ಯುವತಿ ವಿಷಯಕ್ಕೆ ಗಲಾಟೆ: ಲಾಂಗು ಮಚ್ಚಿನಿಂದ ಯುವಕನ ಮೇಲೆ ಹಲ್ಲೆ; ವಿಡಿಯೋ ವೈರಲ್
ತುಮಕೂರಿನ ಸದಾಶಿವನಗರದ ಮುಖ್ಯರಸ್ತೆಯಲ್ಲಿರುವ ಯಾಸಿನ್ ಮಸೀದಿ ಪಕ್ಕದಲ್ಲಿ ಮುಬಾರಕ್ ಸಮೋಸ ಸೆಂಟರ್ (ಸಮೋಸ ಅಂಗಡಿನಲ್ಲಿ) ಶುಕ್ರವಾರ ರಾತ್ರಿ ಘಟನೆ ನಡೆದಿದ್ದು ಉಪ್ಪರಹಳ್ಳಿ ಮೂಲದ ಯುವತಿಯ ವಿಷಯಕ್ಕೆ ಸಂಬಂಧಿಸಿದಂತೆ ಸದಾಶಿವನಗರದ ಹಸ್ಸೇನ್ (25) ವರ್ಷದ ಯುವಕ ಇಸ್ಮಾಯಿಲ್ ನಗರದ ಬನಶಂಕರಿ ಎರಡನೇ ಹಂತದ ನಿವಾಸಿ ಆಯುಬ್ ರವರ ಮಗ ಶೋಹೈಬ್ ಎಂಬ ಯುವಕನಿಗೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ನಗರದ ಉಪ್ಪರಹಳ್ಳಿಯ ಯುವತಿಗೆ ಹಸೇನ್ ಕಿರುಕುಳ ನೀಡುತ್ತಿದ್ದ ಎಂಬ ವಿಚಾರದ ಗಲಾಟೆಯಲ್ಲಿ ಶೋಹೈಬ್ ಅಹಮದ್ ಎಂಬ ಯುವಕನೋರ್ವನ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ.
ಹಲ್ಲೆ ನಡೆಸಿದ ನಂತರ ಹಸೇನ್ ಮತ್ತು ಆತನ ಸ್ನೇಹಿತರು ಲಾಂಗು, ಮಚ್ಚು ಕೈಯಲ್ಲಿ ಹಿಡಿದು ರಸ್ತೆಯಲ್ಲಿ ಓಡಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆಯಲ್ಲಿ ಗಾಯಗೊಂಡ ಯುವಕನನ್ನು ತುಮಕೂರು ನಗರದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Tumkur crime incident -assaulted to youth by talwar – video viral on social media
The Crime Story | #youtubeshorts #ijtv #karnataka #tumkur #crime #news #story