಶ ಎನ್‌ಡಿಎ ಪರವಾಗಿದೆ ಎಂದು ರಾಹುಲ್ ಗಾಂಧಿಯವರು ದಾಖಲೆಗಳನ್ನು ಬಹುರಂಗಪಡಿಸಿದ್ದಾರೆ ಎಂದು ಹೇಳಿದರು.

ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ವಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಾನುಲ್ಲಾ, ಮುಖಂಡರಾದ ನಿಜಾನ್, ಇಬ್ರಾಯಿಂ ಮೊದಲಾದವರು ಈ ಅಭಿಯಾನದ ನೇತೃತ್ವ ವಹಿಸಿದ್ದರು.

Youth Congress Launches Poster Campaign Against Voter Fraud

Share this post

About the author

Leave a Reply

Your email address will not be published. Required fields are marked *